Video: ತನಗೆ ಬೊಗಳಿದ ಶ್ವಾನವನ್ನು ಒದ್ದು ಓಡಿಸಿದ ಗಜರಾಜ
ಪ್ರಾಣಿ ಸಾಮ್ರಾಜ್ಯದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಕೆಲ ದೃಶ್ಯಗಳು ಬಹುಬೇಗನೆ ನೆಟ್ಟಿಗರ ಮನಸ್ಸನ್ನು ಗೆಲ್ಲುತ್ತವೆ. ಇದೀಗ ಈ ದೃಶ್ಯವು ಆನೆ ಹಾಗೂ ಶ್ವಾನದ ಕಿತ್ತಾಟದ್ದಾಗಿದೆ. ತನಗೆ ಬೊಗಳಿದ ಶ್ವಾನಕ್ಕೆ ಆನೆಯೂ ಬುದ್ಧಿ ಕಲಿಸಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಆನೆಗಳು (Elephants) ಮಾಡುವ ಚೇಷ್ಟೆಗಳು, ತುಂಟಾಟಗಳು ನೋಡುವುದೇ ಖುಷಿ. ಆನೆಗಳ ತುಂಟಾಟದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಆದರೆ ಈ ಆನೆಗಳಿಗೆ ಕೋಪಬಂದರೆ ಅತೀರೇಕವಾಗಿ ವರ್ತಿಸುತ್ತವೆ. ಸುಖಾ ಸುಮ್ಮನೆ ತನ್ನೊಂದಿಗೆ ಕಿರಿಕ್ ಮಾಡಲು ಬರುವ ಯಾರನ್ನು ಕೂಡ ಸುಮ್ಮನೆ ಬಿಡಲ್ಲ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ತನಗೆ ಬೊಗಳಿದ ಶ್ವಾನವನ್ನು ಆನೆಯು ಒದ್ದು ಓಡಿಸಿದೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಲೆಕ್ ಚೈರ್ಲಟ್ (lek_chailert) ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಆನೆಗಳು ಸೇರಿರುವುದನ್ನು ನೀವು ನೋಡುತ್ತೀರಿ. ಅಲ್ಲೇ ಒಂದು ಬಿಳಿ ಶ್ವಾನವು ನಿಂತಿದೆ. ಈ ನಾಯಿಯೂ ಆನೆಯನ್ನು ನೋಡಿದ ತಕ್ಷಣ ಬೊಗಳಲು ಶುರು ಮಾಡುತ್ತದೆ. ಆದರೆ ಗಜರಾಜ ಪ್ರಾರಂಭದಲ್ಲಿ ಈ ಶ್ವಾನವನ್ನು ನಿರ್ಲಕ್ಷ್ಯ ಮಾಡುತ್ತದೆ. ನಾಯಿಯೂ ಮತ್ತೆ ಮತ್ತೆ ಬೊಗಳುತ್ತಿದ್ದಂತೆ ಆನೆಯು ಒದ್ದು ಬುದ್ಧಿ ಕಲಿಸುವುದನ್ನು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಇದನ್ನೂ ಓದಿ: ತಿನ್ನಲು ಹಣ್ಣು ನೀಡಿದ ಮಹಿಳೆಯೊಂದಿಗೆ ಸೇಬು ಹಣ್ಣಿಗಾಗಿ ಹಠ ಹಿಡಿದು ನಿಂತ ಮರಿಯಾನೆ
ಈ ವಿಡಿಯೋ ಒಂದು ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ನೋಡಲು ತುಂಬಾನೇ ಮುದ್ದಾಗಿದೆ ಎಂದಿದ್ದಾರೆ. ಇನ್ನೊಬ್ಬರು, 01% ದಾಳಿ ಹಾಗೂ 0% ಡ್ಯಾಮೇಜ್ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನನಗೆ ಈ ರೀತಿ ಬ್ಯಾಕ್ ಕಿಕ್ ಇಷ್ಟ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:58 pm, Tue, 20 January 26
