Noida: ಸೋಶಿಯಲ್ ಮೀಡಿಯಾಗಳಲ್ಲಿ ಫೇಮಸ್ ಆಗಲು ಟವರ್ ಏರಿ ಕುಳಿತ ಯುವಕ
ನೀಲೇಶ್ವರ್ ಎಂದು ಗುರುತಿಸಲ್ಪಟ್ಟಿರುವ ಈ ಯುವಕ ನೀಲೇಶ್ವರ22 ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ ಹೊಂದಿದ್ದಾನೆ. ತನ್ನ ಯೂಟ್ಯೂಬ್ನಲ್ಲಿ ಸಬ್ಸ್ಕ್ರೈಬರ್ ಹೆಚ್ಚಾಗಲು ಮತ್ತು ಮಿಲಿಯನ್ ವೀಕ್ಷಣೆ ಪಡೆಯಲು ಮೊಬೈಲ್ ಟವರ್ ಹತ್ತಿ ಕುಳಿತ್ತಿದ್ದಾನೆ.
ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಫೇಮಸ್ ಆಗಲು ಯುವಕಯೊಬ್ಬ ಮೊಬೈಲ್ ಟವರ್ ಹತ್ತಿ ಕುಳಿತಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ನೀಲೇಶ್ವರ್ ಎಂದು ಗುರುತಿಸಲ್ಪಟ್ಟಿರುವ ಈ ಯುವಕ ನೀಲೇಶ್ವರ22 ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ ಹೊಂದಿದ್ದ. ಆದರೆ ಎಷ್ಟೇ ಪ್ರಯತ್ನಿಸಿದರೂ ಸಬ್ಸ್ಕ್ರೈಬರ್ ಹೆಚ್ಚಾಗದೇ ಇರುವ ಕಾರಣ ಈ ಯುವಕ ಫೇಮಸ್ ಆಗಲು ಟವರ್ ಏರಿ ಕುಳಿತಿದ್ದಾನೆ.
ಯುವಕನ ಹುಚ್ಚು ಸಾಹಸ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕಾಗಮಿಸಿದ ಪೊಲೀಸರು ಸತತ ಐದು ಘಂಟೆಗಳ ಕಾಲ ಯುವಕನ ಮನವೊಳಿಸಿ, ಆತನನ್ನು ಟವರ್ನಿಂದ ಕೆಳಗೆ ಇಳಿಸಿದ್ದಾರೆ. ಆನ್‌ಲೈನ್ ಜನಪ್ರಿಯತೆಗಾಗಿ ಅಪಾಯಕಾರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಂತೆ ಯುವಕನಿಗೆ ಪೊಲೀಸರು ಬುದ್ದಿ ಹೇಳಿದ್ದಾರೆ. ಇದಲ್ಲದೇ ಆತನ ವಿರುದ್ಧ ಕ್ರಮ ಕೈಗೊಂಡಿದ್ದು, ಘಟನೆಯ ಬಗ್ಗೆ ಪೊಲೀಸರು ತನಿಖೆಯನ್ನು ಸಹ ಪ್ರಾರಂಭಿಸಿದ್ದಾರೆ.
ಇದನ್ನೂ ಓದಿ; ರೀಲ್ಸ್ಗಾಗಿ ಧಮ್ ಹೊಡೆದ ಹುಡ್ಗಿ, ಮನೆಯಲ್ಲಿ ಬೆಲ್ಟ್ ಏಟು: ವಿಡಿಯೋ ನೋಡಿ
8.87 ಸಾವಿರ ಸಬ್ಸ್ಕ್ರೈಬರ್ ಹೊಂದಿರುವ ತನ್ನ ಯೂಟ್ಯೂಬ್ ಚಾನೆಲ್ ಅನ್ನು ನಿರ್ವಹಿಸುತ್ತಿರುವ ನೀಲೇಶ್ವರ್, ಹೆಚ್ಚಿನ ವೀಕ್ಷಣೆಗಳನ್ನು ಗಳಿಸಲು ಈ ಅಪಾಯಕಾರಿ ಸಾಹಸವನ್ನು ಕೈಗೊಳ್ಳಲು ನಿರ್ಧರಿಸಿದ್ದ. ಟವರ್ ಏರುತ್ತಿರುವುದನ್ನು ವಿಡಿಯೋ ಮಾಡಿ ಲೈವ್ ಬಿಡುವಂತೆ ತನ್ನ ಸ್ನೇಹಿತನಿಗೆ ಹೇಳಿದ್ದಾನೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ