AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : 20 ಸೆಕೆಂಡುಗಳಲ್ಲಿ 40 ಬಾರಿ ಮಹಿಳೆಯಿಂದ ಚಪ್ಪಲಿಸೇವೆ ಪಡೆದ ವ್ಯಕ್ತಿ

Molesting : ಕಿರುಕುಳ ನೀಡಿದ ವ್ಯಕ್ತಿಯನ್ನು ಹೀಗೆ ಸಾರ್ವಜನಿಕವಾಗಿ ಈ ಮಹಿಳೆ ಥಳಿಸಿದ್ದಕ್ಕೆ ನೆಟ್ಟಿಗರು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನೀವೇನಂತೀರಿ?

Viral Video : 20 ಸೆಕೆಂಡುಗಳಲ್ಲಿ 40 ಬಾರಿ ಮಹಿಳೆಯಿಂದ ಚಪ್ಪಲಿಸೇವೆ ಪಡೆದ ವ್ಯಕ್ತಿ
ಕಿರುಕುಳ ನೀಡಿದ ವ್ಯಕ್ತಿಯನ್ನು ಚಪ್ಪಲಿಯಿಂದ ಥಳಿಸುತ್ತಿರುವ ಮಹಿಳೆ
TV9 Web
| Edited By: |

Updated on:Sep 20, 2022 | 1:29 PM

Share

Viral Video : ಪುರುಷನೊಬ್ಬ ತನಗೆ ಕಿರುಕುಳ ನೀಡಿದನೆಂದು ಆರೋಪಿಸಿದ ಮಹಿಳೆಯೊಬ್ಬಳು 20 ಸೆಕೆಂಡುಗಳ ಕಾಲ ಆತನನ್ನು 40 ಬಾರಿ ಚಪ್ಪಲಿಯಿಂದ ಥಳಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ದೃಶ್ಯವನ್ನು ಒಳಗೊಂಡ ವಿಡಿಯೋ ಈಗ ವೈರಲ್ ಆಗಿದೆ. ಕಿರುಕುಳ ನೀಡಿದ ವ್ಯಕ್ತಿ ನೆಲದ ಮೇಲೆ ತಲೆ ತಗ್ಗಿಸಿಕೊಂಡು ಕುಳಿತಿದ್ದಾನೆ. ಕೋಪಗೊಂಡ ಮಹಿಳೆ ತನ್ನೆರಡೂ ಚಪ್ಪಲಿಗಳಿಂದ ಆಕ್ರೋಶಭರಿತಳಾಗಿ ಸತತವಾಗಿ ಹೊಡೆಯುತ್ತಿದ್ದಾಳೆ. ನ್ಯೂಸ್​ 18 ವರದಿ ಪ್ರಕಾರ, ಉತ್ತರ ಪ್ರದೇಶದ ಜಾಲೌನ್ ಜಿಲ್ಲೆಯ ಉರಯೀ ನಗರಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ಮಹಿಳೆಯನ್ನು ಚುಡಾಯಿಸಿದ್ದಾನೆ ಎನ್ನುವುದು ತಿಳಿದು ಬಂದಿದೆ.

ಹೀಗೆ ಸರಿಯಾಗಿ ಥಳಿಸಿದ ನಂತರ ಈ ವ್ಯಕ್ತಿಯನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಈ ವಿಡಿಯೋ ಈತನಕ 50,000 ಕ್ಕೂ ಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟಿದೆ. 530 ಕ್ಕೂ ಹೆಚ್ಚು ಮರುಟ್ವೀಟ್​ ಹೊಂದಿದೆ. ಅನೇಕ ನೆಟ್ಟಿಗರು, ಚುಡಾಯಿಸಿದ್ದಕ್ಕೆ ಸರಿಯಾದ ಶಿಕ್ಷೆಯಾಗಿದೆ ಈ ವ್ಯಕ್ತಿಗೆ. ಮಹಿಳೆ ಹೀಗೆ ಅವನಿಗೆ ಚಪ್ಪಲಿಯಿಂದ ಹೊಡೆದಿರುವುದು ಸರಿ ಇದೆ ಎಂದಿದ್ದಾರೆ. ಜನ್ಮದಲ್ಲಿ ಇನ್ನು ಯಾವತ್ತೂ ಈ ವ್ಯಕ್ತಿ ಇಂಥ ಕೆಲಸ ಮಾಡಲಾರ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಪ್ರತಿಯೊಬ್ಬ ಮಹಿಳೆಯೂ ಇಂಥ ಧೈರ್ಯ ತೋರಬೇಕು. ಆಗ ಮಾತ್ರ ಅತ್ಯಾಚಾರ, ಕಿರುಕುಳ ಸಮಸ್ಯೆಗಳಿಗೆ ಉತ್ತರ ದೊರೆಯುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ಏನೇ ಆದರೂ ಈ ಮಹಿಳೆ ಹೀಗೆ ಮಾಡಬಾರದಿತ್ತು. ಕಾನೂನಿಗೆ ಈ ವಿಷಯ ಬಿಡಬೇಕು ಎಂದು ಮಗದೊಬ್ಬರು ಹೇಳಿದ್ಧಾರೆ.

ಅನುಭವಿಸಿದವರಿಗೇ ಗೊತ್ತು ಆ ಪರಿಸ್ಥಿತಿ!

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:29 pm, Tue, 20 September 22

ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ