Viral Video : ಧಡಾರನೆ ಬಿದ್ದರೂ ತಾನೂ ನಕ್ಕು ನೆಟ್ಟಿಗರನ್ನು ನಗಿಸಿದ ಈ ಮಹಿಳೆ

Sliding : ಇನ್ನೊಬ್ಬರು ಬಿದ್ದಾಗ ನಗುವವರು ಬಹಳಷ್ಟು ಜನರಿದ್ದಾರೆ. ಆದರೆ ನಾವೇ ಬಿದ್ದು ನಾವೇ ನಗುವುದು ಯಾವಾಗ? ಈ ಮಹಿಳೆ ಬಿದ್ದ ಪರಿಗೆ ಮೊದಲಿಗೆ ಗಾಬರಿಯಾಗುವುದುಂಟು. ನಂತರ? ವಿಡಿಯೋ ನೋಡಿ.

Viral Video : ಧಡಾರನೆ ಬಿದ್ದರೂ ತಾನೂ ನಕ್ಕು ನೆಟ್ಟಿಗರನ್ನು ನಗಿಸಿದ ಈ ಮಹಿಳೆ
ಬಿದ್ದರೂ ನಗು ಬಂತಲ್ಲ!
Updated By: ಶ್ರೀದೇವಿ ಕಳಸದ

Updated on: Sep 20, 2022 | 2:41 PM

Viral Video : ಎಷ್ಟೇ ವಯಸ್ಸಾದರೂ ಬಾಲ್ಯದ ಆಟಗಳಿಗೆ ತೆರೆದುಕೊಳ್ಳಲು ಮನಸ್ಸು ಬಯಸುತ್ತಲೇ ಇರುತ್ತದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ. ಈ ಮಹಿಳೆ ಜಾರುಬಂಡಿಯಲ್ಲಿ ಕುಳಿತು ಜಾರುವಾಗ ಮುಗ್ಗರಿಸಿ ಬಿದ್ದ ರೀತಿಗೆ ಯಾರಿಗೂ ಗಾಬರಿಯಾಗುತ್ತದಲ್ಲವೆ? ಆದರೆ ತಾನು ಬಿದ್ದಿದ್ದಕ್ಕೆ ತಮಗೇ ನಗು ಬಂದಿದೆ ಇವರಿಗೆ. ಅವರ ನಗು ನೋಡಿಯೇ ವಿಡಿಯೋ ನೋಡುವವರಿಗೂ ನಗು ಬಂದಿರಲು ಸಾಕು. ಮಕ್ಕಳೊಂದಿಗೆ ಮಕ್ಕಳಾಗಿ ಈ ಮಹಿಳೆ ಜಾರುಬಂಡಿಯಾಡುವಾಗ ಹೀಗೆಲ್ಲ ಆಗುತ್ತದೆ ಎಂದು ಯಾರು ಎಣಿಸಿರಲು ಸಾಧ್ಯ?

 

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಹೇಗೆ ತಳ್ಳಿದಿರಿ ನೀವು ಅಂತ ಒಮ್ಮೆ ಮಕ್ಕಳೆಡೆ ನೋಡಿ ನಗುತ್ತಾರೆ ಈ ಮಹಿಳೆ. ಬಿದ್ದಿದ್ದಕ್ಕೆ ನಾಚಿಕೆಯೂ ಆಗುತ್ತದೆ. ಎಲ್ಲ ಸೇರಿ ಒಟ್ಟಿನಲ್ಲಿ ನಕ್ಕುಬಿಡುತ್ತಾರೆ. 8,000ಕ್ಕೂ ಹೆಚ್ಚು ವಿಡಿಯೋ ಅನ್ನು ಜನ ಇಷ್ಟಪಟ್ಟಿದ್ದಾರೆ. ಹೀಗೆ ಬಿದ್ದರೂ ಅವರಿಗೆ ಏನೂ ಆಗಿಲ್ಲವಲ್ಲ, ನಗುತ್ತಿದ್ದಾರೆ ಸದ್ಯ! ಎಂದು ನೆಟ್ಟಿಗರು ಸಮಾಧಾನಪಟ್ಟುಕೊಂಡಿದ್ದಾರೆ.

ಬಿದ್ದರೂ ನಗುತ್ತಲೇ ಇರಬೇಕು ಎನ್ನುತ್ತಾರಲ್ಲ. ಅದಕ್ಕೆ ಇದನ್ನು ಉದಾಹರಿಸಬಹುದಲ್ಲ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ 

Published On - 2:41 pm, Tue, 20 September 22