Sign In

By signing in or creating an account, you agree with Associated Broadcasting Company's Terms & Conditions and Privacy Policy.

Trending : ಒಳ್ಳೆಯವರಲ್ಲ ಈ ನಮ್ಮಿಸ್ಸು, ಏನ್​ ಹೇಳಿದ್ರೂ ನೋನೋನೋ

Langur attends classes : ‘ನಾನು 5 ದಿನ ಕ್ಲಾಸ್ ಅಟೆಂಡ್ ಮಾಡಿದ್ದೇನೆ, ಅದೂ ಮೊದಲ ಬೆಂಚಿಗೆ ಕುಳಿತು. ಒಬ್ಬರಿಗೂ ಅನ್ನಿಸಲೇ ಇಲ್ವಲ್ಲ ಪುಸ್ತಕ, ಯೂನಿಫಾರ್ಮ್ ಕೊಡಬೇಕೆಂದು?

Trending : ಒಳ್ಳೆಯವರಲ್ಲ ಈ ನಮ್ಮಿಸ್ಸು, ಏನ್​ ಹೇಳಿದ್ರೂ ನೋನೋನೋ
ಯೂನಿಫಾರ್ಮ್​ ಒಂದು ಕೊಟ್ಬಿಡಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 19, 2022 | 1:40 PM

Trending : ಶಾಲೆಗೆ ಹೋಗಲು ಯಾವ ಮಕ್ಕಳಿಗೆ ಇಷ್ಟ? ದಿನವೂ ಮಕ್ಕಳನ್ನು ಶಾಲೆಗೆ ಕಳಿಸುವುದೆಂದರೆ ಪೋಷಕರಿಗೆ ದೊಡ್ಡ ಸಾಹಸ. ಆದರೆ ಈ ಲಂಗೂರ್​ ಮಾತ್ರ ಶಾಲೆಗೆ ಬಂದು ಕುಳಿತಿದೆ. ಇದಕ್ಕೆ ಎಷ್ಟು ವಯಸ್ಸಿರಬಹುದು? ಯಾಕೆ ಇದಕ್ಕೂ ಶಾಲೆಗೆ ಹೋಗಬೇಕು ಅನ್ನಿಸಿರಬಹುದು, ಅದೂ ಹೈಸ್ಕೂಲಿಗೆ!? ಈ ಲಂಗೂರ್ ಜಾರ್ಖಂಡ್​ನ ಹಜಾರಿಬಾಗ್​ನ ದನುವಾ ಗ್ರಾಮದಲ್ಲಿರುವ ಹೈಸ್ಕೂಲಿಗೆ ಹೋಗಿ ಮೊದಲನೇ ಬೆಂಚಿನಲ್ಲಿ ಕುಳಿತು ಮಕ್ಕಳೊಂದಿಗೆ ಪಾಠ ಕೇಳಿಬಂದಿದೆ. ಒಂದೇ ದಿನವಲ್ಲ ಬರೋಬ್ಬರಿ ಐದು ದಿನಗಳ ಕಾಲ ಬೆಳಗ್ಗೆ ಕ್ಲಾಸಿಗೆ ಬಂದು, 10 ಗಂಟೆಗೆ ವಾಪಸ್​ ಹೋಗಿದೆ. ಈ ವಿಷಯವನ್ನು ಶಾಲಾಸಿಬ್ಬಂದಿ ಕಳೆದ ಶನಿವಾರ ಬಹಿರಂಗಪಡಿಸಿದೆ.

ಶಿಸ್ತಿನ ವಿದ್ಯಾರ್ಥಿಯಂತೆ ಮೊದಲ ಬೆಂಚಿನಲ್ಲಿ ಕುಳಿತು ಪಾಠ ಕೇಳುತ್ತಿರುವ ಈ ಫೋಟೋ ಯಾರನ್ನೂ ನಗಿಸುವಂತಿದೆ. ಮೊದಲು ಶನಿವಾರದಂದು 7ನೇ ತರಗತಿಗೆ ಪ್ರವೇಶಿಸಿ ವಿದ್ಯಾರ್ಥಿಗಳೊಂದಿಗೆ ಕುಳಿತು ಪಾಠ ಕೇಳಿದೆ. ಮತ್ತೆ ಮಂಗಳವಾರದಂದು ಶಾಲೆಗೆ ಬಂದ ಲಂಗೂರ್ 9ನೇ ತರಗತಿಗೆ ಹಾಜರಾಗಿ ಮೊದಲ ಬೆಂಚಿನಲ್ಲೇ ಕುಳಿತು ಪಾಠವನ್ನು ಆಲಿಸಿದೆ. ಹೀಗೆ ಐದು ದಿನಗಳ ಕಾಲ ತರಗತಿಯಲ್ಲಿ ಕುಳಿತು ಪಾಠ ಕೇಳಿದೆ.

ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಭಯದಿಂದ ಈ ಲಂಗೂರ್​ ಅನ್ನು ಓಡಿಸಲು ನೋಡಿದಾಗ, ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಉಪಾಯದಿಂದ ಇದನ್ನು ಹಿಡಿಯಲು ಪ್ರಯತ್ನಿಸಿದ್ದಾರೆ.

ಇದನ್ನೂ ಓದಿ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಹಜಾರಿಬಾಗ್‌ನ ಹಿರಿಯ ಅರಣ್ಯ ಇಲಾಖೆ ಅಧಿಕಾರಿ ಅಯೂಬ್ ಅನ್ಸಾರಿ, ‘ನಮಗೆ ವಿಷಯ ತಿಳಿಯುತ್ತಿದ್ದಂತೆ, ನಾವು ಲಂಗೂರ್ ಹಿಡಿಯಲು ಶಾಲೆಗೆ ಬಂದೆವು. ಸಾಮಾನ್ಯವಾಗಿ ಕಾಡುಪ್ರಾಣಿಗಳನ್ನು ಹಿಡಿಯುವಾಗ ಆಹಾರದ ಆಸೆ ತೋರಿಸಬೇಕಾಗುತ್ತದೆ. ಆ ಪ್ರಕಾರ ಲಂಗೂರ್​ಗೆ ಹಣ್ಣು ಮತ್ತು ಇತರೇ ತಿನಿಸುಗಳನ್ನು ಕೊಟ್ಟೆವು’ ಎಂದಿದ್ದಾರೆ.

ಆದರೂ ಅರಣ್ಯಾಧಿಕಾರಿಗಳು ಲಂಗೂರ್​ ಅನ್ನು ಹಿಡಿಯಲು ವಿಫಲರಾದರೂ ಶಾಲೆಯ ಆವರಣದಿಂದ ಅದನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮುನ್ನೆಚ್ಚರಿಕೆಯ ಕ್ರಮವಾಗಿ ಅರಣ್ಯಾಧಿಕಾರಿಗಳು, ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಯಾವುದೇ ರೀತಿಯ ತಿಂಡಿ ತಿನಿಸುಗಳನ್ನು ಕ್ಯಾಂಪಸ್​ನಲ್ಲಿ ಎಸೆಯಬೇಡಿ, ಆಹಾರ ಪದಾರ್ಥಗಳೇ ಕಾಡುಪ್ರಾಣಿಗಳನ್ನು ಆಕರ್ಷಿಸುತ್ತವೆ ಎಂದಿದ್ದಾರೆ.

ಅರಣ್ಯಸಮೀಪದಲ್ಲಿರುವ ಈ ಗ್ರಾಮದ ಶಾಲಾಮಕ್ಕಳ ಸುರಕ್ಷತೆಗಾಗಿ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗುವುದು ಜೊತೆಗೆ ತುರ್ತು ಸಂದರ್ಭಕ್ಕಾಗಿ ಪಂಜರವನ್ನೂ ಇಡಲಾಗುವುದು ಎಂದಿದ್ದಾರೆ.

ಪರೀಕ್ಷೆ ಇದ್ದಾಗ ಮತ್ತೆ ಬರುವುದೆ ಈ ಲಂಗೂರ್?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 1:19 pm, Mon, 19 September 22