ಹುಟ್ಟು ಸಾವು ಪ್ರಕೃತಿಯ ನಿಯಮ. ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ಮಣ್ಣು ಸೇರಲೇಬೇಕು. ಹೀಗಾಗಿ ಸಾವು ಕೇಳದೇನೆ ಬರುವ ಅತಿಥಿಯಾಗಿದ್ದು, ಇದನ್ನು ಯಾರು ತಡೆದು ನಿಲ್ಲಿಸಲು ಯಾರಿಗೂ ಸಾಧ್ಯವಿಲ್ಲ. ಆದರೆ ಇತ್ತೀಚೆಗಿನ ದಿನಗಳಲ್ಲಿ ಸಾವು ಹೇಗೆ ಬರುತ್ತದೆಯೇ ಎಂದು ಊಹೆ ಮಾಡುವುದು ಕಷ್ಟ. ಇವತ್ತು ಚೆನ್ನಾಗಿದ್ದ ವ್ಯಕ್ತಿಯೂ ನಾಳೆ ನಮ್ಮೊಂದಿಗೆ ಇಲ್ಲ ಎನ್ನುವುದನ್ನು ಊಹೆ ಮಾಡುವುದು ಕಷ್ಟ ಎನ್ನುವಂತಾಗಿದೆ. ಅದರಲ್ಲಿಯೂ ಹೃದಯಘಾತಕ್ಕೆ ಒಳಗಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದೀಗ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಸಿಬ್ಬಂದಿಯೊಬ್ಬ ಕುಳಿತಲ್ಲೇ ಹೃದಯ ಸ್ತಂಭನಕ್ಕೊಳಗಾಗಿ ಪ್ರಾಣ ಬಿಟ್ಟ ಹೃದಯವಿದ್ರಾವಕ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಆಫೀಸ್ ನಲ್ಲಿ ಕುಳಿತು ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿರುವುದನ್ನು ಕಾಣಬಹುದು. ಹೀಗಿರುವಾಗ ಈ ವ್ಯಕ್ತಿಯು ಇದ್ದಕ್ಕಿದ್ದಂತೆ ಚೇರ್‌ಗೆ ಒರಗಿ ಮುಖವನ್ನೊಮೆ ಒರೆಸಿಕೊಳ್ಳುತ್ತಾನೆ. ಏಕಾಏಕಿ ಮುಖವನ್ನು ಮೇಲೆ ಮಾಡಿ ಎರಡು ಕಣ್ಣನ್ನು ಬಿಟ್ಟಿದ್ದು, ಆ ಕ್ಷಣವೇ ಆತನ ಪ್ರಾಣ ಪಕ್ಷಿ ಹಾರಿ ಹೋಗಿರುವುದನ್ನು ಕಾಣಬಹುದು. ಆದರೆ ಅಲ್ಲೇ ಇದ್ದ ಸಿಬ್ಬಂದಿ ಇದರ ಪರಿವೇ ಇಲ್ಲ. ಕೊನೆಗೆ ಸಿಬ್ಬಂದಿಗಳು ಈತನನ್ನು ನೋಡಿ ಓಡೋಡಿ ಬಂದಿದ್ದಾರೆ. ಮೃತ ಪಟ್ಟ ವ್ಯಕ್ತಿಯು ಉತ್ತರ ಪ್ರದೇಶದ ಮಹೋಬಾದ ಬ್ಯಾಂಕ್ ನೌಕರ ರಾಜೇಶ್ ಕುಮಾರ್ ಶಿಂಧೆ ಎನ್ನಲಾಗಿದೆ. 30 ವರ್ಷ ವಯಸ್ಸಿನ ಈ ವ್ಯಕ್ತಿಯು ಎಚ್‌ಡಿಎಫ್‌ಸಿ ಶಾಖೆಯಲ್ಲಿ ಕೃಷಿ ಪ್ರಧಾನ ವ್ಯವಸ್ಥಾಪಕರಾಗಿದ್ದರು. ಈ ಘಟನೆಯು ಇದೇ ತಿಂಗಳ ಜೂನ್ 19 ರಂದು ನಡೆದಿದೆ ಎನ್ನಲಾಗಿದೆ.
ಇದನ್ನೂ ಓದಿ: ಪುತ್ತೂರಿನಲ್ಲಿ ಫ್ರಿಡ್ಜ್ ಸ್ಫೋಟಗೊಂಡು ಹೊತ್ತಿ ಉರಿದ ಮನೆ, ಕಲ್ಲುರ್ಟಿ ದೈವದ ಪೀಠಕ್ಕೆ ತಗಲದ ಬೆಂಕಿ
ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದು,ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ‘ಕೊರೋನಾ ಬಳಿಕ ಇದು ಸಹಜ’ ಎಂದಿದ್ದಾರೆ. ಮತ್ತೊಬ್ಬರು, ‘ವ್ಯಾಕ್ಸಿನ್ ಪಡೆದ ಮೇಲೆ ಹೃದಯಾಘಾತಗಳು ಉಲ್ಬಣವಾಗಿವೆ. ನಮ್ಮನ್ನು ದೇವರೇ ಕಾಪಾಡಬೇಕು’ ಎಂದಿದ್ದಾರೆ. ಇನೊಬ್ಬರು ‘ಕೆಲಸದಲ್ಲಿ ಒತ್ತಡ, ಹಗಲಲ್ಲಿ ದನದ ತರ ದುಡಿದು ತೆರಿಗೆ ಕಟ್ಟಿದರೆ ಹೀಗಾಗುತ್ತೆ’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ