ಹೊಸ ಅವತಾರದಲ್ಲಿ ಟೀ ಕುಡಿಯಲು ಕಷ್ಟ ಪಡುತ್ತಿರುವ ಊರ್ಫಿ ಜಾವೇದ್; ವಿಡಿಯೋ ವೈರಲ್
ಸೋಶಿಯಲ್ ಮೀಡಿಯಾಗಳಲ್ಲಿ ತನ್ನ ಅರೆಬರೆ ಬಟ್ಟೆಗಳ ಮೂಲಕ ಸದಾ ಸುದ್ದಿಯಲ್ಲಿರುವ ನಟಿ ಊರ್ಫಿ ಜಾವೇದ್. ತನ್ನ ವಿಚಿತ್ರ ಬಟ್ಟೆಗಳಿಂದಲೇ ಪೋಟೋಗೆ ಫೋಸ್ ಕೊಟ್ಟು ಟ್ರೋಲ್ಗೆ ಗುರಿಯಾಗುತ್ತಾರೆ.
ಸೋಶಿಯಲ್ ಮೀಡಿಯಾಗಳಲ್ಲಿ ತನ್ನ ಅರೆಬರೆ ಬಟ್ಟೆಗಳ ಮೂಲಕ ಸದಾ ಸುದ್ದಿಯಲ್ಲಿರುವ ನಟಿ ಊರ್ಫಿ ಜಾವೇದ್. ತನ್ನ ವಿಚಿತ್ರ ಬಟ್ಟೆಗಳಿಂದಲೇ ಪೋಟೋಗೆ ಫೋಸ್ ಕೊಟ್ಟು ಟ್ರೋಲ್ಗೆ ಗುರಿಯಾಗುತ್ತಾರೆ. ಇದೀಗಾ ಅಂತದ್ದೇ ಬಟ್ಟೆಯ ಮೂಲಕ ಇದೀಗಾ ಬಾರೀ ಸುದ್ದಿಯಲ್ಲಿದ್ದಾರೆ. ಹೌದು ಊರ್ಫಿ ಟೀ ಕುಡಿಯಲು ಕಷ್ಟ ಪಡುತ್ತಿರುವ ವಿಡಿಯೋ ಇದೀಗಾ ಎಲ್ಲೆಡೆ ವೈರಲ್ ಆಗಿದೆ. ಇತ್ತೀಚೆಗಷ್ಟೇ ಊರ್ಫಿ ಕಪ್ಪು ಬಣ್ಣದ ವಿಚಿತ್ರವಾದ ಬಟ್ಟೆಯಲ್ಲಿ ಓಡಾಡುತ್ತಿರುವ ವಿಡಿಯೋ ಕಂಡುಬಂದಿದೆ. ಇನ್ನೊಂದೆಡೆ ಈಕೆ ಈ ಬಟ್ಟೆಯಿಂದಲೇ ಟೀ ಕುಡಿಯಲು ಕಷ್ಟ ಪಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆ ವಿಡಿಯೋ ಇಲ್ಲಿದೆ ನೋಡಿ.
View this post on Instagram
ಇದನ್ನೂ ಓದಿ: 10 ಸಾವಿರ ಅಡಿ ಎತ್ತರದಿಂದ ಜಿಗಿಯುವಾಗ ಮೇಕ್ಅಪ್ ಮಾಡಿಕೊಂಡ ಮಹಿಳೆ; ವಿಡಿಯೋ ವೈರಲ್
ಈ ವಿಡಿಯೋವನ್ನು ಸ್ವತಃ ಊರ್ಫಿ ಜಾವೇದ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಹಂಚಿಕೊಂಡ ಒಂದೇ ದಿನದಲ್ಲಿ ಭಾರೀ ವೈರಲ್ ಆಗಿದೆ. ಒಂದೇ ದಿನದಲ್ಲಿ ಈ ವಿಡಿಯೋ 1,49,987 ಲೈಕುಗಳನ್ನು ಪಡೆದುಕೊಂಡಿದೆ. ಈ ಬಟ್ಟೆಯನ್ನು ಮುಖಕ್ಕೆ ಅಡ್ಡಲಾಗಿ ನೆಟ್ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಪ್ರತೀ ಭಾರೀ ವಿಚಿತ್ರವಾದ ಬಟ್ಟೆಯಿಂದಲೇ ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳುವ ಈಕೆ, ಇದೀಗಾ ಈ ಅವತಾರ ಕಂಡು ನೆಟ್ಟಿಗರು, ಒಂದು ಟೀ ಕುಡಿಯಲು ಕಷ್ಟ ಪಡುವ ಈ ಬಟ್ಟೆಯನ್ನು ಯಾಕೆ ಧರಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 12:14 pm, Sun, 14 May 23