
ಪುಟಾಣಿ ಮರಿಯಾನೆಗಳ (baby elephant) ಮುದ್ದು ಮುದ್ದಾದ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಈ ಮರಿಯಾನೆಗಳು ತನ್ನ ಸಂಗಡಿಗರು, ಮಾಲೀಕರು ಹಾಗೂ ಮಕ್ಕಳ ಜತೆಯಲ್ಲಿ ಪ್ರೀತಿ ಸಲುಗೆಯಿಂದ ವರ್ತಿಸುತ್ತವೆ. ಇದಕ್ಕೆ ಸಾಕ್ಷಿಯಾಗಿದೆ ಈ ವಿಡಿಯೋ. ಪುಟ್ಟ ಬಾಲಕನೊಂದಿಗೆ (little boy) ಮರಿಯಾನೆ ಆಟ ಆಡುತ್ತಿದ್ದು, ಈ ವೇಳೆ ಮರಿಯಾನೆಯೂ ತನ್ನ ಮುದ್ದಾದ ನಟನೆಯಿಂದ ಗಮನ ಸೆಳೆದಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಇದು ನಿಜವೇ ಎಂದು ಕೇಳಿದ್ದಾರೆ.
@Hinduism_sci ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ, ‘ಇಂದಿನ ಇಂಟರ್ನೆಟ್‌ನಲ್ಲಿ ಅತ್ಯಂತ ಸುಂದರವಾದ ವೀಡಿಯೊ’ ಎಂದು ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ ಪುಟಾಣಿಯೊಂದು ಮರಿಯಾನೆಯೊಂದಿಗೆ ಆಟ ಆಡುತ್ತಿರುವುದನ್ನು ಕಾಣಬಹುದು. ಮಗು ಕೈಯಲ್ಲಿ ಆಟಿಕೆ ಗನ್ ಹಿಡಿದಿದೆ. ತಮಾಷೆಯಾಗಿ, ಮಗು ಮರಿಯಾನೆಯ ಕಡೆಗೆ ಗನ್ ಗುರಿಯಿಡುತ್ತದೆ. ಈ ಗನ್‌ನಿಂದ ನೀರನ್ನು ಹಾರಿಸುತ್ತಿದ್ದಂತೆ, ಮರಿಯಾನೆಯು ನೆಲಕ್ಕೆ ಬಿದ್ದಂತೆ ನಟಿಸುತ್ತದೆ.
Most beautiful video on internet today 😍🥹 pic.twitter.com/3EO7cfrmjJ
— Hinduism_and_Science (@Hinduism_sci) January 20, 2026
ಮರಿಯಾನೆಯು ನೆಲದಿಂದ ಎದ್ದೇಳದಿದ್ದಾಗ ಪುಟ್ಟ ಬಾಲಕನು ಗಾಬರಿಗೊಳ್ಳುತ್ತದೆ. ತನ್ನ ಕೈಯಲ್ಲಿದ್ದ ನೀರಿನ ಗನ್ ಎಸೆದು, ತಕ್ಷಣ ಆನೆಯತ್ತ ಓಡಿ ಹೋಗುವುದನ್ನು ಕಾಣಬಹುದು. ನಂತರ ಪುಟಾಣಿಯೂ ಮರಿಯಾನೆಯನ್ನು ಪ್ರೀತಿಯಿಂದ ಅಪ್ಪಿಕೊಂಡು ಮುದ್ದಾಡುತ್ತದೆ. ಈ ವೇಳೆ ಮರಿಯಾನೆ ಮೆಲ್ಲನೆ ಎದ್ದು ನಿಲ್ಲುವುದನ್ನು ನೀವಿಲ್ಲಿ ನೋಡಬಹುದು.
ಇದನ್ನೂ ಓದಿ: ತನಗೆ ಬೊಗಳಿದ ಶ್ವಾನವನ್ನು ಒದ್ದು ಓಡಿಸಿದ ಗಜರಾಜ
ಈ ವಿಡಿಯೋ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ತುಂಬಾ ಮುದ್ದಾಗಿದೆ ಎಂದರೆ, ಮತ್ತೊಬ್ಬ ಬಳಕೆದಾರ ಮತ್ತೆ ಮತ್ತೆ ನೋಡಬೇಕಾದ ವಿಡಿಯೋ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಮರಿಯಾನೆಯು ಆಸ್ಕರ್ ಪ್ರಶಸ್ತಿಗೆ ಅರ್ಹವಾಗಿದೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ