Trending : 55 ಬ್ಯಾಟರಿ ನುಂಗಿದ 66 ವರ್ಷದ ಐರ್ಲೆಂಡಿನ ಮಹಿಳೆ
Batteries in stomach : ಮಕ್ಕಳಾದರೆ, ಸಾಕುಪ್ರಾಣಿಗಳಾದರೆ ಕಂಡ ಚಿಕ್ಕಪುಟ್ಟ ವಸ್ತುಗಳನ್ನೆಲ್ಲ ನುಂಗುತ್ತವೆ. ಆದರೆ ಈ ಮಹಿಳೆ!? ಒಂದಲ್ಲ ಎರಡಲ್ಲ ಇಷ್ಟೊಂದು ಬ್ಯಾಟರಿಗಳನ್ನು ನುಂಗಿದ್ದಾದರೂ ಏಕೆ?
Trending : ಚಿಕ್ಕಮಕ್ಕಳು ನಾಣ್ಯ, ಗೋಲಿಗಳನ್ನು ನುಂಗುವುದು ಅತೀ ಸಾಮಾನ್ಯ. ಆದರೆ ಮಹಿಳೆಯೊಬ್ಬಳು? ಅದರಲ್ಲೂ 55 ಬ್ಯಾಟರಿಗಳನ್ನು ನುಂಗಿದ್ದಾಳೆ ಎಂದರೆ ಅವಳಿಗೇನೋ ಗಂಭೀರವಾದ ಸಮಸ್ಯೆ ಇದೆ ಎಂದೇ ಅರ್ಥ. ಐರ್ಲೆಂಡಿನ ವೈದ್ಯರು 66 ವರ್ಷದ ಈ ಮಹಿಳೆಯ ಹೊಟ್ಟೆ ಮತ್ತು ಕರುಳಿನಿಂದ 55AA ಬ್ಯಾಟರಿಗಳನ್ನು ಹೊರತೆಗೆದಿರುವುದು ಈಗ ವರದಿಯಾಗಿದೆ. ಡಬ್ಲಿನ್ನಲ್ಲಿರುವ ಸೇಂಟ್ ವಿನ್ಸೆಂಟ್ಸ್ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ನಡೆದ ಈ ಅಸಾಮಾನ್ಯ ಘಟನೆಯನ್ನು ಐರಿಶ್ ಮೆಡಿಕಲ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ. ಈಕೆ ಆಸ್ಪತ್ರೆಗೆ ಹೋದಾಗ, ನೈಸರ್ಗಿಕ ಪ್ರಕ್ರಿಯೆಯ ಮೂಲಕ ಬ್ಯಾಟರಿ ತೆಗೆಯುವ ಪ್ರಕ್ರಿಯೆಗೆ ಮುಂದಾಗಿದ್ದಾರೆ. ಅದು ಸಾಧ್ಯವಾಗದೇ ಇದ್ಧಾಗ ಸ್ಕ್ಯಾನಿಂಗ್ಗೆ ಒಳಪಡಿಸಿದ್ದಾರೆ. ಬೊಗಸೆಗಟ್ಟಲೆ ಬ್ಯಾಟರಿಗಳನ್ನು ಕಂಡು ಅಚ್ಚರಿಗೆ ಒಳಗಾಗಿದ್ದಾರೆ.
ಬ್ಯಾಟರಿಗಳ ತೂಕದಿಂದಾಗಿ ಆಕೆಯ ಹೊಟ್ಟೆ ನೇತಾಡುವಷ್ಟು ಉಬ್ಬಿಹೋಗಿತ್ತು. ಮೊದಲ ವಾರದಲ್ಲಿ ಐದು AA ಬ್ಯಾಟರಿಗಳನ್ನು ವೈದ್ಯರು ತೆಗೆದಿದ್ದಾರೆ. ನಂತರ ಲ್ಯಾಪ್ರೋಸ್ಕೋಪಿಯ ವಿಧಾನದ ಮೂಲಕ 46AAA ಬ್ಯಾಟರಿಗಳನ್ನು ಹೊರತೆಗೆದಿದ್ದಾರೆ. ಉಳಿದ ನಾಲ್ಕು ಬ್ಯಾಟರಿಗಳನ್ನು ಗುದದ್ವಾರದ ಮೂಲಕ ಹೊರತೆಗೆದಿದ್ದಾರೆ.
ಲೈವ್ ಸೈನ್ಸ್ ಪ್ರಕಾರ, ಈ ಮಹಿಳೆ ಒಂದೇ ಸಮಯಕ್ಕೆ ಎಲ್ಲ ಬ್ಯಾಟರಿಗಳನ್ನು ನುಂಗಿದ್ದಾರೆ. ಆದರೆ ಯಾವುದೇ ಎಲೆಕ್ಟ್ರೋಕೆಮಿಕಲ್ನಿಂದ ಯಾವುದೇ ರೀತಿಯ ಹಾನಿಗೆ ಇವರ ದೇಹ ಒಳಗಾಗಿಲ್ಲ.
ಖಿನ್ನತೆಯಿಂದ ಈ ಮಹಿಳೆ ಹೀಗೆ ಸ್ವಯಂಹಾನಿ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ವೈದ್ಯರು ತಿಳಿಸಿದ್ಧಾರೆ.
ಜುಲೈನಲ್ಲಿ ಜೋಧಪುರದ ವೈದ್ಯರು ವ್ಯಕ್ತಿಯೊಬ್ಬರ ಹೊಟ್ಟೆಯಿಂದ 63 ನಾಣ್ಯಗಳನ್ನು ಹೊರತೆಗೆದಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.
ಖಿನ್ನತೆಗೆ ಒಳಗಾದಾಗ ವ್ಯಕ್ತಿಗೆ ಸಮಾಧಾನ, ಸಾಂತ್ವನ ಬೇಕಾಗುತ್ತದೆ. ಕೆಲವೊಮ್ಮೆ ಚಿಕಿತ್ಸೆಯೂ ಬೇಕಾಗುತ್ತದೆ. ನಿಮ್ಮ ಸುತ್ತಮುತ್ತಲಿನ ವ್ಯಕ್ತಿಗಳ ನಡೆವಳಿಕೆಯಲ್ಲಿ ಹೆಚ್ಚೂಕಡಿಮೆ ಎನ್ನಿಸಿದಾಗ ಅವರೊಂದಿಗೆ ಆಪ್ತವಾಗಿ ಮಾತನಾಡಲು ಪ್ರಯತ್ನಿಸಿ, ಅವರು ಆ ಸ್ಥಿತಿಯಿಂದ ಹೊರಬರಲು ಸಹಕರಿಸಬೇಕು.
ಮತ್ತಷ್ಟು ಟ್ರೆಂಡಿಂಗ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 3:41 pm, Mon, 19 September 22