2024ರ ಕೊನೆಯಲ್ಲಿ ಮಾರಾಟವಾಗಲಿದೆ 5.10 ಲಕ್ಷ ಕೋಟಿ ಮೌಲ್ಯದ 3.05 ಲಕ್ಷ ಅಪಾರ್ಟ್‌ಮೆಂಟ್‌ಗಳು, ಇದರಲ್ಲಿ ಬೆಂಗಳೂರು ಒಂದು: ವರದಿ

ಭಾರತದ ವಸತಿ ಮಾರುಕಟ್ಟೆಯು ಅಭಿವೃದ್ಧಿಯನ್ನು ಹೊಂದಿದ್ದು, 2024 ರ ಕೊನೆಯಲ್ಲಿ ಹೌಸಿಂಗ್‌ ಮಾರ್ಕೆಟ್‌ ಹೊಸ ದಾಖಲೆಯೊಂದನ್ನು ನಿರ್ಮಿಸುವುದರಿಲ್ಲದೆ. ಹೌದು ವರದಿಗಳ ಪ್ರಕಾರ ಈ ವರ್ಷದ ಕೊನೆಯಲ್ಲಿ ಅಂದಾಜು 5.1 ಟ್ರಿಲಿಯನ್ ಮೌಲ್ಯದ ಅಪಾರ್ಟ್‌ಮೆಂಟ್‌ಗಳು ಭಾರತದ ಈ ಏಳು ಪ್ರಮುಖ ನಗರಗಳಲ್ಲಿ ಮಾರಾಟವಾಗುವ ನಿರೀಕ್ಷೆಯಿದೆ.

2024ರ ಕೊನೆಯಲ್ಲಿ ಮಾರಾಟವಾಗಲಿದೆ 5.10 ಲಕ್ಷ ಕೋಟಿ ಮೌಲ್ಯದ 3.05 ಲಕ್ಷ ಅಪಾರ್ಟ್‌ಮೆಂಟ್‌ಗಳು, ಇದರಲ್ಲಿ ಬೆಂಗಳೂರು ಒಂದು: ವರದಿ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 05, 2024 | 5:42 PM

ಇತ್ತೀಚಿಗೆ ಭಾರತದ ವಸತಿ ಮಾರುಕಟ್ಟೆಯು ಅಭಿವೃದ್ಧಿಯತ್ತ ಸಾಗುತ್ತಿದ್ದು, ಈ ವಸತಿ ಮಾರುಕಟ್ಟೆ 2024 ರ ಕೊನೆಯಲ್ಲಿ ಹೊಸ ದಾಖಲೆಯೊಂದನ್ನು ನಿರ್ಮಿಸುವುವ ಹಾದಿಯಲ್ಲಿದೆ. ವರದಿಗಳ ಪ್ರಕಾರ 2024 ರ ಕೊನೆಯಲ್ಲಿ ಅಂದರೆ ನಾಲ್ಕನೇ ತ್ರೈಮಾಸಿಕದಲ್ಲಿ ಅಂದಾಜು 5.1 ಟ್ರಿಲಿಯನ್‌ ಮೌಲ್ಯದ ಮನೆಗಳು ಭಾರತದ ಏಳು ಪ್ರಮುಖ ನಗರಗಳಲ್ಲಿ ಮಾರಾಟವಾಗುವ ನಿರೀಕ್ಷೆಯಿದೆ. ಇದು ಹೊಸ ದಾಖಲೆ ನಿರ್ಮಿಸಲಿದ್ದು, ಒಟ್ಟು 485 ಮಿಲಿಯನ್‌ ಚದರ ಅಡಿ ವಿಸ್ತೀರ್ಣದ 3 ಲಕ್ಷ ಮನೆಗಳು ಮಾರಾಟವಾಗುವ ನಿರೀಕ್ಷೆಯಿದೆ. ಕೋವಿಡ್‌ ನಂತರ ಹೌಸಿಂಗ್‌ ಮಾರುಕಟ್ಟೆ ಕೊಂಚ ಚೇತರಿಕೆಯನ್ನು ಕಂಡಿದ್ದು, 2023 ರಲ್ಲಿ 2.7 ಲಕ್ಷ ಮನೆಗಳು ಮಾರಾಟವಾಗಿದ್ದವು. ಇದೀಗ 2024 ರ ಕೊನೆಯಲ್ಲಿ 3.1 ಲಕ್ಷ ಅಪಾರ್ಟ್‌ಮೆಂಟ್‌ಗಳು ಮಾರಾಟವಾಗಲಿದೆ ಅಂದಾಜಿಸಲಾಗಿದೆ.

ಜಾಗತಿಕ ರಿಯಲ್ ಎಸ್ಟೇಟ್ ಸೇವಾ ಕಂಪನಿ JLL ಇಂಡಿಯಾ ಪ್ರಸ್ತಕ ವರ್ಷದ ಕೊನೆಯಲ್ಲಿ 5.10 ಲಕ್ಷ ಕೋಟಿ ಮೌಲ್ಯದ 3.05 ಲಕ್ಷ ಅಪಾರ್ಟ್‌ಮೆಂಟ್‌ಗಳು ಭಾರತದ ಏಳು ಪ್ರಮುಖ ನಗರಗಳಾದ ದೆಹಲಿ-ಎನ್‌ಸಿಆರ್, ಮುಂಬೈ, ಪುಣೆ, ಕೋಲ್ಕತ್ತಾ, ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್‌ಗಳಲ್ಲಿ ಮಾರಾಟವಾಗುವ ನಿರೀಕ್ಷೆಯಿದೆ ಎಂಬುದನ್ನು ತಿಳಿಸಿದೆ.

ಈ ವರ್ಷ ವಸತಿ ಮಾರಾಟವು ಆರೋಗ್ಯಕರ ರೀತಿಯಲ್ಲಿದ್ದು, 2024 ರ ಮೊದಲ ಮೂರು ತ್ರೈಮಾಸಿಕದಲ್ಲಿ (ಜನವರಿಯಿಂದ ಸೆಪ್ಟೆಂಬರ್)‌ ಈ ಅಗ್ರ ಏಳು ನಗರಗಳಲ್ಲಿ ಸುಮಾರು 380,000 ಕೋಟಿ ಮೌಲ್ಯದ 230,000 ಅಪಾರ್ಟ್‌ಮೆಂಟ್‌ಗಳು ಮಾರಾಟವಾಗಿದೆ. ಇನ್ನೂ ಹಬ್ಬದ ಋತುವಾದ ನಾಲ್ಕನೇ ತ್ರೈಮಾಸಿಕದಲ್ಲಿ (ಅಕ್ಟೋಬರ್‌-ಡಿಸೆಂಬರ್)‌ 5.10 ಲಕ್ಷ ಕೋಟಿ ಮೌಲ್ಯದ 3.05 ಲಕ್ಷ ಅಪಾರ್ಟ್‌ಮೆಂಟ್‌ಗಳು ಮಾರಾಟವಾಗುವ ನಿರೀಕ್ಷೆಯಿದೆ ಎಂಬುದನ್ನು ಕೂಡಾ JLL ಇಂಡಿಯಾ ತಿಳಿಸಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ನಂದಿನಿ ಇಡ್ಲಿ-ದೋಸೆ ಹಿಟ್ಟಿನ ಬಿಡುಗಡೆ ವಿಳಂಬ; ಕಾರಣ ಏನು?

ಜೆಎಲ್‌ಎಲ್‌ನ ಭಾರತದ ಸಂಶೋಧನಾ ಮುಖ್ಯಸ್ಥ ಮತ್ತು ಆರ್‌ಇಐಎಸ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಡಾ ಸಮಂತಕ್ ದಾಸ್, “2024 ರ ಮೊದಲ ಒಂಬತ್ತು ತಿಂಗಳಲ್ಲಿ ಅಗ್ರ ಏಳು ನಗರಗಳಲ್ಲಿ ಸುಮಾರು 3.8 ಲಕ್ಷ ಕೋಟಿ ರೂಪಾಯಿ ಮೌಲ್ಯದ ಮನೆಗಳನ್ನು ಈಗಾಗಲೇ ಮಾರಾಟ ಮಾಡಲಾಗಿದೆ, ಬಂಡವಾಳ ಮೌಲ್ಯವು ಒಟ್ಟಾರೆಯಾಗಿ ಬೆಳವಣಿಗೆಯಾಗಿದ್ದು, ಇದರಿಂದಾಗಿ ಅಪಾರ್ಟ್‌ಮೆಂಟ್‌ನ ಸರಾಸರಿ ಬೆಲೆಯೂ 1.64 ಕೋಟಿ ರೂ.ಗೆ ಏರಿದೆ” ಎಂದು ಹೇಳಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ