Video: ತಿನ್ನಲು ಹಣ್ಣು ನೀಡಿದ ಮಹಿಳೆಯೊಂದಿಗೆ ಸೇಬು ಹಣ್ಣಿಗಾಗಿ ಹಠ ಹಿಡಿದು ನಿಂತ ಮರಿಯಾನೆ
ಮರಿಯಾನೆಗಳೇ ಹಾಗೆ, ಆಟ ತುಂಟಾಟದಲ್ಲಿ ಎತ್ತಿದ ಕೈ. ಈ ಮರಿಯಾನೆಗಳ ಮುದ್ದು ಪೆದ್ದು ವಿಡಿಯೋಗಳು ಆಗಾಗ ನೆಟ್ಟಿಗರ ಕಣ್ಮನ ಸೆಳೆಯುತ್ತದೆ. ಇದೀಗ ಪುಟಾಣಿ ಆನೆಗೆ ಮಹಿಳೆಯೂ ತಿನ್ನಲು ಹಣ್ಣನ್ನು ನೀಡಿದ್ದಾಳೆ. ಆದರೆ ಈ ಮರಿಯಾನೆ ಮಾಡಿದ ಕೆಲಸ ನೋಡಿದ್ರೆ ನೀವು ಶಾಕ್ ಆಗ್ತೀರಾ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಮರಿಯಾನೆಗಳ (baby elephant) ಆಟ ತುಂಟಾಟಗಳನ್ನು ಕಣ್ತುಂಬಿಸಿಕೊಳ್ಳುವ ಖುಷಿಯೇ ಬೇರೆ. ಯಾರಾದ್ರೂ ಕೈಯಲ್ಲಿ ಹಣ್ಣುಗಳನ್ನು ಕಂಡರೆ ಮೆಲ್ಲನೆ ಹೋಗಿ ಹಣ್ಣುಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಆದರೆ ಮಹಿಳೆಯೊಬ್ಬಳು ಮರಿಯಾನೆಗೆ ತಿನ್ನಲು ಹಣ್ಣನ್ನು ನೀಡಿದ್ದಾಳೆ. ಬಾಳೆಹಣ್ಣು ತಿನ್ನಲು ನೀಡುತ್ತಿದ್ದಂತೆ ಬೇಡ ಎನ್ನುವಂತೆ ಸೊಂಡಿಲಿನಿಂದ ನೆಲಕ್ಕೆ ಎಸೆದಿದೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ.
tirthazoxo ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮಹಿಳೆಯೂ ಮರಿಯಾನೆಗೆ ಸೇಬು ಹಣ್ಣು ನೀಡಿದ್ದಾಳೆ. ಖುಷಿಯಿಂದಲೇ ತಿಂದ ಮರಿಯಾನೆಯು ಮಹಿಳೆ ನೀಡಿದ ಬಾಳೆಹಣ್ಣನ್ನು ಬೇಡ ಎಂದು ನೆಲಕ್ಕೆ ಎಸೆದಿದೆ. ಕೊನೆಗೆ ಎಸೆದ ಬಾಳೆಹಣ್ಣನ್ನೇ ತಿನ್ನುತ್ತಿರುವುದನ್ನು ನೋಡಬಹುದು. ಕೊನೆಗೆ ಈ ಮರಿಯಾನೆಗೆ ಆಪಲ್ ತಂದು ತಿನ್ನಲು ನೀಡಿದ್ದಾಳೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
View this post on Instagram
ಇದನ್ನೂ ಓದಿ:ಪುಟ್ಟ ಹುಡುಗಿಯನ್ನು ಜೋಪಾನವಾಗಿ ಶಾಲೆಗೆ ಬಿಟ್ಟು ಬರಲು ಹೊರಟ ಮರಿಯಾನೆ
ಈ ವಿಡಿಯೋ ಇಪ್ಪತ್ತೆಂಟು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ನಂಗೆ ಆಪಲ್ ಬೇಕು, ಪ್ಲೀಸ್ ಆಪಲ್ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಮುದ್ದಾಗಿದೆ ಈ ದೃಶ್ಯ ಎಂದಿದ್ದಾರೆ. ಮತ್ತೊಬ್ಬರು, ಬಾಳೆಹಣ್ಣು ಸಿಪ್ಪೆ ಸುಲಿದು ನೀಡಿದರೆ ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




