TTD Instructions To Ayodhya: ಅಯೋಧ್ಯೆ ಬಾಲರಾಮನ ದರ್ಶನಕ್ಕಾಗಿ ಕ್ಯೂ ವ್ಯವಸ್ಥೆ – ಅಯೋಧ್ಯೆ ಟ್ರಸ್ಟ್‌ಗೆ ಟಿಟಿಡಿ ಸಲಹೆ ಸೂಚನೆ

Queue management in Ayodhya: ಬಾಲರಾಮನ ದೇಗುಲಕ್ಕೆ ಬರುವ ಭಕ್ತರಿಗೆ ತೃಪ್ತಿಕರ ದರ್ಶನ ನೀಡಲು ಎಂತಹ ವ್ಯವಸ್ಥೆ ಮಾಡಬೇಕು ಎಂದು ಟಿಟಿಡಿ ಇಒ ಅವರನ್ನು ಅಯೋಧ್ಯೆ ಟ್ರಸ್ಟ್‌ ಸದಸ್ಯರು ಕೇಳಿದ್ದರು. ಕ್ಯೂ ಲೈನ್‌ಗಳ ನಿರ್ವಹಣೆಗೆ ಸಂಬಂಧಿಸಿದಂತೆ ಟಿಟಿಡಿ ಎಂಜಿನಿಯರಿಂಗ್ ಅಧಿಕಾರಿಗಳು ಹಲವಾರು ಸಲಹೆಗಳನ್ನು ನೀಡಿದ್ದಾರೆ.

TTD Instructions To Ayodhya: ಅಯೋಧ್ಯೆ ಬಾಲರಾಮನ ದರ್ಶನಕ್ಕಾಗಿ ಕ್ಯೂ ವ್ಯವಸ್ಥೆ - ಅಯೋಧ್ಯೆ ಟ್ರಸ್ಟ್‌ಗೆ ಟಿಟಿಡಿ ಸಲಹೆ ಸೂಚನೆ
ಅಯೋಧ್ಯೆ ಬಾಲರಾಮನ ದರ್ಶನಕ್ಕಾಗಿ ಕ್ಯೂ ವ್ಯವಸ್ಥೆ: ಟಿಟಿಡಿ ಸಲಹೆ ಸೂಚನೆ
Follow us
ಸಾಧು ಶ್ರೀನಾಥ್​
|

Updated on:Feb 19, 2024 | 1:59 PM

ಅಯೋಧ್ಯೆ ರಾಮ ಮಂದಿರದಲ್ಲಿ ಭಕ್ತರ ದಟ್ಟಣೆಯನ್ನು ಕ್ರಮಬದ್ಧಗೊಳಿಸುವ ಬಗ್ಗೆ ಅಂದರೆ ಕ್ಯೂ ವ್ಯವಸ್ಥೆ ಬಗ್ಗೆ ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಲಿ ಪದಾಧಿಕಾರಿಗಳು (ಟಿಟಿಡಿ TTD) ಅಯೋಧ್ಯೆ ಟ್ರಸ್ಟ್‌ನ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ. ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರತಿನಿಧಿಗಳೊಂದಿಗೆ ಅವರು ಭಕ್ತರ ಹರಿವನ್ನು ನಿಯಂತ್ರಿಸುವ ಜೊತೆಗೆ ಸರತಿ ಸಾಲುಗಳ ನಿರ್ವಹಣೆಯ ಬಗ್ಗೆ ಚರ್ಚಿಸಿದರು. ಟಿಟಿಡಿ ಇ ಒ ಎ ವಿ ಧರ್ಮ ರೆಡ್ಡಿ ನೇತೃತ್ವದ ದೇವಾಸ್ಥಾನದ ಅಧಿಕಾರಿಗಳ ತಂಡ ಜಾಗೃತಿ ಮೂಡಿಸಿತು. ಟ್ರಸ್ಟ್‌ನ ಮನವಿಯಂತೆ ಟಿಟಿಡಿ ಅಧಿಕಾರಿಗಳು ಅಯೋಧ್ಯೆಗೆ ತೆರಳಿದ್ದರು. ಟ್ರಸ್ಟ್ ಕಚೇರಿಯಲ್ಲಿ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಾಯಿತು (Queue management in Ayodhya).

ಬಾಲರಾಮನ ದೇಗುಲಕ್ಕೆ ಬರುವ ಭಕ್ತರಿಗೆ ತೃಪ್ತಿಕರ ದರ್ಶನ ನೀಡಲು ಎಂತಹ ವ್ಯವಸ್ಥೆ ಮಾಡಬೇಕು ಎಂದು ಟಿಟಿಡಿ ಇಒ ಅವರನ್ನು ಕೇಳಲಾಯಿತು. ಕ್ಯೂ ಲೈನ್‌ಗಳ ನಿರ್ವಹಣೆಗೆ ಸಂಬಂಧಿಸಿದಂತೆ ಟಿಟಿಡಿ ಎಂಜಿನಿಯರಿಂಗ್ ಅಧಿಕಾರಿಗಳು ಹಲವಾರು ಸಲಹೆಗಳನ್ನು ನೀಡಿದ್ದಾರೆ.

Also Read: ಪವಡಿಸು ಪರಮಾತ್ಮ… ಬಾಲ ರಾಮನಿಗೆ ಬೇಕು ವಿಶ್ರಾಂತಿ: ಇನ್ನು ಅಯೋಧ್ಯೆ ಮಂದಿರವನ್ನು 1 ಗಂಟೆ ಕಾಲ ಮುಚ್ಚಲಾಗುವುದು

ಬಳಿಕ ಬಾಲರಾಮನ ದರ್ಶನ ಏರ್ಪಡಿಸಿದ್ದ ದೇವಸ್ಥಾನದ ಟ್ರಸ್ಟ್‌ನ ಪ್ರತಿನಿಧಿಗಳು ಟಿಟಿಡಿ ಅಧಿಕಾರಿಗಳಿಗೆ ತೀರ್ಥಪ್ರಸಾದ ವಿತರಿಸಿದರು. ಅಯೋಧ್ಯೆ ಟ್ರಸ್ಟ್‌ನ ಪ್ರತಿನಿಧಿಗಳಾದ ಡಾ.ಅನಿಲ್ ಮಿಶ್ರಾ, ಗೋಪಾಲ್ ಜಿ, ಜಗದೀಶ್ ಆಫ್ಲೆ, ಗಿರೀಶ್ ಸಹಸ್ರ ಭೋಜನಿ, ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿ ರಾಘವ್ ಹಾಗೂ ಟಿಟಿಡಿ ಇ ಒ ಜೊತೆಗೆ ದೇವಸ್ಥಾನದ ವಿಶೇಷ ತಂಡವೂ ಅಯೋಧ್ಯೆ ಭೇಟಿಯಲ್ಲಿ ಭಾಗವಹಿಸಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:59 pm, Mon, 19 February 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ