AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಕುರಿಗಳು ಸಾರ್ ಕುರಿಗಳು ಸಾಗಿದ್ದೇ ಗುರಿಗಳು!

Sheep Follow Runner : ಒಂದು ಬ್ಯಾ ಎಂದರೆ ಎಲ್ಲವೂ ಬ್ಯಾ! ಈ ಕುರಿಗಳ ಹಿಂಡು ಈ ಮಹಿಳೆಯನ್ನು ಅದೆಷ್ಟು ದೂರ ಹಿಂಬಾಲಿಸಿವೆಯೋ ಗೊತ್ತಿಲ್ಲ. 12 ಮಿಲಿಯನ್ ವೀಕ್ಷಿಸಿರುವ ಈ ವಿಡಿಯೋ ತುಣುಕನ್ನು ನೀವೂ ನೋಡಿ.

Viral Video : ಕುರಿಗಳು ಸಾರ್ ಕುರಿಗಳು ಸಾಗಿದ್ದೇ ಗುರಿಗಳು!
TV9 Web
| Edited By: |

Updated on: Sep 19, 2022 | 4:35 PM

Share

Viral Video : ಬೆಟ್ಟಗುಡ್ಡಗಳ ಚಾರಣ ಅಥವಾ ಕಾಲನಡಿಗೆಯಲ್ಲಿ ಚಲಿಸುವುದು ಅದ್ಭುತ ಅನುಭವ. ಕಾಡು, ನದಿ, ಬೆಟ್ಟ, ಹಸಿರನ್ನು ನೋಡುತ್ತ ಸಂಚರಿಸುವಾಗ ಆಯಾಸದೊಂದಿಗೆ ಉಲ್ಲಾಸವೂ ಇಲ್ಲಿ ಸಿಗುತ್ತಾ ಹೋಗುತ್ತದೆ. ಸ್ಥಳೀಯ ಸಂಸ್ಕೃತಿಯನ್ನು ಅರಿತುಕೊಳ್ಳಲು ಅವಕಾಶ ಒದಗುತ್ತಾ ಹೋಗುತ್ತದೆ. ಅನೇಕರಿಗೆ ಓಡುವುದು ಪ್ರೀತಿಯ ಹವ್ಯಾಸ. ಪ್ರಕೃತಿಯನ್ನು ಸವಿಯಲು ಹೀಗೆ ಒಂಟಿಯಾಗಿ ವಿಹರಿಸುವ ಅನೇಕ ಮಹಿಳೆಯರು ನಮ್ಮ ನಡುವೆ ಇದ್ಧಾರೆ. ಫ್ರಾನ್ಸ್​ನ ಈ ಮಹಿಳೆ ಟ್ರಯಲ್​ ರನ್ನರ್. ಈಕೆ ಕಾಡಿನಲ್ಲಿ ಓಡುತ್ತಿದ್ಧಾಗ ಅಚಾನಕ್ಕಾಗಿ ಕುರಿಗಳ ಹಿಂಡು ಸಿಕ್ಕಿದೆ. ಈಕೆ ಓಡುತ್ತಿದ್ದಂತೆ ಎಷ್ಟೋ ದೂರದ ತನಕ ಅವಳನ್ನೇ ಹಿಂಬಾಲಿಸಿವೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಗಮನ ಸೆಳೆದಿದೆ.

ಎಲೀನರ್ ಸ್ಕೋಲ್ಝ್ ಎಂಬ ಇನ್​ಸ್ಟಾಗ್ರಾಂ ಖಾತೆದಾರರು ಸೆಪ್ಟೆಂಬರ್ 18ರಂದು ಇನ್​ಸ್ಟಾಗ್ರಾಮ್​ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ‘ನಾನು ನೋಡಿದ ಅತ್ಯುತ್ತಮ ಸಂಗತಿಗಳಲ್ಲಿ ಇದೂ ಒಂದು. ಈ ಕುರಿಗಳು ಇನ್ನೂ ಆಕೆಯನ್ನು ಬೆನ್ನುಹತ್ತಿ ಹೋಗಬಹುದು ಎಂದೆನ್ನಿಸುತ್ತದೆಯಾ ನಿಮಗೆ?’ ಎಂಬ ಶೀರ್ಷಿಕೆ ಈ ವಿಡಿಯೋಗಿದೆ.

ಇದನ್ನೂ ಓದಿ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!
View this post on Instagram

A post shared by Eleanor Scholz (@elea_gram)

ಸ್ಕೋಲ್ಝ್ ಫ್ರಾನ್ಸ್‌ನಲ್ಲಿ ಒಬ್ಬರೇ ಕಾಲ್ನಡಿಗೆಯಲ್ಲಿ ಸಾಗುತ್ತಿರುವಾಗ ಈ ಸುಂದರ ದೃಶ್ಯ ಕಂಡು ವಿಡಿಯೋ ಮಾಡಿದ್ದಾರೆ.

ಸ್ಕೋಲ್ಝ್​ ಈ ಓಟಗಾರ್ತಿಯನ್ನು ಮಾತನಾಡಿಸಲು ನಿಲ್ಲಿಸಿದಾಗ ಕೆಲ ನಿಮಿಷಗಳ ಕಾಲ ಕುರಿಗಳ ಹಿಂಡೂ ನಿಲ್ಲುತ್ತದೆ. ಮತ್ತೆ ಅವಳು ಓಡಲು ಶುರುಮಾಡುತ್ತಿದ್ದಂತೆ ಅವು ಹಿಂಬಾಲಿಸುತ್ತವೆ.

ಈ ವಿಡಿಯೋ ಈತನಕ ಸುಮಾರು 12 ಮಿಲಿಯನ್ ವೀಕ್ಷಕರನ್ನು ತಲುಪಿದೆ. ಸುಮಾರು 7.5 ಲಕ್ಷ ಜನರು ಈ ವಿಡಿಯೋ ಮೆಚ್ಚಿದ್ದಾರೆ.

ಒಬ್ಬರು, ‘ಈ ದೃಶ್ಯ ನೋಡುತ್ತಿದ್ದರೆ ಕಳೆದುಹೋಗಬೇಕೆನ್ನಿಸುತ್ತದೆ. ಈಕೆ ಅದೆಷ್ಟು ಮೈಲು ಓಡಿರಬಹುದು, ಆಕೆಯನ್ನು ಈ ಹಿಂಡು ಅದೆಷ್ಟು ದೂರ ಹಿಂಬಾಲಿಸಿರಬಹುದು?’ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇನ್ನೊಬ್ಬರು, ‘ಇದು ಬಹಳ ಮುದ್ಧಾಗಿದೆ. ಹೀಗೆ ಹಿಂಡಿಗೆ ಹಿಂಡನ್ನೇ ಕದಿಯುವುದು!’ ಎಂದು ತಮಾಷೆ ಮಾಡಿದ್ದಾರೆ.

ಮತ್ತೊಬ್ಬರು, ‘ಎಂಥ ಉಲ್ಲಾಸದಾಯಕ ವಿಡಿಯೋ ಇದು’ ಎಂದಿದ್ದಾರೆ.

ಇಂಥ ಅಪರೂಪದ ಕ್ಷಣಗಳನ್ನು ಅನುಭವಿಸಲಾದರೂ ಹೀಗೆ ಆಗಾಗ ಹೀಗೆ ನಡಿಗೆಯಲ್ಲಿ ಸಾಗಬೇಕು. ಇವೆಲ್ಲವೂ ಎಷ್ಟು ಹಣ ಕೊಟ್ಟರೂ ಸಿಗದಂಥ ಅನನ್ಯ ಕ್ಷಣಗಳು.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
‘ಮದುವೆಯಾಗಿ ಒಂದು ತಿಂಗಳಾದ್ರೂ ಹೆಂಡ್ತಿ ಜತೆಗೆ ಮಲಗಿಲ್ಲ ಅವನು!'
‘ಮದುವೆಯಾಗಿ ಒಂದು ತಿಂಗಳಾದ್ರೂ ಹೆಂಡ್ತಿ ಜತೆಗೆ ಮಲಗಿಲ್ಲ ಅವನು!'
ಅಲಂಕಾರಕ್ಕೆಂದು ತಂದಿದ್ದ ಹೂವಿನ ಕುಂಡಗಳನ್ನು ಕದ್ದೊಯ್ದ ಜನ
ಅಲಂಕಾರಕ್ಕೆಂದು ತಂದಿದ್ದ ಹೂವಿನ ಕುಂಡಗಳನ್ನು ಕದ್ದೊಯ್ದ ಜನ
ಟರ್ನಿಂಗ್​ನಲ್ಲಿ ಕಂಟ್ರೋಲ್ ಸಿಗದೆ ಮರಕ್ಕೆ ಡಿಕ್ಕಿ ಹೊಡೆದ ಕಾರು
ಟರ್ನಿಂಗ್​ನಲ್ಲಿ ಕಂಟ್ರೋಲ್ ಸಿಗದೆ ಮರಕ್ಕೆ ಡಿಕ್ಕಿ ಹೊಡೆದ ಕಾರು