ಆರೋಗ್ಯ ಸರಿ ಇಲ್ಲ ಎಂದು ರಜೆ ಹಾಕುವುದು ಆಫೀಸ್ ಅಲ್ಲಿ ಸಾಮಾನ್ಯ. ಆದರೆ ಕೆಲ ಸಂದರ್ಭದಲ್ಲಿ ಅವರ ಆರೋಗ್ಯ ಸರಿ ಇರಬಹುದು ಆದರೂ ರಜೆ ತೆಗೆದುಕೊಂಡಿರಬಹುದು ಎನ್ನುವ ಅನುಮಾನ ಮ್ಯಾನೇಜರ್ಗೆ ಇದ್ದರೂ ಕೇಳಲು ಸಾಧ್ಯವಾಗದಂತಹ ಪರಿಸ್ಥಿತಿ ಇರುತ್ತದೆ. ಇದೆಲ್ಲ ಮೊದಲು ಹಳ್ಳಿಯ ಶಾಲೆಗಳಲ್ಲಿ ನಡೆಯುತ್ತಿದ್ದ ಪ್ರಸಂಗ, ಒಂದು ದಿನ ಹೊಟ್ಟೆ ನೋವು, ಒಂದು ದಿನ ಕಾಲು ನೋವು, ತಲೆ ನೋವು ಹೀಗೆ ಎಲ್ಲಾ ನೋವುಗಳು ನಮಗೇ ಬರುತ್ತಿದ್ದುದು ಸರಿ. ಆಗ ಶಿಕ್ಷಕರಿಗೂ ತಿಳಿದಿರುತ್ತಿತ್ತು ಈ ನೋವು ನಿಜವಾದ್ದಲ್ಲ ಎಂದು ಆದರೆ ಮಕ್ಕಳ ಮನಸ್ಸಿಗೆ ನೋವು ಮಾಡಬಾರದೆಂದು ಕೆಲವೊಮ್ಮೆ ನಿಜವಾಗಿಯೂ ಬಂದಿರಬಹುದೆಂದು ತಿಳಿದು ರಜೆ ಕೊಡುತ್ತಿದ್ದರು.
ಆದರೆ ಇದೇ ಪ್ರವೃತ್ತಿ ದೊಡ್ಡವರಾದ ಬಳಿಕವೂ ಕಡಿಮೆಯಾಗುವುದಿಲ್ಲ, ವಾರಪೂರ್ತಿ ದುಡಿದು ಒಂದು ದಿನ ರಜೆ ಇದ್ದರೂ ಇನ್ನೂ ಸುಸ್ತು ಕಡಿಮೆಯಾಗಲಿಲ್ಲವೆನಿಸಿದರೆ ಹುಷಾರಿಲ್ಲವೆಂದು ರಜೆಹಾಕುವವರಿದ್ದಾರೆ. ಸ್ನೇಹಿತರ ಜತೆ ಹೊರಗೆ ಹೋಗುವವರಿದ್ದಾರೆ. ಇದಕ್ಕೆ ಹೋಲುವಂತಹ ಘಟನೆಯೊಂದು ಆಸ್ಟ್ರೇಲಿಯಾದಲ್ಲೂ ನಡೆದಿದೆ.
https://t.co/g6HtB26nGK there you go
— MissVEE💰 (@VanessahKurora) January 17, 2024
ಮಹಿಳಾ ಸಿಬ್ಬಂದಿಯೊಬ್ಬರು ಆರೋಗ್ಯ ಸರಿ ಇಲ್ಲ ಎಂದು ಸುಳ್ಳು ಹೇಳಿ ಆಫೀಸ್ಗೆ ರಜೆ ಹಾಕಿ ವಿಮಾನ ಏರಿದ್ದರು, ಆದರೆ ದುರಾದೃಷ್ಟವೆಂಬಂತೆ ಆಕೆಯ ಬಾಸ್ ಕೂಡ ಅದೇ ವಿಮಾನದಲ್ಲಿ ಕಾಣಿಸಿಕೊಂಡಿದ್ದಾರೆ, ಒಬ್ಬರನ್ನೊಬ್ಬರು ಮುಖ ನೋಡಿಕೊಂಡಾಗ ಇಬ್ಬರಿಗೂ ಅಲ್ಲಿಂದ ಹೋಗಲಾಗದ ಪರಿಸ್ಥಿತಿಯಲ್ಲಿ ಇಬ್ಬರ ಮನಸ್ಸಿನಲ್ಲೂ ಎಂಥಾ ಆಲೋಚನೆ ಓಡಿರಬಹುದು.
ನನಗೆ ಸುಳ್ಳು ಹೇಳಿ ಈಗ ವಿಮಾನ ಏರಿದ್ದೀಯಾ ಎಂದು ಬಾಸ್ ಮನಸ್ಸಿನಲ್ಲೇ ಅಂದುಕೊಂಡರೆ ಅಯ್ಯೋ ಈ ಮ್ಯಾನೇಜರ್ ಮುಖ ಇಲ್ಲೂ ನೋಡಬೇಕಲ್ಲ, ನಾನು ಹೇಳಿದ್ದು ಸುಳ್ಳು ಅಂತಾ ಗೋತ್ತಾಗೋಯ್ತು ಎಂದು ಗೊಣಗಿಕೊಳ್ಳುವುದಂತೂ ಸತ್ಯ.
ಟಿಕ್ಟಾಕ್ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ, ಸೋರೆಸ್ ಎನ್ನುವ ಮಹಿಳೆಯ ವಿಡಿಯೋ ಇದಾಗಿದೆ. ಜೆಟ್‌ಸ್ಟಾರ್ ವಿಮಾನದಿಂದ ಪ್ರಯಾಣಿಕರು ಹೋಗುತ್ತಿರುವ ವೀಡಿಯೊ ಕಾಣಬಹುದು. ಮ್ಯಾನೇಜರ್ ಅನ್ನು ಮೊದಲು ನೋಡಿದ್ದ ಆಕೆ ಮಾಸ್ಕ್, ಸನ್ ಗ್ಲಾಸ್, ಕ್ಯಾಪ್ ಧರಿಸಿ ತಾನು ಎಂದು ತಿಳಿಯದಂತೆ ನೋಡಿಕೊಳ್ಳುತ್ತಾಳೆ, ಆದರೂ ಮ್ಯಾನೇಜರ್ ಆಕೆಯನ್ನು ಕಂಡುಹಿಡಿದುಬಿಡುತ್ತಾರೆ.
ಬಳಕೆದಾರರು ತಮಗಾದ ಅನುಭವವನ್ನೂ ಕಮೆಂಟ್ ಮಾಡಿದ್ದಾರೆ, ಒಮ್ಮೆ ನಾನು ರಜೆ ಹಾಕಿ ಶಾಪಿಂಗ್ಗೆ ಹೋಗಿದ್ದೆ, ನನ್ನ ಹಿಂದೆಯೇ ನನ್ನ ಬಾಸ್ ಕೂಡ ಇದ್ದರು ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:16 pm, Tue, 23 January 24