Viral Video: ನದಿಯಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ವ್ಯಕ್ತಿ; ಹೃದಯಸ್ಪರ್ಶಿ ವಿಡಿಯೋ ವೈರಲ್

ನದಿಯಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ವ್ಯಕ್ತಿ ರಕ್ಷಿಸಿದ್ದಾನೆ. ಹೃದಯಸ್ಪರ್ಶಿ ವಿಡಿಯೋ ಇದೀಗ ಫುಲ್​ ವೈರಲ್​ ಆಗಿದೆ. ವಿಡಿಯೋ ಇದೆ ನೀವೂ ನೋಡಿ.

Viral Video: ನದಿಯಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ವ್ಯಕ್ತಿ; ಹೃದಯಸ್ಪರ್ಶಿ ವಿಡಿಯೋ ವೈರಲ್
ನದಿಯಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ವ್ಯಕ್ತಿ ರಕ್ಷಿಸುತ್ತಿದ್ದಾನೆ
Edited By:

Updated on: Oct 24, 2021 | 12:06 PM

ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೋಗಳು ಹರಿದಾಡುತ್ತವೆ. ಅವುಗಳಲ್ಲಿ ಕೆಲವು ವಿಡಿಯೋಗಳು ಮಾತ್ರ ಮನ ಗೆಲ್ಲುತ್ತವೆ. ಅಂತಹ ವಿಡಿಯೋಗಳೇ ಹೆಚ್ಚು ವೈರಲ್ ಆಗುವುದು. ಇದೀಗ ವೈರಲ್ ಆಗಿರುವ ದೃಶ್ಯದಲ್ಲಿ ಗಮನಿಸುವಂತೆ ತನ್ನ ಪ್ರಾಣವನ್ನು ಪಣಕ್ಕಿಟ್ಟು ಜಿಂಕೆ ಮರಿಯನ್ನು ವ್ಯಕ್ತಿ ರಕ್ಷಿಸಿದ್ದಾನೆ. ವಿಡಿಯೊ ಇದೀಗ ಫುಲ್ ವೈರಲ್​ ಆಗಿದೆ.

ವಿಡಿಯೋದಲ್ಲಿ ಗಮನಿಸುವಂತೆ ಜಿಂಕೆ ಮರಿ ನೀರಿನಲ್ಲಿ ಮುಳುಗುತ್ತಿರುತ್ತದೆ. ಅದನ್ನು ಗಮನಿಸಿದ ವ್ಯಕ್ತಿ ತಡ ಮಾಡದೇ ಮರಿಯನ್ನು ರಕ್ಷಿಸಲು ಮುಂದಾಗಿದ್ದಾನೆ. ಕೆಳಗೆ ಬಿದ್ದ ಮರದ ಸಹಾಯದಿಂದ ಜಿಂಕೆ ಮರಿಯನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದಾನೆ. ಈ ವಿಡಿಯೊ ನೆಟ್ಟಿಗರ ಮನ ಗೆದ್ದಿದ್ದು ಫುಲ್ ವೈರಲ್ ಆಗಿದೆ.

30 ಸೆಕೆಂಡುಗಳಿರುವ ವಿಡಿಯೋ ಕ್ಲಿಪ್​ನಲ್ಲಿ ಗಮನಿಸುವಂತೆ ನೀರಿನಲ್ಲಿ ಮುಳಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿ ದಡಕ್ಕೆ ತರುತ್ತಿರುವುದನ್ನು ನೋಡಬಹುದು. ಅಕ್ಟೋಬರ್ 22ರಂದು ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ. ಐಎಫ್ಎಸ್ ಅಧಿಕಾರಿ ಸುಸಂತ ನಂದಾ ಟ್ವಿಟರ್​ನಲ್ಲಿ ಈ ಹೃದಯಸ್ಪರ್ಶಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಇದುವರೆಗೆ ವಿಡಿಯೋ 22 ಸಾವಿರಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಗಳಿಸಿಕೊಂಡಿದೆ. ಮನ ಮೆಚ್ಚಿದ ವಿಡಿಯೋ ನೋಡಿ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇತರರಿಗೆ ಸಹಾಯ ಮಾಡುವ ಮೂಲಕ ನಮ್ಮನ್ನು ನಾವು ತೊಡಗಿಸಿಕೊಂಡರೆ ನಾವು ಜೀವನದಲ್ಲಿ ಸಂತೋಷವಾಗಿರಬಹುದು ಎಂದು ಓರ್ವರು ಹೇಳಿದ್ದಾರೆ. ಜಿಂಕೆ ಮರಿಯ ಜೀವ ಉಳಿಸಿದ ವ್ಯಕ್ತಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಇದನ್ನೂ ಓದಿ:

Viral Video: ಮನಿಕೆ ಮಗೆ ಹಿತೆ ಹಾಡಿಗೆ ಮಹಿಳೆಯ ಬಿಹು ನೃತ್ಯ ಪ್ರದರ್ಶನ; ವಿಡಿಯೋ ನೋಡಿ

Viral Video: ವಧುವಿಗೆ ರೊಟ್ಟಿ ತಯಾರಿಸಲು ಸಹಾಯ ಮಾಡಿದ ವರ! ಅತಿಥಿಗಳೆಲ್ಲಾ ತಮಾಷೆ ಮಾಡಿ ನಕ್ಕ ವಿಡಿಯೋವಿದು