ಸಮುದ್ರದೊಳಗೆ ಭರತನಾಟ್ಯ ಮಾಡಿದ 14 ವರ್ಷದ ಬಾಲಕಿ, ವಿಡಿಯೋ ವೈರಲ್
ಪುದುಚೇರಿಯ 14 ವರ್ಷದ ಅಶ್ವಿನ್ ಬಾಲಾಳು ಎಂಬ ಹುಡುಗಿ 20 ಅಡಿ ಸಮುದ್ರದ ಆಳದಲ್ಲಿ ಭರತನಾಟ್ಯ ಮಾಡಿ ಇತಿಹಾಸ ಸೃಷ್ಟಿಸಿದ್ದಾಳೆ. ಪ್ಲಾಸ್ಟಿಕ್ ಮಾಲಿನ್ಯದಿಂದ ಸಾಗರವನ್ನು ಉಳಿಸಲು ಜಾಗೃತಿ ಮೂಡಿಸುವ ಸಲುವಾಗಿ ಈ ಸಾಹಸ ಮಾಡಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ನೃತ್ಯ ಪ್ರಪಂಚಕ್ಕೆ ಸಮುದ್ರ ಸಂರಕ್ಷಣೆ ಬಗ್ಗೆ ಪ್ರಬಲ ಸಂದೇಶ ರವಾನಿಸಿದೆ.
ಪುದುಚೇರಿ, ಡಿ.22: ಪುದುಚೇರಿಯ 14 ವರ್ಷದ ಬಾಲಕಿಯೊಬ್ಬಳು ಸಮುದ್ರದ ಒಳಗೆ ಭರತನಾಟ್ಯ ಮಾಡಿದ್ದಾಳೆ. ಇದೀಗ ಈ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. 20 ಅಡಿ ನೀರಿನ ಒಳಗೆ ಭರತನಾಟ್ಯ ಮಾಡಿರುವ ವಿಡಿಯೋ ವೈರಲ್ ಆಗಿದೆ. ಭರತನಾಟ್ಯ ಭಾರತೀಯ ಪ್ರಮುಖ ಕಲೆಯಾಗಿದ್ದು, ಗಡಿ, ಭಾಷೆಗಳನ್ನು ಮೀರಿ ನಿಂತಿದೆ. ಇದೀಗ ನೀರಿನ ಒಳಗೆ ಭರತಮಾಟ್ಯ ಮಾಡುವ ಮೂಲಕ ಹೊಸ ದಾಖಲೆಯನ್ನು ಈ ಹುಡುಗಿ ಮಾಡಿದ್ದಾಳೆ. ಅಶ್ವಿನ್ ಬಾಲಾಳು ಎಂಬು ಹುಡುಗಿ ಈ ನೃತ್ಯ ಪ್ರದರ್ಶನ ನೀಡಿದ್ದು, ಎಲ್ಲರ ಮೆಚ್ಚುಗೆ ಪಡೆದುಕೊಂಡಿದ್ದಾಳೆ. ಇಂಟರ್ನ್ಯಾಷನಲ್ ಡಾನ್ಸ್ ಡೇಯಂದು ಈ ಪ್ರದರ್ಶನ ನೀಡಿದ್ದು, ಸಮುದ್ರಕ್ಕೆ ಫ್ಲಾಸ್ಟಿಕ್ ಎಸೆಯಬೇಡಿ ಎಂಬ ಜಾಗೃತಿಯನ್ನು ಮೂಡಿಸಲು ಈ ಸಾಹಸವನ್ನು ಮಾಡಿದ್ದಾಳೆ. ಈ ಮೂಲಕ ಪ್ರಪಂಚಕ್ಕೆ ಸಮುದ್ರವನ್ನು ಮಾಲಿನ್ಯ ಮಾಡುವುದನ್ನು ತಡೆಗಟ್ಟಲು ಸಂದೇಶ ನೀಡಿದ್ದಾಳೆ. 2025 ಏಪ್ರಿಲ್‌ನಲ್ಲಿ ನಡೆದ ಈ ಪ್ರದರ್ಶನಕ್ಕೆ ಸಂಬಂಧಿಸಿದ 51 ವೀಡಿಯೊ ಕ್ಲಿಪ್ ಡಿಸೆಂಬರ್ 19 ರಂದು ರಿಪೋಸ್ಟ್ ಆಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವಿಡಿಯೋ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

