7 ಕೆಜಿ ಚಿನ್ನದಿಂದ ತಯಾರಿಸಿದ ರಾಮಾಯಣ ಪುಸ್ತಕ; ಅಯೋಧ್ಯಾ ರಾಮನಿಗೆ ಸಮರ್ಪಿಸಿದ ನಿವೃತ್ತ ಐಎಎಸ್ ಅಧಿಕಾರಿ

|

Updated on: Apr 11, 2024 | 12:49 PM

ಸುಮಾರು 151 ಕೆಜಿ ತೂಕದ 'ರಾಮಚರಿತ ಮಾನಸ' ಪ್ರತಿಯನ್ನು 5 ಕೋಟಿ ರೂಪಾಯಿ ವೆಚ್ಚದಲ್ಲಿ ಸಿದ್ಧಪಡಿಸಲಾಗಿದೆ. 10,902 ಕಾವ್ಯಗಳನ್ನು ಒಳಗೊಂಡಿರುವ ರಾಮಾಯಣದ ಪ್ರತಿ ಪುಟವು 24 ಕ್ಯಾರೆಟ್ ಚಿನ್ನದಿಂದ ಲೇಪಿತವಾಗಿದೆ. ಈ ಚಿನ್ನದ ಪ್ರತಿಕೃತಿಯು ಸರಿಸುಮಾರು 480 ರಿಂದ 500 ಪುಟಗಳನ್ನು ಒಳಗೊಂಡಿದೆ.

7 ಕೆಜಿ  ಚಿನ್ನದಿಂದ ತಯಾರಿಸಿದ ರಾಮಾಯಣ ಪುಸ್ತಕ; ಅಯೋಧ್ಯಾ ರಾಮನಿಗೆ ಸಮರ್ಪಿಸಿದ ನಿವೃತ್ತ ಐಎಎಸ್ ಅಧಿಕಾರಿ
7 ಕೆಜಿ ಚಿನ್ನದಿಂದ ತಯಾರಿಸಿದ ರಾಮಾಯಣ ಪುಸ್ತಕ
Follow us on

ಅಯೋಧ್ಯೆ ಶ್ರೀ ರಾಮಜನ್ಮಭೂಮಿಯ ಶ್ರೀರಾಮ ಮಂದಿರದಲ್ಲಿ ಈಗಾಗಲೇ ರಾಮನವಮಿ ಆಚರಣೆ ಪ್ರಾರಂಭವಾಗಿದೆ. ರಾಮ ಮಂದಿರ ನಿರ್ಮಾಣದ ನಂತರ ಇದು ಮೊದಲ ರಾಮನವಮಿ. ಈ ಶುಭ ಸಂದರ್ಭದಲ್ಲಿ ಮಧ್ಯಪ್ರದೇಶದ ನಿವೃತ್ತ ಐಎಎಸ್ ಅಧಿಕಾರಿ ಸುಬ್ರಮಣಿಯನ್ ಲಕ್ಷ್ಮೀ ನಾರಾಯಣ್  ಅವರು ಚೈತ್ರ ನವರಾತ್ರಿಯ ಮೊದಲ ದಿನದಂದು ರಾಮ ಮಂದಿರ ಟ್ರಸ್ಟ್‌ಗೆ  ಸುವರ್ಣ ರಾಮಾಯಣವನ್ನು ಉಡುಗೊರೆಯಾಗಿ ನೀಡಿದ್ದಾರೆ. ಏಳು ಕಿಲೋ ಚಿನ್ನವನ್ನು ಬಳಸಿ ಮಾಡಿದ ಚಿನ್ನದ ಪುಟಗಳಲ್ಲಿ ಬರೆದ ರಾಮಾಯಣವನ್ನು ರಾಮನ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಲಕ್ಷ್ಮೀ ನಾರಾಯಣ್ ತಮ್ಮ ಇಡೀ ಜೀವಮಾನದ ಉಳಿತಾಯವನ್ನು ಬಾಲರಾಮನಿಗೆ ಅರ್ಪಿಸುವುದಾಗಿ ವಾಗ್ದಾನ ಮಾಡಿದ್ದರು.

ಸುಮಾರು 151 ಕೆಜಿ ತೂಕದ ‘ರಾಮಚರಿತ ಮಾನಸ’ ಪ್ರತಿಯನ್ನು 5 ಕೋಟಿ ರೂಪಾಯಿ ವೆಚ್ಚದಲ್ಲಿ ಸಿದ್ಧಪಡಿಸಲಾಗಿದೆ. 10,902 ಕಾವ್ಯಗಳನ್ನು ಒಳಗೊಂಡಿರುವ ರಾಮಾಯಣದ ಪ್ರತಿ ಪುಟವು 24 ಕ್ಯಾರೆಟ್ ಚಿನ್ನದಿಂದ ಲೇಪಿತವಾಗಿದೆ. ಈ ಚಿನ್ನದ ಪ್ರತಿಕೃತಿಯು ಸರಿಸುಮಾರು 480-500 ಪುಟಗಳನ್ನು ಒಳಗೊಂಡಿದೆ. ಇದನ್ನು ತಯಾರಿಸಲು 140 ಕೆಜಿಯಷ್ಟು ತಾಮ್ರವನ್ನು ಸಹ ಬಳಸಲಾಗಿದೆ.

“ನಿವೃತ್ತ ಅಧಿಕಾರಿ ಲಕ್ಷ್ಮೀ ನಾರಾಯಣ್ ಅವರು ವಿಷ್ಣು ದೇವರ ಕಟ್ಟಾ ಅನುಯಾಯಿಯಾಗಿದ್ದು, ಈ ಉದ್ದೇಶಕ್ಕಾಗಿ ಅವರು ಎಲ್ಲಾ ಉಳಿತಾಯವನ್ನು ದೇಣಿಗೆ ನೀಡಿದ್ದಾರೆ” ಎಂದು ರಾಮಮಂದಿರ ಟ್ರಸ್ಟ್‌ನ ಉಸ್ತುವಾರಿ ಪ್ರಕಾಶ್ ಗುಪ್ತಾ ಹೇಳಿದ್ದಾರೆ.

ಇದನ್ನೂ ಓದಿ: ರಾಮಮಂದಿರ ವಿನ್ಯಾಸದಲ್ಲಿ 5,000 ವಜ್ರಖಚಿತ ಹಾರ; ವ್ಯಾಪಾರಿಯಿಂದ ಅಯೋಧ್ಯಾ ರಾಮನಿಗೆ ಡೈಮಂಡ್ ನೆಕ್​ಲೇಸ್ ಸಮರ್ಪಣೆ

ಏಪ್ರಿಲ್ 9, ಮಂಗಳವಾರದಿಂದ ಅಯೋಧ್ಯೆಯಲ್ಲಿ ಶ್ರೀರಾಮ ನವಮಿ ಆಚರಣೆ ಆರಂಭವಾಗಿದೆ. ಅಯೋಧ್ಯೆಯ ಮಠದ ದೇವಾಲಯಗಳಲ್ಲಿ ರಾಮಕಥೆ, ರಾಮಲೀಲಾ ಮತ್ತು ಭಜನಾ ಸಂಧ್ಯಾವನ್ನು ಆಯೋಜಿಸಲಾಗುತ್ತಿದೆ. ದೇವಾಲಯದ ಗರ್ಭಗುಡಿಯಲ್ಲಿ ಬೆಳ್ಳಿಯ ಕಲಶವನ್ನು ಸ್ಥಾಪಿಸಲಾಗಿದ್ದು, 11 ಮಂದಿ ವೇದ ವಿದ್ವಾಂಸರು ವಾಲ್ಮೀಕಿ ರಾಮಾಯಣದ ನವಾಃ ಪಾರಾಯಣ, ರಾಮ ರಕ್ಷಾಸ್ತ್ರೋತ ಹಾಗೂ ದುರ್ಗಾ ಸಪ್ತಶತಿ ಪಠಿಸಿ ನವಮಿ ಮಹೋತ್ಸವಕ್ಕೆ ಚಾಲನೆ ನೀಡಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 10:35 am, Thu, 11 April 24