
ಬೆಂಗಳೂರು, ಸೆಪ್ಟೆಂಬರ್ 08: ನಾವಿಂದು ತಂತ್ರಜ್ಞಾನವನ್ನು (technology) ತಮ್ಮ ದಿನನಿತ್ಯದ ಜೀವನದಲ್ಲೂ ಅಳವಡಿಸಿಕೊಳ್ಳುತ್ತಿದ್ದೇವೆ. ಹೀಗಾಗಿ ತಂತ್ರಜ್ಞಾನವಿಲ್ಲದೇ ನಾವಿಲ್ಲ ಎನ್ನುವಂತಾಗಿದೆ. ಕೆಲವರು ತಮ್ಮ ಬುದ್ಧಿವಂತಿಕೆಯನ್ನು ಬಳಸಿ ಹೊಸದ್ದನ್ನು ಮಾಡುತ್ತಾರೆ. ಇದೀಗ ಬೆಂಗಳೂರಿನ ಆಟೋ ಚಾಲಕ (Bengaluru auto driver) ಇದೇ ರೀತಿಯ ಕೆಲಸಕ್ಕೆ ಸುದ್ದಿಯಾಗಿದ್ದಾರೆ. ಹೌದು, ಬೆಂಗಳೂರಿನ ಆಟೋ ಡ್ರೈವರ್ ಗೇಮಿಂಗ್ ಚೇರ್ ಅಳವಡಿಸಿಕೊಂಡಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
@NarasimhaKan ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ಇಂದು ದಕ್ಷತಾಶಾಸ್ತ್ರದ ಆಟೋದಿಂದ ಆಶೀರ್ವಾದ ಪಡೆದಿದ್ದೇನೆ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿ ಆಟೋ ಚಾಲಕರೊಬ್ಬರು ತಮ್ಮ ಆಟೋಗೆ ಗೇಮಿಂಗ್ ಚೇರ್ ಅಳವಡಿಸಿಕೊಂಡಿರುವುದನ್ನು ಕಾಣಬಹುದು.
got blessed with an ergonomic auto today pic.twitter.com/f14ZTEsEym
— Narasimha Kanduri (@NarasimhaKan) September 4, 2025
ಇದನ್ನೂ ಓದಿ:Video: ಮಡಿಲಿನಲ್ಲಿ ಕಂದಮ್ಮನನ್ನು ಮಲಗಿಸಿಕೊಂಡು ಆಟೋ ಓಡಿಸಿ ಜೀವನ ಸಾಗಿಸುವ ಬೆಂಗಳೂರಿನ ಆಟೋ ಡ್ರೈವರ್
ಸೆಪ್ಟೆಂಬರ್ 4 ರಂದು ಶೇರ್ ಮಾಡಲಾದ ಈ ಪೋಸ್ಟ್ ಇದುವರೆಗೆ ಎರಡು ಲಕ್ಷ ತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಬಳಕೆದಾರರೊಬ್ಬರು, ಡ್ಯಾಂಗ್ ಇವುಗಳಲ್ಲಿ ಒಂದನ್ನು ಎಂದಿಗೂ ನೋಡಿಲ್ಲ ಎಂದಿದ್ದಾರೆ. ಇನ್ನೊಬ್ಬರು, ಹರ್ಮನ್ ಮಿಲ್ಲರ್ ಆಟೋ ರಿಕ್ಷಾ ಆವೃತ್ತಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಚಾಲಕರಿಗೆ ಮಾತ್ರವೇ ಇಲ್ಲ ಪ್ರಯಾಣಿಕರಿಗೂ ಈ ರೀತಿ ವ್ಯವಸ್ಥೆ ಇದೆಯೇ ಎಂದು ಕೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:31 am, Mon, 8 September 25