Video: ಮನೆಯ ಮುಂಭಾಗದಲ್ಲಿ ಕಾಣಿಸಿಕೊಂಡ ಮಿಡಿ ನಾಗರಹಾವಿನ ರಕ್ಷಣೆ, ವೈರಲ್ ಆಯ್ತು ದೃಶ್ಯ

ಮಳೆ ಶುರುವಾಗುತ್ತಿದ್ದಂತೆ ನಾಗರ ಹಾವು ಸೇರಿದಂತೆ ಅದರ ಮರಿಗಳು ಮನೆಯ ಸುತ್ತಮುತ್ತಲಿನಲ್ಲಿ ಕಾಣಿಸಿಕೊಳ್ಳುತ್ತವೆ. ಆದರೆ ಇದೀಗ ಮನೆ ಅಂಗಳದಲ್ಲಿ ಕಾಣಿಸಿಕೊಂಡಿದ್ದ ನಾಗರ ಹಾವಿನ ಮರಿಯನ್ನು ಉರಗತಜ್ಞರು ರಕ್ಷಿಸಿದ್ದಾರೆ. ಮಿಡಿ ನಾಗರಹಾವಿನ ರಕ್ಷಣಾ ಕಾರ್ಯದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಮನೆಯ ಮುಂಭಾಗದಲ್ಲಿ ಕಾಣಿಸಿಕೊಂಡ ಮಿಡಿ ನಾಗರಹಾವಿನ ರಕ್ಷಣೆ, ವೈರಲ್ ಆಯ್ತು ದೃಶ್ಯ
ಮಿಡಿ ನಾಗರಹಾವಿನ ರಕ್ಷಣೆ
Image Credit source: Social Media

Updated on: Oct 01, 2025 | 12:53 PM

ಬಾಗಲಕೋಟೆ, ಅಕ್ಟೋಬರ್ 01: ಹಾವುಗಳನ್ನು (Snakes) ಕಂಡ್ರೆ ಯಾರಿಗೆ ಭಯವಿಲ್ಲ ಹೇಳಿ. ಬಹುತೇಕ ಜನರು ಈ ಹಾವುಗಳ ಹೆಸರನ್ನು ಕೇಳಿದರೆ ಬೆಚ್ಚಿ ಬೀಳುತ್ತಾರೆ. ಇನ್ನು ಈ ಮಳೆಗಾಲದಲ್ಲಿ ವಿಷಕಾರಿ ಹಾವುಗಳ ಉಪಟಳ ಹೆಚ್ಚು, ಈ ಋತುವಿನಲ್ಲಿ ಬೆಚ್ಚಗಿರುವ ತಾಣಗಳಲ್ಲಿ ಇರಲು ಬಯಸುವ ಈ ಹಾವುಗಳು ಮನೆಯೊಳಗೆ ಸೇರಿದಂತೆ ಸುತ್ತಮುತ್ತಲಿನ ಪರಿಸರದಲ್ಲಿ ನಾಗರಹಾವು ಕಾಣಿಸಿಕೊಳ್ಳುತ್ತಿರುತ್ತದೆ. ಇದೀಗ ಮನೆಯ ಮುಂಭಾಗದಲ್ಲಿ ನಾಗರ ಹಾವಿನ ಮರಿಯೊಂದು ಕಾಣಿಸಿಕೊಂಡಿದೆ. ಈ ಮಿಡಿ ನಾಗರಹಾವನ್ನು ಉರಗತಜ್ಞರು ರಕ್ಷಣೆ ಮಾಡಿದ ಘಟನೆ ಬಾಗಲಕೋಟೆಯಲ್ಲಿ (Bagalkote) ನಡೆದಿದ್ದು, ನಾಗರಹಾವಿನ ರಕ್ಷಣಾ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಮನೆಯ ಹೊರಗಿನ ಸಿಟ್ ಔಟ್ ನ ಕೆಳಭಾಗದಲ್ಲಿ ನಾಗರಹಾವಿನ ಮರಿಯೊಂದು ಕಾಣಿಸಿಕೊಂಡಿದೆ. ಟೈಲ್ಸ್ ಕೆಳಭಾಗದಲ್ಲಿ ಅವಿತುಕೊಂಡಿದ್ದ ಮಿಡಿ ನಾಗರಹಾವನ್ನು ಉರಗತಜ್ಞರು ರಕ್ಷಿಸುತ್ತಿರುವ ದೃಶ್ಯವಿದಾಗಿದೆ. ಈ ಮಿಡಿ ನಾಗರಹಾವನ್ನು ರಕ್ಷಿಸಿ ಬಾಟಲಿಗೆ ತುಂಬಿಸುತ್ತಿರುವುದನ್ನು ನೀವಿಲ್ಲಿ ನೋಡಬಹುದು.

ವೈರಲ್‌ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ
ಟಿವಿಯೊಳಗೆ ಅವಿತು ಕುಳಿತಿದ್ದ ವಿಷಕಾರಿ ಹಾವು
ಹಾವನ್ನು ಬರಿಗೈಲಿ ಹಿಡಿದ ಧೈರ್ಯವಂತ ಬಾಲಕ
ಮನೆ ಹತ್ರ ಹಾವು ಬಂದ್ರೆ ಓಡಿಸೋಕೆ ನಾನೊಬ್ಬನೇ ಸಾಕು; ಈ ಬೆಕ್ಕಿನ ಧೈರ್ಯ ನೋಡಿ
ಭಯದಲ್ಲಿ ಹಾವನ್ನೇ ಸಾಯಿಸಿ ಆಸ್ಪತ್ರೆಗೆ ಓಡೋಡಿ ಹೋದ ಯುವಕ

ಇದನ್ನೂ ಓದಿ:Video: ಟಿವಿಯೊಳಗೆ ಅವಿತು ಕುಳಿತಿದ್ದ ವಿಷಕಾರಿ ಹಾವು, ಈ ವಿಷಜಂತುವಿನ ರಕ್ಷಣಾ ಕಾರ್ಯ ಹೇಗಿತ್ತು ನೋಡಿ

ಹಾವಿನ ರಕ್ಷಣೆಯ ವಿಡಿಯೋವನ್ನು ನೋಡಿದ ಬಳಕೆದಾರರು ಈ ಮಿಡಿ ನಾಗರಹಾವು ಹೆಚ್ಚು ವಿಷಕಾರಿ ನಿಜವೇ ಎಂದು ಕೇಳಿದ್ದಾರೆ. ಇನ್ನೊಬ್ಬರು, ಮನೆಯ ಸುತ್ತಮುತ್ತ ಹಾಗೂ ಮೂಲೆಗಳಿಗೆ ಕೈ ಹಾಕುವಾಗ ಸ್ವಲ್ಪ ಎಚ್ಚರ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನೋಡುವಾಗಲೇ ಭಯ ಆಯ್ತು, ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಿ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:53 pm, Wed, 1 October 25