Trending : 2.4 ಲಕ್ಷ ಟಿಪ್ಸ್ ಕೊಟ್ಟು ವಾಪಸ್ ಬೇಕೆಂದ ಗ್ರಾಹಕರ ಮೇಲೆ ಕೇಸ್ ಹಾಕಿದ ರೆಸ್ಟೋರೆಂಟ್ ಮಾಲಿಕ
Tips for Jesus : ಕೆಲ ವಾರಗಳ ನಂತರ TipsForJesus ಎಂಬ ಹ್ಯಾಶ್ಟ್ಯಾಗಿನಲ್ಲಿ ಇನ್ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಕಾಣಿಸಿಕೊಂಡಾಗ ಈ ಘಟನೆಗೆ ವಿಚಿತ್ರ ತಿರುವು ಒದಗಿದೆ.

Trending : ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿರುವ ಆಲ್ಫ್ರೆಡೋಸ್ ರೆಸ್ಟೋರೆಂಟ್ ಎರಿಕ್ ಸ್ಮಿತ್ ಎಂಬ ಗ್ರಾಹಕರಿಗೆ ಹೋಮ್ಮೇಡ್ ಸ್ಟ್ರೊಂಬೋಲಿ (ಇಟಾಲಿಯನ್ ಖಾದ್ಯ)ಯನ್ನು ಕೊಟ್ಟಿತು. ಆಗ ಎರಿಕ್ 2.4 ಲಕ್ಷ ಹಣವನ್ನು ಟಿಪ್ಸ್ ರೂಪದಲ್ಲಿ ಕೊಡಲು ಕ್ರೆಡಿಟ್ ಕಾರ್ಡ್ ಬಳಸಿದರು. ರೆಸ್ಟೋರೆಂಟ್ ಮಾಲೀಕ, ಮರಿಯಾನಾ ಲ್ಯಾಂಬರ್ಟ್ ಎಂಬ ಪರಿಚಾರಿಕೆಗೆ ತನ್ನ ಅಕೌಂಟಿನಿಂದ ಟಿಪ್ಸ್ ಹಣ ತಲುಪಿಸಿದರು. ಅದು ಆಕೆಯ ಸಂತೋಷದ ಬಾಬತ್ತು ಎಂಬ ಕಾರಣಕ್ಕಾಗಿ ತಕ್ಷಣವೇ ಆ ನಿರ್ಧಾರ ಕೈಗೊಂಡರು. ಆದರೂ ಇಷ್ಟೊಂದು ದೊಡ್ಡ ಮೊತ್ತದ ಟಿಪ್ಸ್ ಬಗ್ಗೆ ರೆಸ್ಟೋರೆಂಟ್ ಮಾಲೀಕರಿಗೆ ಅನುಮಾನವಾಯಿತು. ಈ ಘಟನೆಯು ನಡೆದಿದ್ದು ಜೂನ್ನಲ್ಲಿ ಎಂದು ಸಿಎನ್ಎನ್ ವರದಿ ಮೂಲಕ ತಿಳಿದು ಬಂದಿದೆ.
ಬಿಲ್ನ ಮೊತ್ತ 1 ಲಕ್ಷ. ಆದರೆ, ಟಿಪ್ಸ್ ಫಾರ್ ಜೀಸಸ್ ಎಂಬ ಸಾಮಾಜಿಕ ಮಾಧ್ಯಮ ಅಭಿಯಾನದಿಂದ ಪ್ರಭಾವಿತರಾಗಿ 2.4 ಲಕ್ಷ ಹಣವನ್ನು ಟಿಪ್ಸ್ ರೂಪದಲ್ಲಿ ನಿಮ್ಮ ರೆಸ್ಟೋರೆಂಟ್ಗೆ ನೀಡುತ್ತಿದ್ದೇನೆ ಎಂದು ಗ್ರಾಹಕ ಎರಿಕ್ ಮಾಲೀಕರಿಗೆ ಆ ದಿನ ಹೇಳಿದರು. ಮಾಲೀಕರಿಂದ ಆ ಟಿಪ್ಸ್ ಹಣ ಪಡೆದ ಪರಿಚಾರಿಕೆ ಲ್ಯಾಂಬರ್ಟ್, ಎರಿಕ್ ಅವರ ನಡೆಯಲ್ಲಿ ಸಾಕಷ್ಟು ಆಳ ಅರ್ಥವಿದೆ, ಇದು ನನ್ನನ್ನು ಯೋಚಿಸುವಂತೆ ಮಾಡಿದೆ ಎಂದು ಭಾವುಕರಾದರು. ಆದರೂ ಆಕೆಗೆ ಈ ಘಟನೆಯನ್ನು ಪೂರ್ತಿ ನಂಬಲು ಸಾಧ್ಯವಾಗಲಿಲ್ಲ.
ಕೆಲ ವಾರಗಳ ನಂತರ TipsForJesus ಎಂಬ ಹ್ಯಾಶ್ಟ್ಯಾಗಿನಲ್ಲಿ ಇನ್ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಕಾಣಿಸಿಕೊಂಡಾಗ ಈ ಘಟನೆಗೆ ವಿಚಿತ್ರ ತಿರುವು ಒದಗಿತು; ಸುಮಾರು ಎರಡು ವರ್ಷಗಳಿಂದ ರೆಸ್ಟೋರೆಂಟ್ನ ಉದ್ಯೋಗದಲ್ಲಿರುವ ಪರಿಚಾರಿಕೆಗೆ ಕೊಟ್ಟಿದ್ದ ಟಿಪ್ಸ್ ಹಣವನ್ನು ಹಿಂದಕ್ಕೆ ಪಡೆಯಲು ಕ್ರೆಡಿಟ್ ಕಾರ್ಡ್ ಕಂಪನಿಯೊಂದಿಗೆ ‘ಕನ್ಸರ್ನ್ ರೈಸ್’ ಮಾಡಿರುವ ವಿಷಯವನ್ನು ಆ ಪೋಸ್ಟ್ನಲ್ಲಿ ಉಲ್ಲೇಖಿಸಲಾಗಿತ್ತು.
ನಂತರ ಎರಿಕ್ ಅವರನ್ನು ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಿ ಈ ವಿಚಾರವಾಗಿ ಚರ್ಚಿಸಲು ರೆಸ್ಟೋರೆಂಟ್ ಮಾಲೀಕರು ಪ್ರಯತ್ನಿಸಿದರೂ ಎರಿಕ್ ಪ್ರತಿಕ್ರಿಯಿಸಲಿಲ್ಲ. ಆದರೆ ಅದಾಗಲೇ ರೆಸ್ಟೊರೆಂಟ್ ಮಾಲೀಕರು ಪರಿಚಾರಿಕೆಗೆ ಟಿಪ್ಸ್ ಹಣ ಕೊಟ್ಟಿರುವುದನ್ನು ಎರಿಕ್ರಿಂದಲೇ ವಸೂಲಿ ಮಾಡಬೇಕೆಂದು ಯೋಚಿಸುತ್ತಿರುವಾಗ ಸಾಮಾಜಿಕ ಜಾಲತಾಣದಲ್ಲಿ ಈ ಘಟನೆ ನಡೆಯಿತು. ಇದಕ್ಕೆ ಪರಿಹಾರಾರ್ಥವಾಗಿ ಎರಿಕ್ ವಿರುದ್ಧ ರೆಸ್ಟೋರೆಂಟ್ ಮಾಲೀಕರು ನ್ಯಾಯಾಲಯದಲ್ಲಿ ಮ್ಯಾಜಿಸ್ಟ್ರೇಟ್ ಮೂಲಕ ಮೊಕದ್ದಮೆ ಹೂಡಿದ್ದಾರೆ.
ಮತ್ತಷ್ಟು ಇಂಥ ಟ್ರೆಂಡಿಂಗ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:31 am, Tue, 20 September 22








