ರಾತ್ರಿ ಬೆಳಗಾಗುವಷ್ಟರಲ್ಲಿ ಇಂಟರ್ನೆಟ್ ಸೆನ್ಸೇಷನ್ ಕ್ರಿಯೆಟ್ ಮಾಡಿದ್ದ 10 ವರ್ಷದ ಬಾಲಕ ಸಹದೇವ್ ದಿರ್ಡೋ ಇದೀಗ NFT (Non Fungible Token) ಪ್ಲಾಟ್ಫಾರ್ಮ್ಗೆ ಕಾಲಿಡಲು ಮುಂದಾಗಿದ್ದಾರೆ. 2021ರ ಜುಲೈನಲ್ಲಿ ಬಚ್ ಪನ್ ಕಾ ಪ್ಯಾರ್ ಹಾಡಿದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಹದೇವ್ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ್ದರು. ಇದೀಗ ತಮ್ಮ ಸಂಗೀತದ ಆಲ್ಬಂಗಳನ್ನು ಶೇಖರಿಸಿಡಲು Non Fungible Token ಅನ್ನು ಲಾಂಚ್ ಮಾಡುತ್ತಿದ್ದಾರೆ.
ಸಹದೇವ್ ದಿರ್ಡೋ ಹೇಳಿದ ಬಚ್ ಪನ್ ಕಾ ಪ್ಯಾರ್ ಹಾಡು ಒಂದೇ ದಿನದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಬಾಲಿವುಡ್ನ ರಾಪ್ ಸಿಂಗರ್ ಬಾದ್ ಷಾ ಕೂಡ ಮೆಚ್ಚಿಕೊಂಡು ಸಹದೇವ್ ಅವರ ಹಾಡನ್ನು ರಾಪ್ ಸಾಂಗ್ಗೆ ಮಿಕ್ಸ್ ಮಾಡಿ ಹಾಡಿದ್ದರು. ಈ ಹಾಡು ನೆಟ್ಟಿಗರನ್ನು ಸೆಳೆದಿತ್ತು. ಕಳದೆ ತಿಂಗಳು ಸಹದೇವ್ ದಿರ್ಡೋ ರಸ್ತೆ ಅಪಘಾತಕ್ಕೆ ಒಳಗಾಗಿದ್ದರು. ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿ ತೀವ್ರವಾಗಿ ಗಾಯಗೊಂಡಿದ್ದರು. ಈ ವೇಳೆ ಬಾದ್ ಷಾ ಸಹದೇವ್ ಅವರ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ್ದರು. ಚತ್ತೀಸಗಡ ಸರ್ಕಾರ ಸಹದೇವ್ ಅವರ ಚಿಕಿತ್ಸೆಯ ವೆಚ್ಚವನ್ನು ಭರಿಸಿತ್ತು.
ಇದೀಗ ಚಿಕಿತ್ಸೆ ಪಡೆದು ಸಹದೇವ್ ಆಸ್ಪತ್ರೆಯಿಂದ ಹೊರಬಂದಿದ್ದಾರೆ. ವಿಡಿಯೋ ಮೂಲಕ ಚಿಕಿತ್ಸೆ ನೀಡಿದ ವೈದ್ಯರು ಮತ್ತು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಸಹದೇವ್ ಕಳೆದ ಜುಲೈನಲ್ಲಿ ಶಾಲೆಯಲ್ಲಿ ಯುನಿಫಾರ್ಮ ಧರಿಸಿ ಶಿಕ್ಷಕರ ಎದುರು ಬಚ್ ಪನ್ ಕಾ ಪ್ಯಾರ್ ಹಾಡನ್ನು ಹಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಹಾಡಿನ ವಿಡಿಯೋ ಒಂದೇ ರಾತ್ರಿಯಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ Non Fungible Token ನಲ್ಲಿ ಖಾತೆ ತೆರೆಯುವ ಮೂಲಕ ತನ್ನ ಸಂಗೀತವನ್ನು ಶೇಖರಿಸಿಟ್ಟು ಜನರಿಗೆ ತಲುಪುವ ಪ್ರಯತ್ನದಲ್ಲಿದ್ದಾರೆ. nOFTEN ಎನ್ನುವ ಮಾರ್ಕೆಟ್ನಲ್ಲಿ NFT ಲಾಂಚ್ ಮಾಡಲು ಸಹದೇವ್ ತಯಾರಿ ನಡೆಸಿದ್ದಾರೆ.
ಇದನ್ನೂ ಓದಿ:
ಶೀತ ಗಾಳಿಯ ಅಬ್ಬರಕ್ಕೆ ಪ್ಲೇಟ್ನಲ್ಲೇ ಹೆಪ್ಪುಗಟ್ಟಿದ ಪಾಸ್ತಾ: ಫೋಟೋ ವೈರಲ್