Viral News: ತನ್ನ ತುಟಿ ದೊಡ್ಡದಾಗಿಸಲು 52ಲಕ್ಷ ರೂ. ಖರ್ಚು ಮಾಡಿದ ಮಹಿಳೆ

|

Updated on: Jul 01, 2024 | 3:29 PM

ಸೋಷಿಯಲ್ ಮೀಡಿಯಾದಲ್ಲಿ ‘ಫೆಟಿಶ್ ಬಾರ್ಬಿ’ ಎಂದೇ ಕರೆಸಿಕೊಳ್ಳುವ ಈ ಮಹಿಳೆ ಲಿಪ್ ಫಿಲ್ಲರ್‌ ಸಹಾಯದಿಂದ ತನ್ನ ತುಟಿಗಳನ್ನು ಸಾಮಾನ್ಯಕ್ಕಿಂತ ಮೂರು ಪಟ್ಟು ದೊಡ್ಡದಾಗಿ ಮತ್ತು ದಪ್ಪವಾಗಿಸಿದ್ದಾಳೆ. ಇದಕ್ಕಾಗಿ ಈಕೆ ಇಲ್ಲಿಯವರೆಗೆ ಸುಮಾರು 52 ಲಕ್ಷ ರೂಪಾಯಿ ಖರ್ಚು ಮಾಡಿದ್ದಾಳೆ.

Viral News: ತನ್ನ ತುಟಿ ದೊಡ್ಡದಾಗಿಸಲು 52ಲಕ್ಷ ರೂ. ಖರ್ಚು ಮಾಡಿದ ಮಹಿಳೆ
Follow us on

ಅನೇಕ ಮಹಿಳೆಯರು ತಮ್ಮ ಸೌಂದರ್ಯವನ್ನು ಹೆಚ್ಚಿಸಲು ಶಸ್ತ್ರಚಿಕಿತ್ಸೆಯ ಮೊರೆ ಹೋಗುತ್ತಾರೆ. ಇದಕ್ಕಾಗಿ ಎಷ್ಟು ಹಣ ಬೇಕಾದರೂ ಖರ್ಚು ಮಾಡಲು ಹಿಂಜರಿಯುವುದಿಲ್ಲ. ಅಂತಹ ಮಹಿಳೆಯೊಬ್ಬರು ಇದೀಗ ಸುದ್ದಿಯಲ್ಲಿದ್ದಾರೆ. ಈ ಮಹಿಳೆ ತನ್ನ ತುಟಿಗಳ ಅಂದವನ್ನು ಹೆಚ್ಚಿಸಲು ಬರೋಬ್ಬರಿ 52ಲಕ್ಷ ರೂ. ಖರ್ಚು ಮಾಡಿದ್ದಾಳೆ. ಇದೀಗ ಆಕೆಯ ತುಟಿ ವಿಕಾರ ರೂಪ ಪಡೆದಿದೆ.

ಸೋಷಿಯಲ್ ಮೀಡಿಯಾದಲ್ಲಿ ‘ಫೆಟಿಶ್ ಬಾರ್ಬಿ’ ಎಂದೇ ಕರೆಸಿಕೊಳ್ಳುವ ಈ ಮಹಿಳೆ ಆಸ್ಟ್ರಿಯಾ ನಿವಾಸಿ. ಫೆಟಿಶ್ ಬಾರ್ಬಿ ಅವರು ಯಾವಾಗಲೂ ದೊಡ್ಡ ತುಟಿಗಳನ್ನು ಹೊಂದಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾಳೆ. ಆದ್ದರಿಂದಲೇ ಲಿಪ್ ಫಿಲ್ಲರ್‌ಗಳ ಸಹಾಯವನ್ನು ತೆಗೆದುಕೊಂಡು ತನ್ನ ತುಟಿಗಳನ್ನು ಸಾಮಾನ್ಯಕ್ಕಿಂತ ಮೂರು ಪಟ್ಟು ದೊಡ್ಡದಾಗಿ ಮತ್ತು ದಪ್ಪವಾಗಿಸಿದ್ದಾಳೆ. ತನ್ನ ನೋಟವನ್ನು ಕಾಪಾಡಿಕೊಳ್ಳಲು ಪ್ರತಿ ಮೂರು ತಿಂಗಳಿಗೊಮ್ಮೆ ಫಿಲ್ಲರ್‌ಗಳನ್ನು ಪಡೆಯಬೇಕು ಎಂದು ಅವಳು ಹೇಳುತ್ತಾಳೆ. ಫಿಲ್ಲರ್ ಮತ್ತು ಬೊಟಾಕ್ಸ್ ಗಾಗಿ ಇಲ್ಲಿಯವರೆಗೆ ಆಕೆ ಸುಮಾರು 50 ಸಾವಿರ ಪೌಂಡ್ ಗಳನ್ನು ಅಂದರೆ ನಮ್ಮ ದೇಶದ ಕರೆನ್ಸಿಯಲ್ಲಿ ಸುಮಾರು 52 ಲಕ್ಷ ರೂಪಾಯಿ ಖರ್ಚು ಮಾಡಿದ್ದಾಳೆ.

ಇದನ್ನೂ ಓದಿ; ರೀಲ್ಸ್​ಗಾಗಿ ಧಮ್ ಹೊಡೆದ ಹುಡ್ಗಿ, ಮನೆಯಲ್ಲಿ ಬೆಲ್ಟ್ ಏಟು: ವಿಡಿಯೋ ನೋಡಿ

ಲೇಡಿಬೈಬಲ್‌ನ ವರದಿಯ ಪ್ರಕಾರ, ಫೆಟಿಶ್ ಬಾರ್ಬಿಯು ಸುಂದರವಾಗಿ ಕಾಣಲು ಆರಂಭದಲ್ಲಿ ತುಂಬಾ ಮೇಕಪ್ ಮಾಡಿಕೊಳ್ಳುತ್ತಿದ್ದಳು. ಬಳಿಕ ಫೆಟಿಶ್ ಬಾರ್ಬಿ ತನ್ನ ಕೆನ್ನೆ, ಗಲ್ಲ, ಮೂಗು ಮತ್ತು ತುಟಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾಳೆ. ಇದಲ್ಲದೇ ಚರ್ಮದ ಸುಕ್ಕುಗಳನ್ನು ತೊಡೆದುಹಾಕಲು ತನ್ನ ಸಂಪೂರ್ಣ ಮುಖಕ್ಕೆ ಬೊಟೊಕ್ಸ್ ಕೂಡ ಮಾಡಿಸಿಕೊಂಡಿದ್ದಾಳೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ