ಸಾಮಾನ್ಯವಾಗಿ ಪತಿ ತನ್ನ ಪತ್ನಿಗೆ ಹಿಂಸೆ ಕೊಟ್ಟಿರುವ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ, ಆದರೆ ಇಲ್ಲೊಬ್ಬ ಪತ್ನಿ ಪತಿ ಕಚೇರಿಯಿಂದ ಮನೆಗೆ ಬರುವುದನ್ನೇ ಕಾಯುತ್ತಿದ್ದು, ಬಂದ ಕೂಡಲೇ ಹಿಗ್ಗಾಮುಗ್ಗ ಥಳಿಸಿದ್ದಾಳೆ. ಗಂಡ ಮನೆಗೆ ಬಂದು ಟೇಬಲ್ ಮೇಲೆ ಹೆಲ್ಮೆಟ್ ಇಟ್ಟ ತಕ್ಷಣ ಹೆಂಡತಿ ಓಡಿ ಬಂದು ಥಳಿಸಲು ಶುರು ಮಾಡುತ್ತಾಳೆ. ಅನೇಕ ಬಳಕೆದಾರರು ಈ ವೀಡಿಯೊವನ್ನು ನೋಡಿ ಆಶ್ಚರ್ಯಚಕಿತರಾದರು ಮತ್ತು ಆತ ಅಂಥದ್ದೇನು ಮಾಡಿದ್ದ, ಆಕೆ ಯಾಕೆ ಅಷ್ಟು ಕೋಪಗೊಂಡಳು ಎಂದು ತಲೆ ಕೆಡಿಸಿಕೊಂಡಿದ್ದಾರೆ.
ಮೋಸ ಮಾಡುವಾಗ ಹೆಂಡತಿ ಪತಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿರಬಹುದು ಎಂದು ಕೆಲವರು ಭಾವಿಸಿದರು, ಆದ್ದರಿಂದ ಅವಳು ಹಾಗೆ ಮಾಡಿದ್ದಾಳೆ ಎಂದು ಹೇಳಿದ್ದರು.
ಇನ್ನು ಕೆಲವರು ಪತಿಯನ್ನು ಹೊಗಳಿ, ಪತಿ ಪತ್ನಿಯನ್ನು ತುಂಬಾ ಪ್ರೀತಿಸುತ್ತಾನೆ ಹಾಗಾಗಿ ಮೌನವಾಗಿ ಅವಳೆಷ್ಟು ಹೊಡೆಯುತ್ತಿದ್ದರೂ ಸಹಿಸಿಕೊಂಡು ಸುಮ್ಮನಿದ್ದರು ಎಂದು ಹೇಳಿದ್ದರು.
ಮತ್ತಷ್ಟು ಓದಿ: Viral Video: ಹಸಿದ ಪುಟ್ಟ ಹೊಟ್ಟೆಗಳು: ಹೊಲದಲ್ಲಿ ಹಾರುವ ಮಳೆ ಹುಳುಗಳನ್ನು ಹೆಕ್ಕಿ ತಿನ್ನುವ ಅಕ್ಕ, ತಮ್ಮ
ಈ ವೀಡಿಯೊವನ್ನು ಕ್ರೇಜಿ ಕ್ಲಿಪ್ ಹೆಸರಿನ ಟ್ವಿಟರ್ ಖಾತೆಯೊಂದಿಗೆ ಹಂಚಿಕೊಳ್ಳಲಾಗಿದೆ. ಇದುವರೆಗೆ ಈ ವಿಡಿಯೋಗೆ 50 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಬಂದಿದ್ದು, ಸುಮಾರು 17 ಸಾವಿರ ಮಂದಿ ಈ ಪೋಸ್ಟ್ ಅನ್ನು ಲೈಕ್ ಮಾಡಿದ್ದಾರೆ.
Wife beats husband immediately after he gets home pic.twitter.com/I32rzrKoQa
— Crazy Clips (@crazyclipsonly) May 6, 2023
ಪತಿಗೆ ಥಳಿಸಿದ್ದು ಏಕೆ?
ವಾಸ್ತವವಾಗಿ, ಪತಿ 14 ಗಂಟೆಗಳ ಪಾಳಿಯಲ್ಲಿ ಕೆಲಸ ಮಾಡಿದ ನಂತರ ಮನೆಗೆ ಮರಳಿದ್ದಾರೆ ಎಂದು ಕೆಲವು ಮಾಧ್ಯಮ ವರದಿಗಳಲ್ಲಿ ಹೇಳಲಾಗಿದೆ.
ಬೆಳಗ್ಗೆ ಕಚೇರಿಗೆ ಹೋಗುವಾಗ ಮನೆಯ ತ್ಯಾಜ್ಯವನ್ನು ತೆಗೆದುಕೊಂಡು ಹೋಗುವುದನ್ನು ಮರೆತಿದ್ದರು. ಈ ಕಾರಣಕ್ಕೆ ಕೋಪಗೊಂಡ ಪತ್ನಿ ಆತನಿಗೆ ಥಳಿಸಿದ್ದಾರೆ. ಆದಾಗ್ಯೂ, ಈ ವರದಿ ಎಷ್ಟು ನಿಖರವಾಗಿದೆ ಎಂಬುದು ತಿಳಿದಿಲ್ಲ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ