Bored Techie: ಬೆಂಗಳೂರಿನ ಈ ಯುವಕನ ಪರಿಪಾಟಲು; ವಯಸ್ಸು 24, ಸಂಬಳ 58 ಲಕ್ಷ; ಗರ್ಲ್​ಫ್ರೆಂಡ್ ಇಲ್ಲ, ಟೈಮ್​ಪಾಸ್​ಗೆ ಸ್ನೇಹಿತರೂ ಇಲ್ಲ; ಸೋಷಿಯಲ್ ಮೀಡಿಯಾದಲ್ಲಿ ಜನರ ಕಾಮೆಂಟ್ಸ್ ನೋಡಿ

|

Updated on: Apr 20, 2023 | 7:55 PM

Story Of Software Engineer From Bengaluru: ವರ್ಷಕ್ಕೆ 58 ಲಕ್ಷ ರೂ ಸಂಬಳ ಪಡೆಯುವ 24 ವರ್ಷದ ಸಾಫ್ಟ್​ವೇರ್ ಎಂಜಿನಿಯರ್​ಗೆ ಈಗಿಂದಲೇ ಒಂಟಿತನ ಕಾಡುತ್ತಿದೆಯಂತೆ. ಅತಿಯಾದ ಕೆಲಸದ ಒತ್ತಡ ಇಲ್ಲದೇ ಆರಾಮವಾಗಿದ್ದರೂ ಈ ಯುವಕನಿಗೆ ಯಾಕಿಂತ ವೈರಾಗ್ಯ ಬಂದಿದೆ?

Bored Techie: ಬೆಂಗಳೂರಿನ ಈ ಯುವಕನ ಪರಿಪಾಟಲು; ವಯಸ್ಸು 24, ಸಂಬಳ 58 ಲಕ್ಷ; ಗರ್ಲ್​ಫ್ರೆಂಡ್ ಇಲ್ಲ, ಟೈಮ್​ಪಾಸ್​ಗೆ ಸ್ನೇಹಿತರೂ ಇಲ್ಲ; ಸೋಷಿಯಲ್ ಮೀಡಿಯಾದಲ್ಲಿ ಜನರ ಕಾಮೆಂಟ್ಸ್ ನೋಡಿ
ಐಟಿ ಕಚೇರಿ
Follow us on

ಬೆಂಗಳೂರು: ದುಡ್ಡೇ ದೊಡ್ಡಪ್ಪ ಅಂತ ಹಲವರು ಹೇಳುತ್ತಾರೆ. ಹಾಗೆಯೇ ದೊಡ್ಡ ಎಲ್ಲಾ ಅಲ್ಲಪ್ಪ ಎಂದೂ ಕೆಲವರು ಹೇಳುತ್ತಾರೆ. ಈ ಎರಡನೇ ವರ್ಗದ ಜನರ ಮಾತು ನಿಜವೇನೋ ಅನಿಸುವಂತಹ ಒಂದು ನಿದರ್ಶನ ಬೆಂಗಳೂರಿನ ಟೆಕ್ಕಿಯೊಬ್ಬನ ಜೀವನ. ಬೆಂಗಳೂರಿನಲ್ಲಿ ಜಾಗತಿಕ ದೈತ್ಯ ಕಂಪನಿಯೊಂದರಲ್ಲಿ (FAANG company in Bengaluru) ಕೆಲಸ ಮಾಡುವ ಯುವಕನ ವಯಸ್ಸು ಇನ್ನೂ 24 ವರ್ಷ. ಈತನ ಸಂಬಳ 58 ಲಕ್ಷ ರೂ ಅಂತೆ. ಇದು ಕೇಳಿದರೆ ಹುಡುಗಿಯರ ದಂಡೇ ಈ ಹುಡುಗನ ಹಿಂದೆ ಬೀಳುತ್ತದೆ ಎಂದು ಯಾರಾದರೂ ಮೊದಲು ಯೋಚಿಸಿಯಾರು. ಆದರೆ, ಈ ಯುವಕನ ದುರದೃಷ್ಟಕ್ಕೆ ಈತನಿಗೆ ಒಬ್ಬ ಗರ್ಲ್​ಫ್ರೆಂಡ್ ಕೂಡ ಇಲ್ಲ. ಹುಡುಗಿಯರ ಮನಸು ಬೇರೇನೋ ಬಯಸುತ್ತದೆ ಎಂದಿಟ್ಟುಕೊಂಡರೂ ಈ ಯುವಕನಿಗೆ ಸ್ನೇಹಿತರೇ ಕೈಗೆಟುಕದಂತಾಗಿದ್ದಾರೆ. ಈತನ ಎಲ್ಲಾ ಸ್ನೇಹಿತರೂ ಅವರವರ ಜೀವನದ ಜಂಜಾಟಗಳಲ್ಲೇ ಮುಳುಗಿಹೋಗಿದ್ದಾರಂತೆ. ಎಲ್ಲಾ ಇದೆ ಆದರೆ, ಸಂತೋಷವೇ ಇಲ್ಲ ಎಂದು ಈ ಯುವಕನಿಗೆ ವೈರಾಗ್ಯ ಬಂದಿದೆಯಂತೆ.

ಅಂದಹಾಗೆ ಇಂತಹದ್ದೊಂದು ಪೋಸ್ಟ್ ಅನ್ನು ಗ್ರೇಪ್​ವೈನ್ ಕಾರ್ಪೊರೇಟ್ ಚ್ಯಾಟ್​ನಲ್ಲಿ (Grapewine Corporate Chat) ಆ ಯುವಕನೇ ಹಾಕಿದ್ದಾನೆ. ಈ ಚ್ಯಾಟ್​ನ ಸ್ಕ್ರೀನ್​ಶಾಟ್ ಅನ್ನು ಟ್ವಿಟ್ಟರ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿ, ಮತ್ತೊಂದು ಮಗ್ಗುಲಿನ ಭಾರತ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.

ಈ ಯುವಕನಿಗೆ ಒಂಟಿತನ ಕಾಡುತ್ತಿದೆಯಂತೆ. ಸ್ನೇಹಿತರು, ಗರ್ಲ್​ಫ್ರೆಂಡ್ ಇಲ್ಲದೇ ಜೀವನ ಸಾಗಲ್ಲವಾ ಎನಿಸಬಹುದು. ಈ ಯುವಕನ ಸ್ಯಾಡ್ ಸ್ಟೋರಿ ಇನ್ನೂ ಆಳಕ್ಕೆ ಹೋಗುತ್ತದೆ. ಈತ ವೃತ್ತಿ ಜೀವನ ಆರಂಭಿಸಿದಾಗಿನಿಂದಲೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಪ್ರತೀ ದಿನವೂ ಅದೇ ಕೆಲಸವನ್ನೇ ಮಾಡುತ್ತಿದ್ದಾನೆ. ಹೊಸ ಸವಾಲುಗಳು, ಬೆಳವಣಿಗೆ ಅವಕಾಶಗಳೇ ಇಲ್ಲ ಎನ್ನುವುದು ಈತನ ಹತಾಶೆ. 24ರ ವಯಸ್ಸಿನಲ್ಲಿ ಕೆಲಸ ಅನುಭವ ಎಷ್ಟು ಇರಬಹುದು. ಅಬ್ಬಬ್ಬಾ ಎಂದರೆ 3 ವರ್ಷಕ್ಕಿಂತ ಹೆಚ್ಚಿರಲಾರದು. 3 ವರ್ಷ ಒಂದೇ ಕಂಪನಿಯಲ್ಲಿ ಕೆಲಸ ಮಾಡುವುದು ಮಹಾ ಬೋರು ಎನ್ನುತ್ತಿರುವ ಈ ಯುವಕನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಥರಹೇವಾರಿ ಪ್ರತಿಕ್ರಿಯೆ ಬಂದಿವೆ. ಮೊದಲಿಗೆ ಈ ಯುವಕ ಗ್ರೇಪ್​ವೈನ್ ಚ್ಯಾಟ್​ನಲ್ಲಿ ಏನು ಬರೆದ ಎಂಬುದನ್ನು ಓದಿ.

ಇದನ್ನೂ ಓದಿDhingra Brothers: ಮಲ್ಯ ಒಡೆತನದ ಸಂಸ್ಥೆ ಖರೀದಿಸಿದ ಧಿಂಗ್ರಾ ಬ್ರದರ್ಸ್; 16 ಕೋಟಿ ಇದ್ದ ಕಂಪನಿ ಬ್ಯುಸಿನೆಸ್ ಈಗ 55,000 ಕೋಟಿ ರೂ

ಗ್ರೇಪ್​ವೈನ್ ಚ್ಯಾಟ್​ನಲ್ಲಿ ಬೆಂಗಳೂರಿನ ಟೆಕ್ಕಿ ಹಾಕಿದ ಪೋಸ್ಟ್

‘ನಾನು FAANG ಕಂಪನಿಯಲ್ಲಿ ಸಾಫ್ಟ್​ವೇರ್ ಎಂಜಿನಿಯರ್ ಆಗಿರುವ 24 ವರ್ಷದ ಯುವಕ. ಬೆಂಗಳೂರಿನಲ್ಲಿ 2.9 ವರ್ಷ ವಾಸಿಸಿದ ಅನುಭವ ಇದೆ. ಒಳ್ಳೆಯ ಜೀವನ ಇದೆ (ತೆರಿಗೆ ಬಿಟ್ಟು 58 ಲಕ್ಷ ರೂ ವಾರ್ಷಿಕ ಸಂಬಳ). ಕೆಲಸದ ಜೀವನ ಕೂಡ ಆರಾಮವಾಗಿದೆ. ಆದರೂ ಕೂಡ ನನ್ನ ಜೀವನದಲ್ಲಿ ಒಂಟಿತನ ಕಾಡುತ್ತಿದೆ. ನನ್ನ ಜೊತೆ ಕಾಲ ಕಳೆಯಲು ಗರ್ಲ್​ಫ್ರೆಂಡ್ ಇಲ್ಲ. ನನ್ನ ಇತರ ಎಲ್ಲಾ ಸ್ನೇಹಿತರೂ ಅವರ ಜೀವನದಲ್ಲಿ ಮುಳುಗಿಹೋಗಿದ್ದಾರೆ. ನನ್ನ ವೃತ್ತಿಜೀವನದ ಆರಂಭದಿಂದಲೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ದಿನವೂ ಅದೇ ಕೆಲಸ ಮಾಡುತ್ತಿದ್ದೇನೆ. ಹೊಸ ಸವಾಲು ಮತ್ತು ಬೆಳವಣಿಗೆ ಅವಕಾಶ ಅರಸುವ ಉತ್ಸಾಹವೇ ಇಲ್ಲದಂತಾಗಿದೆ. ಇದರಿಂದಾಗಿ ನನ್ನ ಕೆಲಸದ ಜೀವನ ಕೂಡ ಏಕತಾನತೆಯಂತಾಗಿದೆ. ನನ್ನ ಜೀವನ ಹೆಚ್ಚು ಆಸಕ್ತಿದಾಯಕ ಎನಿಸಲು ಏನು ಮಾಡಬೇಕು ಎಂದು ದಯವಿಟ್ಟು ಸಲಹೆ ನೀಡಿ. (ಜಿಮ್​ಗೆ ಹೋಗು ಎಂಬ ಸಲಹೆ ಬೇಡ. ಯಾಕೆಂದರೆ ನಾನು ಜಿಮ್​ಗೆ ಹೋಗುತ್ತಿದ್ದೇನೆ.)’

ಈ ಪೋಸ್ಟ್​ನ ಆರಂಭದಲ್ಲಿ FAANG ಕಂಪನಿ ಎಂದು ಬರೆದಿರುವುದನ್ನು ನೀವು ಗಮನಿಸಿರಬಹುದು. ಇದು ಕೆಲಸ ಮಾಡಲು ಪ್ರಶಸ್ತ ಎನಿಸಿರುವ ಜಾಗತಿಕ ಪ್ರಮುಖ ಐಟಿ ಕಂಪನಿಗಳ ಹೆಸರುಗಳ ಶಾರ್ಟ್​ಫಾರ್ಮ್. ಫೇಸ್​ಬುಕ್, ಅಮೇಜಾನ್, ಆ್ಯಪಲ್, ನೆಟ್​ಫ್ಲಿಕ್ಸ್ ಮತ್ತು ಗೂಗಲ್ ಕಂಪನಿಗಳಿಗೆ ಅನ್ವರ್ಥವಾಗಿ ಈ ಪದ ಬಳಕೆ ಮಾಡಲಾಗುತ್ತದೆ. ಈ ಕಂಪನಿಗಳ ವರ್ಕಿಂಗ್ ಎನ್ವಿರಾನ್ಮೆಂಟ್ ಉತ್ತಮ ಎಂಬ ಅಭಿಪ್ರಾಯ ಇದೆ.

ಇದನ್ನೂ ಓದಿ: ಸಾಮಾನ್ಯವಾಗಿ ಬೈಕ್​ ಏರಿ ಬಂದು ದರೋಡೆ ಮಾಡ್ತಾರೆ! ಆದರೆ ಇಲ್ಲಿ ಕುದುರೆಯ ಮೇಲೆ ಬಂದು ಮಹಿಳೆಯ ಕೈಚೀಲ ಕಸಿದುಕೊಂಡು ಹೋದ -ವಿಡಿಯೋ ವೈರಲ್

ಈ ಯುವಕನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬಂದ ಪ್ರತಿಕ್ರಿಯೆಗಳಿವು

ಈ ಯುವಕ ಬಹಳ ಕಿರು ವಯಸ್ಸಿನಲ್ಲಿ ಸ್ಯಾಚುರೇಶನ್ ಮಟ್ಟ ತಲುಪಿಬಿಟ್ಟಿದ್ದಾನೆ. ಸಾಫ್ಟ್​ವೇರ್ ಎಂಜಿನಿಯರಿಂಗ್ ಎಂಬುದು ಬಹಳ ಬೋರ್ ಕೊಡುವ ಉದ್ಯೋಗವಾಗಿ ಮಾರ್ಪಟ್ಟುಹೋಗಿದೆ ಎಂದು ಕೆಲವರು ಸಹಾನುಭೂತಿ ತೋರಿದ್ದಾರೆ.

ಇನ್ನೂ ಕೆಲವರು, ಈ ಟೆಕ್ಕಿ ಯುವಕನೇನಾದರೂ ಕೆಲಸ ಕಳೆದುಕೊಂಡರೆ ಏನು ಗತಿಯಪ್ಪ ಎಂದು ಕಾಮೆಂಟಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:51 pm, Thu, 20 April 23