Aquarium : ನೀವು ಸಾಗರಪ್ರೇಮಿಗಳೇ. ಮನೆಯೊಳಗೆ ಸಾಗರದ ತುಣುಕೊಂದನ್ನು ತಂದಿಟ್ಟುಕೊಳ್ಳಬೇಕೆ? ಅದಕ್ಕಾಗಿ ಏನು ಮಾಡುವಿರಿ? ಪುಟ್ಟ ಅಕ್ವೇರಿಯಂ ನಿರ್ಮಿಸಿಕೊಳ್ಳುವಿರಿ. ಅದರ ತುಂಬಾ ಮೀನು ಮತ್ತು ಸಾಗರದ ಜೀವಿಗಳನ್ನು ಸಾಕುವಿರಿ. ಆದರೂ ನಿಮಗೆ ಸಮಾಧಾನವಾಗದು. ಮತ್ತೆ ಮತ್ತೆ ಅಕ್ವೇರಿಯಂಗಳನ್ನು ತಂದಿಟ್ಟುಕೊಳ್ಳುತ್ತೀರಿ. ಆದರೂ ಸಾಕಾಗದು ಎನ್ನಿಸುತ್ತದೆ. ಹೀಗೆ ಮಾಡಿದರೆ ಹೇಗೆ? ಜಪಾನಿನಲ್ಲಿರುವ ಈ ಜಾಗಕ್ಕೆ ಹೋಗಿಬಿಟ್ಟರೆ? ಅಲ್ಲಿ ಏಕೆ ಎನ್ನುತ್ತೀರಾ? ಜಪಾನಿನ (Japan) ಹೋಟೆಲ್ ಒಂದರಲ್ಲಿ ಅಕ್ವೇರಿಯಂನೊಳಗೆ ಶೌಚಾಲಯವೊಂದನ್ನು (Toilet in Aquarium) ನಿರ್ಮಿಸಲಾಗಿದೆ. ನೆಟ್ಟಿಗರು ಕೌತುಕದಿಂದ ಇದನ್ನು ನೋಡುತ್ತಿದ್ದಾರೆ. ಏನೇನೇನೇನೋ ಪ್ರತಿಕ್ರಿಯಿಸುತ್ತಿದ್ದಾರೆ.
Thought I was going to drown. Two stars, would not poop here again. pic.twitter.com/YlYZsFJJAD
ಇದನ್ನೂ ಓದಿ— Jamie Gnuman197… (@JGnuman197) January 10, 2022
ಜಪಾನ್‌ನ ಹಿಪೊಪೊ ಪಾಪಾ ಕೆಫೆಯಲ್ಲಿರುವ (Hipopo Papa Cafe) ಅಕ್ವೇರಿಯಂ ಟಾಯ್ಲೆಟ್ ಮೂಲಕ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ನಿತ್ಯಜಂಜಾಟದಿಂದ ತುಸು ಹೊತ್ತಾದರೂ ಆರಾಮದಾಯಕ ಕ್ಷಣಗಳನ್ನು ಇಲ್ಲಿ ಕಳೆಯಬಹುದು ಎಂದು ಇದನ್ನು ನೋಡಿದ ಯಾರಿಗೂ ಅನ್ನಿಸದೇ ಇರದು ಅಥವಾ ಹೀಗೊಂದು ಅಕ್ವೇರಿಯಂ ಟಾಯ್ಲೆಟ್ ನಮ್ಮ ಮನೆಯಲ್ಲಿಯೂ ಇದ್ದರೇ? ಅಂತೆನ್ನಿಸಬಹುದು. ನೋಡಿ, ನಿಮ್ಮ ಅಕ್ಕ ಪಕ್ಕ, ನೆತ್ತಿ ಮೇಲೆಲ್ಲ ಈಜಾಡುವ ಬಣ್ಣಬಣ್ಣದ ಮೀನುಗಳ ರಾಶಿ. ಒಳಹೊಕ್ಕ ಒಡನೆಯೇ ಈ ಅವುಗಳು ಗಾಜಿಗೆ ಮುತ್ತಿಕೊಂಡು ಸ್ವಾಗತಿಸುವ ರೀತಿ…
ಇದನ್ನೂ ಓದಿ : Viral Video:”ನನಗ ಬರ್ಯಾಕ ಬರಲ್ಲಲೇಪಾ, ನಮ್ ಅಜ್ಜನ್ ಕೂಡೇ ಎಬಿಸಿಡಿ ಬರ್ಸೆಕೆಂಬರ್ತೇನಿ”
ಅರೆ! ಇದು ಸ್ಪಾಂಜ್ಬಾಬ್ ಶೌಚಾಲಯ (Spongebob, ಅಮೆರಿಕ ಮೂಲದ ಎನಿಮೇಟೆಡ್ ಕಾಮಿಡಿ ಟಿವಿ ಸೀರೀಸ್) ಇಲ್ಲಿ ಹೇಗೆ ಬಂದಿತು? ಎಂದು ಅಚ್ಚರಿ ಮತ್ತು ತಮಾಷೆಯಿಂದ ಕೇಳಿದ್ದಾರೆ. ಅಯ್ಯಯ್ಯೋ ಗೂಗ್ಲಿ ಕಣ್ಣುಗಳಿಂದ ನನ್ನನ್ನೇ ಈ ಮೀನುಗಳು ನೋಡುತ್ತಿವೆ. ನಾನು ಹೇಗೆ ಶೌಚಕ್ಕೆ ಹೋಗಲಿ? ಎಂದು ಮತ್ತೊಬ್ಬರು ಹಾಸ್ಯ ಮಾಡಿದ್ಧಾರೆ. ಸುತ್ತಮುತ್ತಲು ಅವರೆಲ್ಲಾ ಹೀಗೆ ಮುತ್ತಿಕ್ಕಿ ನೋಡುತ್ತಿರುವಾಗ ನಾನಂತೂ ಶೌಚ ಮಾಡಲು ಸಾಧ್ಯವಿಲ್ಲ ಎಂದಿದ್ಧಾರೆ ಅನೇಕರು.
ಈ ವಿಡಿಯೋ ನೋಡಿದ ನಿಮಗೆ ಏನನ್ನಿಸುತ್ತದೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:59 pm, Tue, 27 June 23