Baba Vanga Prediction 2025: ಜಗತ್ತಿನ ವಿನಾಶದ ಆರಂಭದ ವರ್ಷವಿದು; 2025ರಲ್ಲಿ ನಡೆಯಲಿರುವ ಘಟನೆಗಳ ಬಗ್ಗೆ ಶಾಕಿಂಗ್‌ ಭವಿಷ್ಯ ನುಡಿದ ಬಾಬಾ ವಂಗಾ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 06, 2024 | 10:24 AM

ಬಾಬಾ ವಂಗಾರ ಭವಿಷ್ಯವಾಣಿಗಳು ಆಗಾಗ್ಗೆ ಸುದ್ದಿಯಾಗುತ್ತಿರುತ್ತವೆ. ಇತ್ತೀಚಿಗಷ್ಟೇ ಇವರು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬಗ್ಗೆ ನುಡಿದಿದ್ದ ಭವಿಷ್ಯವಾಣಿಯ ಸುದ್ದಿ ಸಖತ್‌ ವೈರಲ್‌ ಆಗಿತ್ತು. ಇದೀಗ ಬಾಬಾ ವಂಗಾ ಹೊಸ ವರ್ಷ 2025 ರಲ್ಲಿ ಏನೆಲ್ಲಾ ಘಟನಾವಳಿಗಳು ನಡೆಯಲಿದೆ? ಜಗತ್ತು ಅಂತ್ಯದತ್ತ ಸಾಗಲಿದೆಯೇ? ಎಂಬ ಬಗ್ಗೆ ಭವಿಷ್ಯವಾಣಿಗಳನ್ನು ನುಡಿದಿದ್ದಾರೆ.

Baba Vanga Prediction 2025: ಜಗತ್ತಿನ ವಿನಾಶದ ಆರಂಭದ ವರ್ಷವಿದು; 2025ರಲ್ಲಿ ನಡೆಯಲಿರುವ ಘಟನೆಗಳ ಬಗ್ಗೆ ಶಾಕಿಂಗ್‌ ಭವಿಷ್ಯ ನುಡಿದ ಬಾಬಾ ವಂಗಾ
ಬಾಬಾ ವಂಗಾ ಭವಿಷ್ಯ
Follow us on

ಭವಿಷ್ಯವಾಣಿಗಳಿಗೆ ಹೆಸರುವಾಸಿಯಾಗಿರುವ ಬಲ್ಗೇರಿಯಾದ ಬಾಂಬಾ ವಂಗಾ ಅವರು ನುಡಿದಿರುವ ಹೆಚ್ಚಿನ ಭವಿಷ್ಯವಾಣಿಗಳು ನಿಜವಾಗಿವೆ. ಹೌದು ಅಮೆರಿಕದ ಮೇಲೆ ಉಗ್ರರ ದಾಳಿ, ಕೋವಿಡ್‌ ಸಾಂಕ್ರಾಮಿಕ ರೋಗ ಮುಂತಾದ ಪ್ರಮುಖ ಘಟನಾವಳಿಗಳ ಬಗ್ಗೆ ಅವರು ನುಡಿದಿದ್ದ ಭವಿಷ್ಯ ನಿಜವಾಗಿತ್ತು. ಇತ್ತೀಚಿಗಷ್ಟೇ ಅವರು ಡೊನಾಲ್ಡ್‌ ಟ್ರಂಪ್‌ ಬಗ್ಗೆ ನುಡಿದಿದ್ದ ಶಾಕಿಂಗ್‌ ಭವಿಷ್ಯವಾಣಿಯ ಸುದ್ದಿಯೊಂದು ಸಖತ್‌ ವೈರಲ್‌ ಆಗಿತ್ತು. ಇದೀಗ ಅವರು ಹೊಸ ವರ್ಷ 2025 ರಲ್ಲಿ ಏನೆಲ್ಲಾ ಘಟನಾವಳಿಗಳು ನಡೆಯಲಿದೆ? ಜಗತ್ತು ಅಂತ್ಯದತ್ತ ಸಾಗಲಿದೆಯೇ? ಎಂಬ ಬಗ್ಗೆ ಭವಿಷ್ಯವಾಣಿಗಳನ್ನು ನುಡಿದಿದ್ದಾರೆ.

1966 ರಲ್ಲಿ ಮರಣ ಹೊಂದಿದ ಬಾಬಾ ವಂಗಾ ತನ್ನ ಅತೀಂದ್ರಿಯ ಶಕ್ತಿಗಳ ಮೂಲಕ 51ನೇ ಶತಮಾನದ ವರೆಗೆ ಭೂಮಿಯ ಮೇಲೆ ಘಟಿಸಲಿರುವ ಪ್ರಮುಖ ಸಂಗತಿಗಳ ಬಗ್ಗೆ ಭವಿಷ್ಯವಾಣಿಗಳನ್ನು ಮೊದಲೇ ನುಡಿದಿದ್ದಾರೆ. ಅವರು ಕೋವಿಡ್ ಸಾಂಕ್ರಾಮಿಕ ರೋಗ, ಅಮೆರಿಕ ಮೇಲೆ ಉಗ್ರರ ದಾಳಿ, ಜಪಾನ್ ಪ್ರವಾಹ, ಆರ್ಥಿಕ ಬಿಕ್ಕಟ್ಟು ಮುಂತಾದ ಪ್ರಮುಖ ಘಟನಾವಳಿಗಳ ಬಗ್ಗೆ ನುಡಿದಿದ್ದ ಭವಿಷ್ಯವಾಣಿಗಳು ನಿಜವಾಗಿತ್ತು. ಅವರು 2025 ರಲ್ಲಿ ನಡೆಯಲಿರುವ ಪ್ರಮುಖ ಘಟನಾವಳಿಗಳ ಬಗ್ಗೆಯೂ ಭವಿಷ್ಯ ನುಡಿದಿದ್ದಾರೆ. ಅವರು ತಮ್ಮ ಭವಿಷ್ಯವಾಣಿಯಲ್ಲಿ ಮುಂದಿನ ವರ್ಷದಲ್ಲಿ ಏನೆಲ್ಲಾ ಹೇಳಿದ್ದಾರೆ ಎಂಬುದನ್ನು ನೋಡೋಣ ಬನ್ನಿ.

ಹೊಸ ವರ್ಷ 2025 ರ ಬಗ್ಗೆ ಬಾಬಾ ವಂಗಾ ಅವರ ಭವಿಷ್ಯವಾಣಿಗಳು:

ಯುರೋಪಿನ ವಿನಾಶ:

ಬಾಬಾ ವಂಗಾ ಅವರು ತಮ್ಮ ಭವಿಷ್ಯವಾಣಿಯಲ್ಲಿ ಯುರೋಪಿನಲ್ಲಿ ಆಂತರಿಕ ಕಲಹ, ಭೀಕರ ಯುದ್ಧವೊಂದು ನಡೆಯಲಿದೆ ಎಂಬುದನ್ನು ಉಲ್ಲೇಖಿಸಿದ್ದಾರೆ. ಈ ಸಂಘರ್ಷ ಎಲ್ಲೆಡೆ ಭಾರಿ ವಿನಾಶವನ್ನು ಉಂಟುಮಾಡುತ್ತದೆ. ಮತ್ತು ಈ ಕಾರಣದಿಂದಾಗಿ, ಯುರೋಪ್ ಖಂಡದಲ್ಲಿ ಜನ ಸಂಖ್ಯೆಯೂ ಕುಸಿಯುತ್ತಾ ಹೋಗಿ ನಂತರದ ವರ್ಷಗಳಲ್ಲಿ ಇಡೀ ಜಗತ್ತು ಅವನತಿಯತ್ತ ಸಾಗಬಹುದು ಎಂದು ಭವಿಷ್ಯ ವಾಣಿಯಲ್ಲಿ ಹೇಳಿದ್ದಾರೆ.

ಏಲಿಯನ್‌ಗಳೊಂದಿಗೆ ಮಾನವನ ಸಂಭಾಷಣೆ:

ಬಾಬಾ ವಂಗಾ ಅವರು 2025 ರಲ್ಲಿ ನಡೆಯಲಿರುವ ಇನ್ನೊಂದು ಪ್ರಮುಖ ಘಟನಾವಳಿಯ ಬಗ್ಗೆ ಭವಿಷ್ಯ ನುಡಿದಿದ್ದು, 2025 ರಲ್ಲಿ, ಭೂಮಿಯಿಂದ ಹೊರಗಿರುವ ಅನ್ಯಗ್ರಹ ಜೀವಿಗಳು ಅಂದರೆ ಏಲಿಯನ್ಸ್‌ಗಳೊಂದಿದೆ ಸಂವಹನವನ್ನು ನಡೆಸುವಲ್ಲಿ ಮಾನವರು ಯಶಸ್ವಿಯಾಗಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: 2024ರ ಕೊನೆಯಲ್ಲಿ ಮಾರಾಟವಾಗಲಿದೆ 5.10 ಲಕ್ಷ ಕೋಟಿ ಮೌಲ್ಯದ 3.05 ಲಕ್ಷ ಅಪಾರ್ಟ್‌ಮೆಂಟ್‌ಗಳು, ಇದರಲ್ಲಿ ಬೆಂಗಳೂರು ಒಂದು: ವರದಿ

ಪ್ರಯೋಗಾಲಯದಲ್ಲಿ ಮಾನವ ಅಂಗಾಂಗಗಳನ್ನು ತಯಾರಿಸಲಾಗುವುದು:

ವೈದ್ಯಕೀಯ ಮತ್ತು ವಿಜ್ಞಾನ ಕ್ಷೇತ್ರದ ಪ್ರಗತಿಯ ಬಗ್ಗೆಯೂ ಬಾಬಾ ವಂಗಾ ಭವಿಷ್ಯ ನುಡಿದಿದ್ದು, ಮುಂದಿನ ವರ್ಷಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಅವರ ಭವಿಷ್ಯ ಕ್ರಾಂತಿಕಾರಿ ಬದಲಾವಣೆಗಳು ನಡೆಯಲಿದೆ ಎಂದು ಹೇಳಿದ್ದಾರೆ. ಅಂದ್ರೆ ಮಾನವ ಅಂಗಗಳನ್ನು ಪ್ರಯೋಗಾಲಯದಲ್ಲಿ ತಯಾರಿಸಬಹುದು ಮತ್ತು ಇದುವರೆಗೆ ಗುಣಪಡಿಸಲಾಗದ ಕ್ಯಾನ್ಸರ್‌, ಇತ್ಯಾದಿ ಅನೇಕ ಕಾಯಿಲೆಗಳಿಗಳನ್ನು ಗುಣಡಿಸಲು ಉತ್ತಮ ಗುಣಮಟ್ಟ ಚಿಕಿತ್ಸಾ ವ್ಯವಸ್ಥೆಗಳು ಕೂಡಾ ಬರಲಿದೆ ಎಂದು ಹೇಳಿದ್ದಾರೆ.

ವಿನಾಶದ ಆರಂಭ:

ಬಾಬಾ ವಂಗಾ ಅವರ ಪ್ರಕಾರ, 2025 ರಲ್ಲಿ ದೊಡ್ಡ ಅನಾಹುತಗಳು ಸಂಭವಿಸಲಿದೆ. ಅದು ಇಡೀ ಭೂಮಿಯನ್ನೇ ಸರ್ವನಾಶಮಾಡುವ ವಿನಾಶಕ್ಕೆ ನಾಂದಿಯಾಗಲಿದೆ. ಮತ್ತು ಮಾನವೀಯತೆಯು ಸಂಪೂರ್ಣವಾಗಿ ನಾಶವಾಗದಿದ್ದರೂ, ಅದು ಅದರ ಅಂತ್ಯವನ್ನು ಪ್ರಾರಂಭಿಸಲಿದೆ ಎಂದು ಉಲ್ಲೇಖಿಸಿದ್ದಾರೆ.

ಅಷ್ಟೇ ಅಲ್ಲದೆ 2043 ರ ಹೊತ್ತಿಗೆ ಯುರೋಪ್‌ನಲ್ಲಿ ಮುಸ್ಲಿಂ ಆಳ್ವಿಕೆ ಬರಲಿದೆ ಮತ್ತು 2076 ರ ವೇಳೆಗೆ ರಾಜಕೀಯದಲ್ಲಿ ಹಲವಾರು ಬದಲಾವಣೆಗಳಾಗಿ ಇಡೀ ಜಗತ್ತಿನಲ್ಲಿ ಕಮ್ಯುನಿಸ್ಟ್‌ ಆಳ್ವಿಕೆ ಬರಲಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ