Viral: ಪ್ರವಾಹ ಟೀಕೆಗಳ ನಂತರ ಟ್ರೋಲ್​ಗೆ ಗುರಿಯಾದ ‘ಬೆಂಗಳೂರು ನಗರದ ಸ್ಥಿತಿ’

| Updated By: Rakesh Nayak Manchi

Updated on: Sep 14, 2022 | 7:59 PM

ಬೆಂಗಳೂರು ನಗರ ಪ್ರವಾಹವನ್ನು ಎದುರಿಸಿದ ನಂತರ ಅರಂಭವಾದ ಟೀಕೆಗಳ ಬೆನ್ನಲ್ಲೆ ಮೀಮ್​ಗಳು ಆರಂಭಗೊಂಡಿವೆ. ಮೀಮ್​ ವಿಡಿಯೋ ಇಲ್ಲಿದೆ ನೋಡಿ..

Viral: ಪ್ರವಾಹ ಟೀಕೆಗಳ ನಂತರ ಟ್ರೋಲ್​ಗೆ ಗುರಿಯಾದ ಬೆಂಗಳೂರು ನಗರದ ಸ್ಥಿತಿ
ಬೆಂಗಳೂರು ಸ್ಥಿತಿಗತಿ ಬಗ್ಗೆ ಮೀಮ್​
Follow us on

ಬೆಂಗಳೂರು: ಸುರಿದ ಅಬ್ಬದ ಮಳೆಗೆ ಇಡೀ ನಗರದ ಜನರು ತತ್ತರಿಸಿದ್ದು, ಒಂದಷ್ಟು ಪ್ರದೇಶಗಳು ಪ್ರವಾಹಕ್ಕೆ ತುತ್ತಾಗಿತ್ತು. ಈ ಘಟನೆಗೆ ರಾಜಕಾಲವೆ, ಕೆರೆಗೆಳ ಒತ್ತುವರಿಯೇ ಕಾರಣ ಎಂಬ ಟೀಕೆಗಳ ನಡುವೆ ನಗರದ ಸದ್ಯದ ಪರಿಸ್ಥಿತಿ ಬಗ್ಗೆ ಟ್ರೋಲ್​ಗಳು ಆಗಲು ಪ್ರಾರಂಭವಾಗಿವೆ. ‘ಬೆಂಗಳೂರಿನಲ್ಲಿ ಒಂದು ದಿನ’ ಎಂದು ಬರೆದು ಎಡಿಟ್ ಮಾಡಲಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನಿಮಗೆ ಸಾಕಷ್ಟು ನಗು ತರಲಿದ್ದು, ಒಂದಷ್ಟು ಮಂದಿ ಕಾಮೆಂಟ್​ಗಳನ್ನು ಕೂಡ ಮಾಡಿದ್ದಾರೆ.

firki07 ಎಂಬ ಟ್ವಿಟರ್ ಖಾತೆಯಲ್ಲಿ ಈ ಉಲ್ಲಾಸದ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಬೆಂಗಳೂರಿನ ಜನರಿಗಾಗಿ ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ಮೊದಲನೆಯ ವಿಡಿಯೋದಲ್ಲಿ ಚಿಂಪಾಂಜಿಯು ಕಾರನ್ನು ಚಲಾಯಿಸುತ್ತಿರುವುದನ್ನು ತೋರಿಸುತ್ತದೆ, ಅದರಲ್ಲಿ “ಕೇವಲ ನಾಲ್ಕು ಕಿಲೋಮೀಟರ್‌ಗಳನ್ನು ತಲುಪಲು ಮೂರು ಗಂಟೆ ಮುಂಚಿತವಾಗಿ ಮನೆಯಿಂದ ಹೊರಟೆ” ಎಂದು ಶೀರ್ಷಿಕೆ ಬರೆಯಲಾಗಿದೆ.

ಎರಡನೆಯದು ಒರಾಂಗುಟಾನ್ ತನ್ನ ತಲೆಯನ್ನು ಅಲ್ಲಾಡಿಸುವುದನ್ನು ತೋರಿಸಲಾಗಿದೆ, ಅದರಲ್ಲಿ “ಇನ್ನೊಬ್ಬ ಬೆಂಗಳೂರಿನ ವ್ಯಕ್ತಿ ತನ್ನ ಸ್ಟಾರ್ಟ್-ಅಪ್ ಯೋಜನೆಯನ್ನು ವಿವರಿಸುತ್ತಾನೆ” ಎಂದು ಶೀರ್ಷಿಕೆ ಬರೆಯಲಾಗಿದೆ, ಮೂರನೆಯ ವಿಡಿಯೋದಲ್ಲಿ ಕೋತಿಯೊಂದು ಲ್ಯಾಪ್​ಟಾಪ್​ ಒತ್ತುವುದನ್ನು ಕಾಣಬಹುದು. ಇದರಲ್ಲಿ “ಕಚೇರಿ ಫೈಲ್‌ನಲ್ಲಿ ಕನ್ನಡದ ಬದಲಾಗಿ Kannad ಎಂದು ಟೈಪ್ ಮಾಡಿದ ಬೆಂಗಳೂರಲ್ಲದ ವ್ಯಕ್ತಿ” ಎಂದು ಶೀರ್ಷಿಕೆ ನೀಡಲಾಗಿದೆ.

ವಿಡಿಯೋಗೆ ಪ್ರತಿಕ್ರಿಯೆ ನೀಡಿದ ನೆಟ್ಟಿಗರೊಬ್ಬರು, “ಈ ದಿನಗಳಲ್ಲಿ ಮೀಮ್‌ಗಳು ಏಕೆ ತುಂಬಾ ಸಂಬಂಧಿತವಾಗಿವೆ?” ಎಂದಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ, “ಬೆಂಗಳೂರು ಜನರು ತಮ್ಮ ಮಕ್ಕಳಿಗೆ ಪ್ರತಿದಿನ ಕಚೇರಿಗೆ ಹೋಗಲು ನದಿಯನ್ನು ಹೇಗೆ ದಾಟುತ್ತಿದ್ದರು ಎಂದು ಹೇಳಲಿದ್ದಾರೆ” ಎಂದಿದ್ದಾರೆ. ಮಗದೊಬ್ಬರು, “ಬೆಂಗಳೂರಿನಲ್ಲಿ ಕೆಲಸ ಪಡೆಯಲು ಕೋಡಿಂಗ್ ಸಾಕಾಗುವುದಿಲ್ಲ. ಈಜು ಗೊತ್ತಿರಬೇಕು” ಎಂದರೆ ಚೇಂಜ್‌ಮೇಕರ್ಸ್ ಆಫ್ ಕನಕಪುರ ರೋಡ್ ಎಂಬ ಟ್ವಿಟರ್ ಪುಟದಿಂದ ಟೈಟಾನಿಕ್ ಸಿನಿಮಾದ ತುಣಕನ್ನು ಎಡಿಟ್ ಮಾಡಿ ಹಂಚಕೊಳ್ಳಲಾಗಿದೆ.

ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:56 pm, Wed, 14 September 22