ಸಾಮಾನ್ಯವಾಗಿ ಚಿನ್ನ ಇಷ್ಟಪಡದವರು ಯಾರಿದ್ದಾರೆ ಹೇಳಿ! ಅದರಲ್ಲಂತೂ ಮಹಿಳೆಯರಿಗೆ ಆಭರಣಗಳೆಂದರೆ ಬಲು ಪ್ರೀತಿ. ಹಳೆ ಕಾಲದ ಒಡವೆ, ಈಗಿನ ಕಾಲದ ವೆರೈಟಿ ಡಿಸೈನ್ ಎಲ್ಲವೂ ನಮ್ಮ ಬಳಿ ಇರಬೇಕೆಂದು ಬಯಸುತ್ತಾರೆ. ಅದರಲ್ಲಿ ತಪ್ಪೇನಿಲ್ಲ. ಅದರಲ್ಲಂತೂ ಪ್ರಪಂಚದ ಇತಿಹಾಸದಲ್ಲಿ ಆಭರಣಗಳ ಮೂಲವನ್ನು ಕಂಡು ಹಿಡಿಯುವುದು ಕಷ್ಟ. ಇವುಗಳ ಬಳಕೆ ಶಿಲಾಯುಗದಲ್ಲೂ ಇತ್ತು. ಕಂಚಿನ ಯುಗಕ್ಕೂ ಮೊದಲು ಚಿನ್ನದ ಒಡವೆಗಳು ಪ್ರಚಲಿತವಾಗಿದ್ದವು ಎಂದು ತಿಳಿದು ಬಂದಿದೆ. ಹಾಗಾಗಿ ನಾವು ಮಾತ್ರವಲ್ಲ ಎಷ್ಟೋ ತಲೆಮಾರುಗಳಿಂದ ಚಿನ್ನವನ್ನು ಪ್ರೀತಿಸುತ್ತಾ ಬಂದವರಿದ್ದಾರೆ. ಈಗಂತೂ ಚಿನ್ನದ ಅಂಗಡಿಗಳಿಗೆ ಬರವಿಲ್ಲ. ನಿಮಗೆ ಬೇಕಾದ ರೀತಿಯಲ್ಲಿ ನೀವು ಆಭರಣಗಳನ್ನು ಮಾಡಿಸಿಕೊಳ್ಳಬಹುದು.
ಆದರೆ ಎಂದಾದರೂ ಈ ಆಭರಣಗಳನ್ನು ಹೇಗೆ ತಯಾರಿಸುತ್ತಾರೆ ಎಂಬುದನ್ನು ನೋಡಿದ್ದೀರಾ? ನೋಡಿದರೆ ನೀವು ದಂಗಾಗುವುದರಲ್ಲಿ ಸಂಶಯವಿಲ್ಲ. ಏಕೆಂದರೆ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಮತ್ತು ಚಿನ್ನವನ್ನು ಕೊಳ್ಳುವ ಕೆಲವರಿಗೆ ಈ ಬಗ್ಗೆ ಮಾಹಿತಿ ಇರಬಹುದು ಆದರೆ ಎಲ್ಲರಿಗೂ ಅದರ ಬಗ್ಗೆ ಅಷ್ಟಾಗಿ ತಿಳಿದಿರುವುದಿಲ್ಲ. ಬಂಗಾರದ ಮಾಟ, ಅದರ ನೋಟ ಇಷ್ಟ ಪಟ್ಟು ತರುತ್ತೇವೆ ಆದರೆ ಅದರ ಹಿಂದಿನ ಶ್ರಮವನ್ನು ನಾವು ಗಮನಿಸಿರುವುದಿಲ್ಲ. ಒಂದು ಅಂದವಾದ ಆಭರಣ ತೊಟ್ಟಾಗ, ಎಲ್ಲರೂ ಆ ಆಭರಣವನ್ನು ಹೊಗಳುವಾಗ ಒಮ್ಮೆಯಾದರೂ ಇದನ್ನು ತಯಾರಿಸುವವನಿಗೆ ಧನ್ಯವಾದ ಹೇಳಲೇಬೇಕು. ಹಾಗಾದರೆ ಇದನ್ನು ಹೇಗೆ ತಯಾರಿಸುತ್ತಾರೆ? ಡಿಸೈನ್ ಗಳನ್ನೂ ಯಾವ ರೀತಿ ಮಾಡಬಹುದು ಎಂಬ ಕುತೂಹಲ ನಿಮಗಿದ್ದಲ್ಲಿ ಈ ವಿಡಿಯೋವನ್ನು ತಪ್ಪದೇ ನೋಡಿ.
ಇದನ್ನೂ ಓದಿ: ಬಸ್ಸಿನ ಫುಟ್ ಬೋರ್ಡ್ ಮೇಲೆ ನಿಂತು ಪ್ರಯಾಣಿಸಿದ ವಿದ್ಯಾರ್ಥಿಗಳಿಗೆ ಕಪಾಳಮೋಕ್ಷ: ಬಿಜೆಪಿ ನಾಯಕಿಯ ಬಂಧನ
ಕಾರ್ತಿಕ್ ಮೊಂಡಲ್ (Kartick Mondal (Gold)) ಎಂಬ ಯೂಟ್ಯೂಬ್ ಶಾರ್ಟ್ಸ್ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು 171 ಸಾವಿರಕ್ಕೂ ಹೆಚ್ಚು ಜನ ಇದನ್ನು ಇಷ್ಟಪಟ್ಟಿದ್ದಾರೆ. ಈ ವಿಡಿಯೋದಲ್ಲಿ ಕಿವಿಯೋಲೆ ಮಾಡುತ್ತಿದ್ದು ಸುಂದರವಾದ ವಿನ್ಯಾಸದಲ್ಲಿ ಮೂಡಿ ಬಂದಿದೆ. ಚಿನ್ನದ ಓಲೆ ಇಷ್ಟಪಡುವವರು ಅದನ್ನು ತಯಾರಿಸುವ ರೀತಿಯನ್ನೂ ನೋಡಬಹುದಾಗಿದೆ. ಈ ಶಾರ್ಟ್ಸ್ಗೆ ಅನೇಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದು ಈ ರೀತಿಯ ಇನ್ನು ಹೆಚ್ಚಿನ ವಿಡಿಯೋ ಬರಲಿ ಎಂದಿದ್ದಾರೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:42 pm, Sat, 4 November 23