Video: ನನ್ನನ್ನು ಬಲಶಾಲಿಯನ್ನಾಗಿಸಿದ ಬೆಂಗಳೂರಿಗೆ ಧನ್ಯವಾದ ತಿಳಿಸಿದ ಯುವತಿ

ಕೆಲವರು ಓದು ಮುಗಿಯುತ್ತಿದ್ದಂತೆ ಉದ್ಯೋಗಕ್ಕಾಗಿ ಬೆಂಗಳೂರಿನತ್ತ ಹೆಜ್ಜೆ ಹಾಕುತ್ತಾರೆ. ಇಲ್ಲಿ ಒಂದೊಳ್ಳೆ ಕೆಲಸ ಗಿಟ್ಟಿಸಿಕೊಂಡು ಸೆಟಲ್ ಆಗಬೇಕೆನ್ನುವ ಕನಸು ಅನೇಕರದ್ದು. ಆದರೆ, ಒಂದು ಕಾಲದಲ್ಲಿ ಬೆಂಗಳೂರಲ್ಲಿ ಇರಲು ಇಷ್ಟ ಪಡದ ಯುವತಿಯೂ ಈ ನಗರವೂ ತನ್ನ ಜೀವನವನ್ನು ಹೇಗೆ ಬದಲಾಯಿತು ಎಂದು ತಿಳಿಸಿದ್ದಾಳೆ. ಈ ಕುರಿತಾದ ವಿಡಿಯೋ ವೈರಲ್ ಆಗಿದೆ.

Video: ನನ್ನನ್ನು ಬಲಶಾಲಿಯನ್ನಾಗಿಸಿದ ಬೆಂಗಳೂರಿಗೆ ಧನ್ಯವಾದ ತಿಳಿಸಿದ ಯುವತಿ
ವೈರಲ್ ವಿಡಿಯೋ
Image Credit source: Instagram

Updated on: Jan 12, 2026 | 2:45 PM

ಬೆಂಗಳೂರು, ಜನವರಿ 12: ಬೆಂಗಳೂರು (Bengaluru) ಅಂದರೆ ಅದೇನೋ ಸೆಳೆತ. ಹೀಗಾಗಿ ಅದೆಷ್ಟೋ ಯುವ ಮನಸ್ಸುಗಳನ್ನು ಕೈ ಬೀಸಿ ತನ್ನತ್ತ ಕರೆಯುತ್ತದೆ. ಆದರೆ ಇದೀಗ ಯುವತಿಯೊಬ್ಬಳು (Young woman) ತಾನು ಎಂದಿಗೂ ಬೆಂಗಳೂರಿಗೆ ಬರಲು ಬಯಸಿರಲಿಲ್ಲ. ಆದರೆ ಇಲ್ಲಿಗೆ ಬಂದ ನಂತರದಲ್ಲಿ ನನ್ನ ಆರಂಭಿಕ ದಿನಗಳ ಹಿಂಜರಿಕೆ ಹಾಗೂ ಕಾಲಾನಂತರದಲ್ಲಿ ಆ ಭಾವನೆಗಳು ಸಂಪೂರ್ಣವಾಗಿ ಬದಲಾಗಿವೆ ಎಂಬುವುದನ್ನು ತಿಳಿಸಿದ್ದಾಳೆ. ರಾಜಧಾನಿ ಬೆಂಗಳೂರಿಗೆ ತೆರಳಿ ಒಂದು ವರ್ಷ ಪೂರೈಸಿದ ಬಗ್ಗೆ ಪ್ರಗತಿ ಝಾ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿ ಕೊಂಡಿದ್ದು ಜೀವನ ಬದಲಾಯಿಸಿದ ನಗರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾಳೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

ಪ್ರಗತಿ ಝಾ (Pragathi Jha) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಯುವತಿ ಜನವರಿ 5, 2025 ರಂದು ಬೆಂಗಳೂರಿಗೆ ಬಂದಿಳಿದದ್ದನ್ನು ನೆನಪಿಸಿಕೊಳ್ಳುತ್ತಾ ಕಾಲೇಜು ಪ್ಲೇಸ್‌ಮೆಂಟ್ ವೇಳೆ ನಾನು ಎಂದಿಗೂ ಇಲ್ಲಿಗೆ ಬರಲು ಬಯಸಿರಲಿಲ್ಲ. ದೇವರ ಯೋಜನೆಯನ್ನು ಕಣ್ಣು ಮುಚ್ಚಿ ಒಪ್ಪಬೇಕು. ನಾನು ಈ ಬೆಂಗಳೂರಿಗೆ ಬಂದು ನಿಖರವಾಗಿ ಒಂದು ವರ್ಷವಾಗಿದೆ ಎಂದು ಹೇಳುವುದನ್ನು ಕಾಣಬಹುದು.

ವೈರಲ್‌ ವಿಡಿಯೋ ಇಲ್ಲಿದೆ

ಆದರೆ ಈ ಬೆಂಗಳೂರಿನ ಹೊರತಾಗಿ ಬೇರೆಲ್ಲಿಯಾದರೂ ನನಗೆ ಪ್ಲೇಸ್ ಮೆಂಟ್ ಆಗಲಿ ಎಂದು ಸಕ್ರಿಯವಾಗಿ ಪ್ರಾರ್ಥಿಸುತ್ತಿದ್ದೆ. ಇದು ತುಂಬಾ ದೊಡ್ಡ ನಗರ, ಸಂಚಾರ, ಜನದಟ್ಟಣೆ ಎಲ್ಲವೂ ಹೆಚ್ಚು. ನಾನು ಯಾವಾಗಲೂ ಈ ಜನಸಂದಣಿಯಿಂದ ದೂರವಿರಲು ಬಯಸುತ್ತೇನೆ. ಆದರೆ ವಿಧಿಯ ಯೋಜನೆಯೇ ಬೇರೆಯಾಗಿತ್ತು. ಬೆಂಗಳೂರು ತನ್ನನ್ನು ತಾನು ಊಹಿಸಿದ್ದಕ್ಕಿಂತ ಹೆಚ್ಚು ಬಲಶಾಲಿಯನ್ನಾಗಿ ಮಾಡಿತು ಎಂದಿದ್ದಾಳೆ.

ಅಂತಿಮ ಪರೀಕ್ಷೆಯ ವೇಳೆ ತಾನು ಕಾಲೇಜಿಗೆ ಮತ್ತೆ ಭೇಟಿ ನೀಡಿದ್ದನ್ನು ನೆನಪಿಸಿಕೊಳ್ಳುತ್ತಾ, ನಾನು ಬೆಂಗಳೂರಿಗೆ ಹಿಂತಿರುಗಲು ಬಯಸುತ್ತೇನೆ ಎಂದು ನನಗೆ ಅನಿಸಿತು. ನಾನು ನನ್ನ ನಗರಕ್ಕೆ ಹಿಂತಿರುಗಲು ಬಯಸುತ್ತೇನೆ. ಇಲ್ಲಿನ ವಾತಾವರಣವು ಬೆಚ್ಚಗಿನ ಅಪ್ಪುಗೆಯಂತೆ ಭಾಸವಾಗುತ್ತದೆ. ಪ್ರತಿ ಏರಿಳಿತದಲ್ಲಿ ತನ್ನೊಂದಿಗೆ ನಿಂತಿದ್ದಕ್ಕಾಗಿ ಈ ನಗರಕ್ಕೆ ಧನ್ಯವಾದ. ಈ ನಗರವು ಎಲ್ಲಾ ಏರಿಳಿತಗಳನ್ನು ಕಂಡಿದೆ ಮತ್ತು ನನ್ನನ್ನು ತುಂಬಾ ಬಲಶಾಲಿಯನ್ನಾಗಿ ಮಾಡಿದೆ ಎಂದು ಹೇಳಿರುವುದನ್ನು ನೋಡಬಹುದು.

ಇದನ್ನೂ ಓದಿ:ಬೆಂಗಳೂರಿನಲ್ಲಿ ಸಲಿಂಗಿ ಜೋಡಿಯಲ್ಲಿ ಒಬ್ಬಳು ಗರ್ಭಿಣಿ? ಎಚ್ಚರಿಕೆ ನೀಡಿದ ತಜ್ಞರು

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಬೆಂಗಳೂರು ನಿಜವಾಗಿಯೂ ಅದ್ಭುತ ನಗರ. ನಾನು ಈ ನಗರವನ್ನು ತುಂಬಾ ಪ್ರೀತಿಸುತ್ತೇನೆ” ಎಂದು ಹೇಳಿದ್ದಾರೆ. ಮತ್ತೊಬ್ಬರು ದೇವರ ಯೋಜನೆಯನ್ನು ನಂಬಿರಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಬೆಂಗಳೂರಿನ ಮೇಲಿನ ನಿಮ್ಮ ಪ್ರೀತಿ ಅಪ್ರತಿಮ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ