Viral: ಏಯ್‌ ಏನ್‌ ಮಾಡ್ತಿದಿಯಾ ನೀನಿಲ್ಲಿ; ತನ್ನ ಸಮಯ ಪ್ರಜ್ಞೆಯಿಂದ ಮೊಬೈಲ್‌ ಕಳ್ಳತನ ತಪ್ಪಿಸಿದ ಬಿಎಂಟಿಸಿ ಕಂಡಕ್ಟರ್‌

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 28, 2025 | 3:13 PM

ಟ್ರೈನ್‌, ಬಸ್‌ ಸೇರಿದಂತೆ ಸಾರ್ವಜನಿಕರು ಹೆಚ್ಚು ಓಡಾಡುವ ಗದ್ದಲದ ಸ್ಥಳಗಳಲ್ಲಿ ಖದೀಮರು ತಮ್ಮ ಕೈಚಳಕವನ್ನು ತೋರಿಸುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಕಳ್ಳ ಕೂಡಾ ಪ್ರಯಾಣಿಕರೊಬ್ಬರು ಬಿಎಂಟಿಸಿ ಬಸ್‌ ಹತ್ತುವ ವೇಳೆ ಅವರ ಜೇಬಿನಲ್ಲಿದ್ದ ಮೊಬೈಲ್‌ ಕಸಿಯಲು ಯತ್ನಿಸಿದ್ದು, ಕಂಡಕ್ಟರ್‌ ತಮ್ಮ ಸಮಯಪ್ರಜ್ಞೆಯಿಂದ ಈ ಕಳ್ಳತನ ತಪ್ಪಿಸಿದ್ದಾರೆ. ಕಂಡಕ್ಟರ್‌ ಸಹಾಯದಿಂದ ತನ್ನ ಮೊಬೈಲ್‌ ಹೇಗೆ ಸೇವ್‌ ಆಯ್ತು ಎಂಬ ಕಥೆಯನ್ನು ಆ ವ್ಯಕ್ತಿ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

Viral: ಏಯ್‌ ಏನ್‌ ಮಾಡ್ತಿದಿಯಾ ನೀನಿಲ್ಲಿ; ತನ್ನ ಸಮಯ ಪ್ರಜ್ಞೆಯಿಂದ ಮೊಬೈಲ್‌ ಕಳ್ಳತನ ತಪ್ಪಿಸಿದ ಬಿಎಂಟಿಸಿ ಕಂಡಕ್ಟರ್‌
ಸಾಂದರ್ಭಿಕ ಚಿತ್ರ
Follow us on

ಕೆಲವೊಬ್ಬರು ಕಳ್ಳತನವನ್ನೇ ತಮ್ಮ ಕಸುಬು ಮಾಡಿಕೊಂಡಿರುತ್ತಾರೆ. ಈ ಚಾಲಾಕಿ ಕಳ್ಳರು ಬಸ್‌, ಟ್ರೈನ್‌ ಸೇರಿದಂತೆ ಇನ್ನಿತರೆ ಜನನಿಬಿಡ ಸ್ಥಳಗಳಲ್ಲಿ ತಮ್ಮ ಕೈ ಚಳಕ ತೋರಿಸುತ್ತಿರುತ್ತಾರೆ. ಹೀಗೆ ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದ್ದು ಗೂಸಾ ತಿಂದವರು ಹಲವರಿದ್ದಾರೆ. ಅದೇ ರೀತಿ ಇಲ್ಲೊಬ್ಬ ಕಳ್ಳ ಮೊಬೈಲ್‌ ಕದಿಯಲು ಯತ್ನಿಸಿ ವಿಫಲನಾಗಿದ್ದಾನೆ. ಹೌದು ಆತ ಪ್ರಯಾಣಿಕರೊಬ್ಬರು ಬಿಎಂಟಿಸಿ ಬಸ್‌ ಹತ್ತುವ ವೇಳೆ ಅವರ ಜೇಬಿನಲ್ಲಿದ್ದ ಮೊಬೈಲ್‌ ಕಸಿಯಲು ಯತ್ನಿಸಿದ್ದು, ಕಂಡಕ್ಟರ್‌ ತಮ್ಮ ಸಮಯಪ್ರಜ್ಞೆಯಿಂದ ಈ ಕಳ್ಳತನ ತಪ್ಪಿಸಿದ್ದಾರೆ. ಕಂಡಕ್ಟರ್‌ ಸಹಾಯದಿಂದ ತನ್ನ ಮೊಬೈಲ್‌ ಹೇಗೆ ಸೇವ್‌ ಆಯ್ತು ಎಂಬ ಕಥೆಯನ್ನು ಆ ವ್ಯಕ್ತಿ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಬೆಂಗಳೂರಿನ ಸ್ಥಳೀಯರೊಬ್ಬರು ಬಿಎಂಟಿಸಿ ಬಸ್‌ ಹತ್ತುತ್ತಿರುವಾಗ ಅವರ ಹಿಂದೆಯೇ ಬಂದಂತಹ ಕಳ್ಳ ಮೆಲ್ಲಗೆ ಫೋನ್‌ ಕದಿಯಲು ಯತ್ನಿಸಿದ್ದಾನೆ. ಇದನ್ನು ನೋಡಿದ ಕಂಡಕ್ಟರ್‌ ಏಯ್‌ ಏನ್‌ ಮಾಡ್ತಿದ್ದೀಯಾ, ಪೊಲೀಸರಿಗೆ ಫೋನ್‌ ಮಾಡ್ಲಾ ಎಂದು ಹೇಳಿದ್ದು, ಕಂಡಕ್ಟರ್‌ ಮಾತಿಗೆ ಭಯ ಬಿದ್ದ ಖದೀಮ ಅಲ್ಲಿಂದ ಕಾಲ್ಕಿತ್ತಿದ್ದಾನೆ.

Download

ಕಂಡಕ್ಟರ್‌ ಮಾಡಿದ ಈ ಸಹಾಯದ ಕಥೆಯನ್ನು ಆ ವ್ಯಕ್ತಿ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಈ ಕಥೆಯನ್ನು r/Bengaluru ಹೆಸರಿನ ರೆಡ್ಡಿಟ್‌ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ.

“ಫೋನ್‌ ಬಹುತೇಕ ಕಳ್ಳತನ ಆಗುವುದರಲ್ಲಿತ್ತು; ಬಿಎಂಟಿಸಿ ಕಂಡಕ್ಟರ್‌ ಕಳ್ಳನ ಪ್ಲ್ಯಾನ್‌ ವಿಫಲಗೊಳಿಸಿದರು: ನಾನು ಸಾಮಾನ್ಯವಾಗಿ ಲಾಲ್‌ಬಾಗ್‌ನಲ್ಲಿರುವ ನನ್ನ ಕಚೇರಿಗೆ ಬಸ್‌ನಲ್ಲೇ ಹೋಗುತ್ತೇನೆ. ಇವತ್ತು ಕೂಡಾ ಬಸ್ಸಿನಲ್ಲೇ ಹೋಗಲು ಕಾದು ಕುಳಿತಿದ್ದೆ. ಬಸ್‌ ಬಂದ ನಂತರ ಹಿಂದಿನ ಬಾಗಿಲಿನಿಂದ ನಾನು ಬಸ್ಸು ಹತ್ತುವಾಗ ಯಾರೋ ನನ್ನನ್ನು ತಳ್ಳುತ್ತಿರುವಂತೆ ಭಾಸವಾಯಿತು. ಆ ಸಂದರ್ಭದಲ್ಲಿ ವಾದ ಮಾಡುವ ಮನಸ್ಥಿತಿಯಲ್ಲೂ ನಾನು ಇರಲಿಲ್ಲ. ಆ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಕಂಡಕ್ಟರ್‌ ʼಏಯ್‌ ನೇಮ್‌ ಮಾಡ್ತಿದಿಯಾ? ಎಂದು ಗದರಿದರು. ಬಹುಶಃ ಇವರು ನನ್ನ ಮೇಲೆಯೇ ರೇಗಾಡುತ್ತಿದ್ದಾರೆ ಎಂದು ನಾನು ಭಾವಿಸಿದೆ. ಆಗ ಏನೋ ಮೆಟ್ಟಿಲಿನ ಮೇಲೆ ಬಿದ್ದಂತ ಸದ್ದು ಕೇಳಿಸಿತು, ಕೆಳಗೆ ನೋಡಿದಾಗ ಅದು ನನ್ನ ಮೊಬೈಲ್.‌ ತಬ್ಬಿಬ್ಬಾದ ನಾನು ಮೊಬೈಲ್‌ ಎತ್ತಿಕೊಂಡು ಬಸ್‌ ಏರಿದೆ.

ಇದನ್ನೂ ಓದಿ: ತಂಗಿಯೊಂದಿಗೆ ಮಾತನಾಡಿದನೆಂದು ಅಪ್ರಾಪ್ತ ಬಾಲಕನಿಗೆ ಹಿಗ್ಗಾಮುಗ್ಗ ಥಳಿಸಿದ ಅಣ್ಣಂದಿರು; ವಿಡಿಯೋ ವೈರಲ್

ಆದರೂ ಕಂಡಕ್ಟರ್‌ ಗದರುವುದನ್ನು ಮುಂದುವರೆಸಿದರು, ಪೊಲೀಸ್‌ ದೂರು ದಾಖಲಿಸುವುದಾಗಿ ಹೇಳಿದರು. ನಂತರ ನನ್ನನ್ನು ನೋಡುತ್ತಾ ಸಾರ್‌ ಆತ ನಿಮ್ಮ ಮೊಬೈಲ್‌ ಕಸಿಯಲು ಯತ್ನಿಸಿದ ಎಂದು ಹೇಳಿದರು. ಕಂಡಕ್ಟರ್‌ ಮಾತನ್ನು ಹೇಳಿ ಖದೀಮ ಓಡಿ ಹೋದ. ಇದನ್ನು ನೋಡಿ 10 ವರ್ಷಗಳ ಹಿಂದೆ ನನ್ನ ಪರ್ಸ್‌ ಕಳೆದು ಹೋದ ಕೆಟ್ಟ ನೆನಪು ಮರುಕಳಿಸಿತು. ಆದರೆ ಈ ಬಾರಿ ಕಂಡಕ್ಟರ್‌ ಸಹಾಯಕ್ಕೆ ಬಂದ್ರು. ನಂತರ ನಾನು ಕಂಡಕ್ಟರ್‌ಗೆ ಧನ್ಯವಾದ ತಿಳಿಸಿದೆ” ಎಂದು ಕಳ್ಳನ ಪ್ಲ್ಯಾನ್‌ ವಿಫಲಗೊಳಿಸಿದ ಕಂಡಕ್ಟರ್‌ ಕಥೆಯನ್ನು ಶೇರ್‌ ಮಾಡಿದ್ದಾರೆ.

5 ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್‌ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನನ್ನ ಮೊಬೈಲ್‌ ಕೂಡಾ ಹೀಗೆಯೇ ಕಳೆದು ಹೋಗಿತ್ತು. ಆ ನಂತರ ನಾನು ಜೇಬಿನಲ್ಲಿ ಮೊಬೈಲ್‌ ಇಟ್ಟುಕೊಳ್ಳುವುದನ್ನೇ ಬಿಟ್ಟೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಹೀಗೆ ಹೆಚ್ಚು ಜನರಿರುವಲ್ಲಿ ದಯವಿಟ್ಟು ಮೊಬೈಲ್‌ ಅಥವಾ ಪರ್ಸ್‌ ಜೇಬಿನಲ್ಲಿ ಇಡಬೇಡಿʼ ಎಂದು ಸಲಹೆ ನೀಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:13 pm, Tue, 28 January 25