AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Trending : ಮುಖಲಕ್ಷಣಗಳ ಮೂಲಕ ನಿಮ್ಮ ವ್ಯಕ್ತಿತ್ವ ಕಂಡುಕೊಳ್ಳಿ

Personality Test : ಪೀಪಲ್ ರೀಡರ್ ಏಲನ್​ ಸ್ಟೀವನ್ ಪ್ರಕಾರ ನಿಮ್ಮ ಮುಖದ ಲಕ್ಷಣಗಳ ಮೂಲಕ ನಿಮ್ಮ ವ್ಯಕ್ತಿತ್ವ ಎಂಥದು ಎಂದು ತಿಳಿದುಕೊಳ್ಳಬಹುದು. 

Trending : ಮುಖಲಕ್ಷಣಗಳ ಮೂಲಕ ನಿಮ್ಮ ವ್ಯಕ್ತಿತ್ವ ಕಂಡುಕೊಳ್ಳಿ
TV9 Web
| Updated By: ಶ್ರೀದೇವಿ ಕಳಸದ|

Updated on:Sep 19, 2022 | 6:01 PM

Share

Trending : ನೀವು ಹೇಗೆ ಯೋಚಿಸುತ್ತೀರಿ? ನಿಮ್ಮ ಭಾವನಾತ್ಮಕ ಬುದ್ಧಿಮತ್ತೆ, ಬೌದ್ಧಿಕಮತ್ತೆ ಹೇಗಿದೆ? ನಿಮ್ಮ ಮಾನಸಿಕ, ಭಾವನಾತ್ಮಕ ಸ್ಥಿರತೆ ಹೇಗಿದೆ? ಮುಂತಾದ ವಿಷಯಗಳನ್ನು ತಿಳಿದುಕೊಳ್ಳಲು ನೀವು ಸದಾ ಉತ್ಸುಕರಾಗಿರುತ್ತೀರಿ ಅಲ್ಲವೆ? ನಿಮ್ಮನ್ನು ನೀವು ಅರಿತುಕೊಳ್ಳುವ ಕುತೂಹಲ ಎಂದೂ ಮುಗಿಯದಂಥದ್ದು. ಜ್ಞಾನಮಾರ್ಗ ಮತ್ತು ಅನುಭವ ಮಾರ್ಗದ ಮೂಲಕ ಕಂಡುಕೊಳ್ಳುವ ಬಗೆ ಒಂದಾದರೆ, ಮನಶಾಸ್ತ್ರ ಮತ್ತು ಪರ್ಯಾಯ ವಿಧಾನಗಳ ಮೂಲಕ ನಿಮ್ಮ ವ್ಯಕ್ತಿತ್ವವನ್ನು ಕಂಡುಕೊಳ್ಳುವುದು ಇನ್ನೊಂದು ಬಗೆ. ಈಗಿಲ್ಲಿ ನಿಮ್ಮ ಮುಖಲಕ್ಷಣದ ಮೂಲಕ ನಿಮ್ಮ ವ್ಯಕ್ತಿತ್ವವನ್ನು ಕಂಡುಕೊಳ್ಳಲು ಅನುಕೂಲಕರವಾದ ವಿಷಯವಿವರಣೆ ಇಲ್ಲಿದೆ. ಆಸ್ಟ್ರೇಲಿಯನ್ ಪೀಪಲ್ ರೀಡರ್ ಏಲನ್​ ಸ್ಟೀವನ್ ಪ್ರಕಾರ ನಿಮ್ಮ ಮುಖದ ವೈಶಿಷ್ಟ್ಯ, ಲಕ್ಷಣಗಳ ಮೂಲಕ ನಿಮ್ಮ ವ್ಯಕ್ತಿತ್ವ ಎಂಥದು ಎಂದು ತಿಳಿದುಕೊಳ್ಳಬಹುದು.

1. ಆತ್ಮವಿಶ್ವಾಸವುಳ್ಳವರು : ಮುಖದ ಅಗಲ ಮತ್ತು ಉದ್ದವು ವ್ಯಕ್ತಿಯ ಆತ್ಮವಿಶ್ವಾಸದ ಮಟ್ಟವನ್ನು ಸೂಚಿಸುತ್ತದೆ. ಶೇ. 60 ಕಡಿಮೆ ಅಗಲವಿರುವ ಮುಖ ಹೊಂದಿರುವವವರು ಸ್ವಭಾವತಃ ಜಾಗರೂಕರಾಗಿರುತ್ತಾರೆ, ಆದರೆ ಅವರ ಮುಖ ಕನಿಷ್ಟ ಶೇ. 70 ದಷ್ಟು ಅಗಲವಿರುವವರು ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ ಮತ್ತು ಸ್ವಾವಲಂಬಿಗಳಾಗಿರುತ್ತಾರೆ. ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಸಮರ್ಥರಾಗಿರುತ್ತಾರೆ. ಜವಾಬ್ದಾರಿ ತೆಗೆದುಕೊಳ್ಳುವುದೆಂದರೆ ಇವರಿಗೆ ಬಹಳ ಇಷ್ಟ. ಅವರು ಉಸ್ತುವಾರಿ ವಹಿಸಲು ಇಷ್ಟಪಡುತ್ತಾರೆ ಮತ್ತು ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಸಮರ್ಥರಾಗಿರುತ್ತಾರೆ.

2. ಸ್ನೇಹಮಯಿಯಾಗಿರುವವರು : ಕಣ್ಣಿನ ಮೇಲ್ಭಾಗದಿಂದ ಹುಬ್ಬುಗಳ ನಡುವಿನ ಅಂತರವು ಇವರಲ್ಲಿ ಸ್ನೇಹಪರತೆಯ ಮಟ್ಟವನ್ನು ಸಾಂಕೇತಿಸುತ್ತದೆ. ದಟ್ಟಹುಬ್ಬುಗಳನ್ನು ಹೊಂದಿರುವವರು ಖಾಸಗಿಯಾಗಿ ಇರಲು ಇಷ್ಟಪಡುತ್ತಾರೆ. ಖಾಸಗಿತನವನ್ನು ಗೌರವಿಸುತ್ತಾರೆ. ಯಾರಾದರೂ ಅವರ ವೈಯಕ್ತಿಕವನ್ನು ಆಕ್ರಮಿಸಲು ನೋಡಿದರೆ ನಿಷ್ಠುರ ಕಟ್ಟಿಕೊಳ್ಳುತ್ತಾರೆ. ಕಡಿಮೆ ಹುಬ್ಬುಗಳನ್ನು ಹೊಂದಿರುವ ಜನರ ಬಗ್ಗೆ ಸಾಮಾನ್ಯವಾಗಿ ಇತರರು ವೈಯಕ್ತಿಕವಾದ ಕುತೂಹಲವನ್ನು ವ್ಯಕ್ತಪಡಿಸಲಾರರು. ಏಕೆಂದರೆ ಅವರು ತೆರೆದ ಮನಸ್ಸಿನರಾಗಿರುತ್ತಾರೆ. ಗಟ್ಟಿಮನಸ್ಸಿನರಾಗಿರುತ್ತಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

3. ಸಹನಾಮಯಿಗಳು : ಕಣ್ಣುಗಳ ನಡುವಿನ ಸಮಾನ ಅಂತರವು ಸಹನೆಯ ಮಟ್ಟವನ್ನು ಸೂಚಿಸುತ್ತದೆ. ಅಗಲವಾದ ಕಣ್ಣುಗಳನ್ನು ಹೊಂದಿರುವ ಜನರು ಸಾಮಾನ್ಯವಾಗಿ ಹೆಚ್ಚಿನ ತಾಳ್ಮೆ ಹೊಂದಿರುತ್ತಾರೆ. ಇತರರ ತಪ್ಪುಗಳನ್ನು ಸಹಿಸಿಕೊಳ್ಳುತ್ತಾರೆ. ಯಾರ ಬಗ್ಗೆಯೂ ಒಮ್ಮೆಲೇ ನಿರ್ಧಾರಕ್ಕೆ ಬರಲಾರರು. ಕಣ್ಣುಗಳ ನಡುವೆ ಕಡಿಮೆ ಜಾಗವಿದ್ದು ವಿಶಾಲವಾದ ಕಣ್ಣುಗಳನ್ನು ಹೊಂದಿದವರಲ್ಲಿ ಸಹನೆ ಕಡಿಮೆ ಇರುತ್ತದೆ.

4. ಹಾಸ್ಯಪ್ರಜ್ಞೆಯುಳ್ಳವರು : ಮೂಗಿನ ಕೆಳಗೆ ಮತ್ತು ತುಟಿಯ ಮೇಲ್ಭಾಗದ ಅಂತವು ಹೆಚ್ಚಿದಲ್ಲಿ ಅವರು ಹಾಸ್ಯಪ್ರವೃತ್ತಿಯುಳ್ಳವರಾಗಿರುತ್ತಾರೆ. ಅವರು ಉಲ್ಲಾಸಮಯ ವ್ಯಕ್ತಿತ್ವವವನ್ನು ಹೊಂದಿರುತ್ತಾರೆ. ಆರೋಗ್ಯಕರ ರೀತಿಯಲ್ಲಿ ಹಾಸ್ಯವನ್ನು ಸ್ವೀಕರಿಸುತ್ತಾರೆ. ಮೂಗಿನ ಕೆಳಗೆ ಮತ್ತು ತುಟಿಯ ಮೇಲ್ಭಾಗದಲ್ಲಿ ಕಡಿಮೆ ಜಾಗವುಳ್ಳವರು ಬೇಗನೆ ಜನರ ಮಾತಿಗೆ ಮನನೊಂದುಕೊಳ್ಳುತ್ತಾರೆ. ಹಾಸ್ಯದ ಮಾತುಗಳನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ.  ಪ್ರತಿಕೂಲವಾಗಿ ಪ್ರತಿಕ್ರಿಯಿಸಬಹುದು.

ಮತ್ತಷ್ಟು ವೈರಲ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 6:00 pm, Mon, 19 September 22

ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್