Viral Video: ಅರುಣಾಚಲ ಪ್ರದೇಶದ ಪುಟ್ಟ ಬಾಲಕ ಹಾಡಿದ ಗಲ್ಲಿ ಬಾಯ್ ಚಿತ್ರದ ರ‍್ಯಾಪ್‌ ಸಾಂಗ್ ಫುಲ್ ವೈರಲ್

ಪ್ರತಿಭೆಗೆ ಯಾವುದೇ ಕೊರತೆಯಿಲ್ಲ. ಅರುಣಾಚಲ ಪ್ರದೇಶದ ಪುಟ್ಟ ಬಾಲಕ ರ‍್ಯಾಪ್‌ ಸಾಂಗ್ ಹಾಡಿದ್ದಾನೆ ಎಂದು ವಿಡಿಯೋ ಶೀರ್ಷಿಕೆ ನೀಡಿಲಾಗಿದೆ. ನೆಟ್ಟಿಗರ ಹೃದಯ ಗೆದ್ದ ವಿಡಿಯೋ ನೋಡಿ..

Viral Video: ಅರುಣಾಚಲ ಪ್ರದೇಶದ ಪುಟ್ಟ ಬಾಲಕ ಹಾಡಿದ ಗಲ್ಲಿ ಬಾಯ್ ಚಿತ್ರದ ರ‍್ಯಾಪ್‌ ಸಾಂಗ್ ಫುಲ್ ವೈರಲ್
Edited By:

Updated on: Oct 06, 2021 | 11:44 AM

ಮಕ್ಕಳು ಹಾಡುವ ಜತೆಗೆ ನೃತ್ಯ ಮಾಡುವ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಹರಿದಾಡುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ವಿಡಿಯೋಗಳಂತೂ ಭಾರೀ ಇಷ್ಟವಾಗಿ ಬಿಡುತ್ತವೆ. ಇದೀಗ ಆ ಪಟ್ಟಿಗೆ ಸೇರ್ಪಡೆಯಾಗಿದ್ದು, 2019ರಲ್ಲಿ ಬಿಡುಗಡೆಗೊಂಡ ಗಲ್ಲಿ ಬಾಯ್ ಚಿತ್ರದ ಜನಪ್ರಿಯ ಹಾಡು ಅಪ್ನಾ ಟೈಮ್ ಆಯೇಗಾ ಹಾಡನ್ನು ಬಾಲಕ ರ‍್ಯಾಪ್‌ ಮಾಡಿದ್ದಾನೆ. ಈ ಹಾಡು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.

ಈಶಾನ್ಯ ಭಾಗದ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುತ್ತಿರುವ ಪುಟ್ಟ ಬಾಲಕ ರ‍್ಯಾಪ್‌ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾಲಕನ ಉತ್ಸಾಹದ ಅಭಿನಯವು ನೆಟ್ಟಿಗರ ಹೃದಯ ಗೆದ್ದಿದೆ. ಪ್ರತಿಭೆಗೆ ಯಾವುದೇ ಕೊರತೆಯಿಲ್ಲ. ಅರುಣಾಚಲ ಪ್ರದೇಶದ ಪುಟ್ಟ ಬಾಲಕ ರ‍್ಯಾಪ್‌ ಸಾಂಗ್ ಹಾಡಿದ್ದಾನೆ ಎಂದು ವಿಡಿಯೋ ಶೀರ್ಷಿಕೆ ನೀಡಿಲಾಗಿದೆ. ಮೂಲತಃ ಜನಪ್ರಿಯ ಚಿತ್ರ ಗಲ್ಲಿ ಬಾಯ್​ನ ಅಪ್ನಾ ಟೈಮ್ ಆಯೇಗಾ ಸಾಹಿತ್ಯವನ್ನು ಬಾಲಕ ರ‍್ಯಾಪ್‌ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಬಾಲಕನ ಸ್ನೇಹಿತರು ಆತನ ಹಾಡಿಗೆ ಬೆಂಬಲಿಸುತ್ತಿರುವುದನ್ನು ದೃಶ್ಯದಲ್ಲಿ ನೋಡಬಹುದು. 30 ಸೆಕೆಂಡುಗಳ ವಿಡಿಯೋ ಕ್ಲಿಪ್​ನಲ್ಲಿ ಗಮನಿಸುವಂತೆ 1,700ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹುಡುಗನ ಪ್ರತಿಭೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಓರ್ವ ಬಳಕೆದಾರರು ಫುಲ್ ಜೋಶ್ ಎಂದು ಹೇಳಿದ್ದಾರೆ. ಅದ್ಭುತ ಪ್ರತಿಭೆ ಎಂದು ಇನ್ನೋರ್ವರು ಹೇಳಿದ್ದಾರೆ. ದೃಶ್ಯ ಮೆಚ್ಚುಗೆಯಾಗಿದೆ ಎಂಬ ಪ್ರತಿಕ್ರಿಯೆಗಳೂ ಸಹ ಕೇಳಿ ಬಂದಿವೆ. ಒಟ್ಟಿನಲ್ಲಿ ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದ್ದು ಫುಲ್ ವೈರಲ್ ಆಗಿದೆ.

ಇದನ್ನೂ ಓದಿ:

Viral Video: ಕತ್ತೆಯನ್ನು ಅಪ್ಪಿಕೊಂಡು ಲಾಲಿ ಹಾಡಿ ಮಲಗಿಸಿದ ವ್ಯಕ್ತಿ; ಹೃದಯಸ್ಪರ್ಶಿ ಈ ವಿಡಿಯೋವನ್ನು ನೋಡಿದ್ದೀರಾ?

Viral Video: ತಲೆ ಕೂದಲನ್ನು ಹೀಗೂ ಕತ್ತರಿಸಬಹುದು; ಒಮ್ಮೆ ನೋಡಿ ಬಿಡಿ