
ಮರಿಯಾನೆಗಳ (elephant) ತುಂಟಾಟವನ್ನು ನೋಡುವುದೇ ಖುಷಿ. ಹೌದು, ತನ್ನನ್ನು ಕಾಳಜಿ ವಹಿಸುವ ವ್ಯಕ್ತಿಯ ಜತೆಗೆ ತುಂಟಾಟಕ್ಕಿಗಿಳಿಯುತ್ತವೆ . ಇದೀಗ ಈ ದೃಶ್ಯವು ಪರಿಶುದ್ಧ ಪ್ರೀತಿ ಕಾಳಜಿಗೆ ಸಾಕ್ಷಿಯಾಗಿದೆ. ನೀರಿನಲ್ಲಿ ಈಜುತ್ತಿದ್ದ ಕೇರ್ ಟೇಕರ್ ಅಟ್ಟಾಡಿಸಿಕೊಂಡು ಹೋದ ಮರಿಯಾನೆ ವಿಡಿಯೋ ವೈರಲ್ ಆಗಿದೆ. ಮರಿಯಾನೆ ಜತೆಗೆ ಯುವಕನ ತುಂಟಾಟಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.
ಜಂಗಲ್ ಎಲಿಫೆಂಟ್ ಸ್ಯಾಂಚುರಿ (jungleelephantsanctuary7) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ತಾಯಾನೆ ಜತೆಗೆ ಮರಿಯಾನೆ ಈಜಾಡುತ್ತಿದೆ. ಇದೇ ವೇಳೆ ಕೇರ್ ಟೇಕರ್ ಈಜಾಡುವುದನ್ನು ನೋಡುತ್ತಿದ್ದಂತೆ ಆತನನ್ನು ಅಟ್ಟಾಡಿಸಿಕೊಂಡು ಹೋಗಿ ತುಂಟಾಟ ಆಡಿರುವುದನ್ನು ಕಾಣಬಹುದು.
ಇದನ್ನೂ ಓದಿ: ತಪ್ಪು ಸಣ್ಣದಿರಲಿ, ದೊಡ್ಡದಿರಲಿ ತಪ್ಪು ತಪ್ಪೇ; ಆನೆಗಳ Ai ವೀಡಿಯೊ ಮೂಲಕ ಯುಪಿ ಪೊಲೀಸರ ಜಾಗೃತಿ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಕ್ಯೂಟ್ ದೃಶ್ಯ ಎಂದರೆ, ಮತ್ತೊಬ್ಬರು, ಶುದ್ಧ ಪ್ರೀತಿ ಎಂದು ಹೇಳಿದ್ದಾರೆ. ಇನ್ನೊಬ್ಬರು, ಮತ್ತೆ ಮತ್ತೆ ನೋಡಬೇಕೆನಿಸುವ ದೃಶ್ಯ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ