Viral Video: ಆನೆಯು ಮರದಿಂದ ಹಲಸಿನ ಹಣ್ಣು ಕೀಳುವುದ ಎಲ್ಲಾರೂ ಕಂಡಿರಾ
ಆನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗುತ್ತಿದೆ, ಅದು ಮರದಿಂದ ಹಲಸಿನ ಹಣ್ಣನ್ನು ಕೀಳುವ ವಿಡಿಯೋ ತುಂಬಾ ವೈರಲ್ ಆಗಿದೆ. ನೀವು ಊಹಿಸಲೂ ಸಾಧ್ಯವಾಗದಷ್ಟು ಈಸಿಯಾಗಿ ಆನೆಯು ಮರದಿಂದ ಹಲಸಿನಹಣ್ಣುನ್ನು ಕೀಳುತ್ತದೆ.
ಆನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗುತ್ತಿದೆ, ಅದು ಮರದಿಂದ ಹಲಸಿನ ಹಣ್ಣನ್ನು ಕೀಳುವ ವಿಡಿಯೋ ತುಂಬಾ ವೈರಲ್ ಆಗಿದೆ. ನೀವು ಊಹಿಸಲೂ ಸಾಧ್ಯವಾಗದಷ್ಟು ಈಸಿಯಾಗಿ ಆನೆಯು ಮರದಿಂದ ಹಲಸಿನಹಣ್ಣುನ್ನು ಕೀಳುತ್ತದೆ. ವೈರಲ್ ಆಗಿರುವ ವಿಡಿಯೋದಲ್ಲಿ ಆನೆ ಹಲಸು ತಿನ್ನಲು ಯತ್ನಿಸುತ್ತಿರುವುದನ್ನು ಕಾಣಬಹುದು. ಆದರೆ ಅದರ ಸೊಂಡಿಲು ಮರವನ್ನು ತಲುಪುತ್ತಲೇ ಇಲ್ಲ. ಆಗ ಆನೆ ತನ್ನ ಬುದ್ಧಿವಂತಿಕೆ ಪ್ರದರ್ಶಿಸುತ್ತದೆ.
30 ಸೆಕೆಂಡುಗಳ ವೀಡಿಯೊದಲ್ಲಿ, ಆನೆಯು ತನ್ನ ಸೊಂಡಿಲು ಬಳಸಿ ಮರದಿಂದ ಹಲಸಿನ ಹಣ್ಣನ್ನು ಕೀಳಲು ಪ್ರಯತ್ನಿಸುತ್ತಿರುವುದನ್ನು ನೀವು ನೋಡಬಹುದು.
ಮತ್ತಷ್ಟು ಓದಿ:Viral Video; ಅರೇ ಈ ಹುಲ್ಲು ಯಾಕೆ ಬರುತ್ತಿಲ್ಲ? ಕನ್ಫ್ಯೂಷನ್ನಲ್ಲಿ ಶ್ವಾನ
ಆನೆ ಮೊದಲು ಮರವನ್ನು ಅಲುಗಾಡಿಸುತ್ತದೆ, ಆದರೂ ಹಲಸಿನ ಕಾಯಿ ಕೆಳಗೆ ಬೀಳುವುದಿಲ್ಲ, ತನ್ನ ಸೊಂಡಿಲೂ ಅಲ್ಲಿಯವರೆಗೆ ತಲುಪುವುದಿಲ್ಲ. ಕೊನೆಗೆ ತನ್ನ ಕಾಲನ್ನು ಮರದ ಮೇಲಿಟ್ಟು ಸಂಪೂರ್ಣ ಭಾರ ಹಾಕುತ್ತದೆ ಆಗ ಮರ ಮುಂಭಾಗ ಬಾಗುತ್ತದೆ, ಆನೆಯು ಹಿಂದಕ್ಕೆ ಬಾಗಿ ತನ್ನ ಸೊಂಡಿಲನ್ನು ಮೇಲಕ್ಕೆತ್ತಿ ಹಲಸಿನಹಣ್ಣನ್ನು ಕೊಯ್ಯುತ್ತದೆ.
Using hind legs to jack up for the jackfruit?? Hind legs are super strong in elephants. Imagine supporting more than 4000kgs here. pic.twitter.com/YpxdI1aJ7S
— Susanta Nanda (@susantananda3) May 8, 2023
ಈ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಸುಶಾಂತ ನಂದಾ ಪೋಸ್ಟ್ ಮಾಡಿದ್ದಾರೆ, ಆನೆಯು ತನ್ನ ಹಿಂಗಾಲುಗಳ ಸಹಾಯದಿಂದ ಹಲಸಿನ ಹಣ್ಣನ್ನು ತಲುಪಲು ತನ್ನನ್ನು ಮೇಲಕ್ಕೆತ್ತುತ್ತದೆ ಎಂದು ಅವರು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಆ ಎರಡೂ ಕಾಲುಗಳಲ್ಲಿ 4000 ಕೆಜಿಗೂ ಹೆಚ್ಚು ತೂಕವಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ