AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಪರ ಭಾಷಿಕರಿಗೆ ಸುಲಭವಾಗಿ ಕನ್ನಡ ಕಲಿಯಲು ಹೊಸ ಕಲಿಕಾ ಸಾಧನವನ್ನು ಪರಿಚಯಿಸಿದ ಬೆಂಗಳೂರಿನ ಟೆಕ್ಕಿ

ರಾಜ್ಯ ರಾಜಧಾನಿಯಲ್ಲಿ ಕನ್ನಡ ಭಾಷಾ ವಿಚಾರವಾಗಿ ಕನ್ನಡಿಗರು ಮತ್ತು ಕನ್ನಡೇತರರ ನಡುವೆ ಕೋಲ್ಡ್‌ ವಾರ್‌ ನಡೆಯುತ್ತಲೇ ಇರುತ್ತವೆ. ಹೆಚ್ಚಿನ ಸಂಖ್ಯೆಯ ಜನರು ಬೆಂಗಳೂರಿನಲ್ಲಿದ್ದರೂ ಕೂಡಾ ಕನ್ನಡ ಭಾಷೆ ಮಾತನಾಡಲು, ಕಲಿಯಲು ಆಸಕ್ತಿಯನ್ನೇ ತೋರಿಸುತ್ತಿಲ್ಲ. ಕರ್ನಾಟಕಕ್ಕೆ ಬಂದ ಮೇಲೆ ಇಲ್ಲಿನ ಭಾಷೆಯನ್ನು ಕಲಿಯಲೇಬೇಕು ಎಂಬ ಉದ್ದೇಶದಿಂದ ಇಲ್ಲೊಬ್ರು ಟೆಕ್ಕಿ ಹೊಸ ಕಲಿಕಾ ಸಾಧನವನ್ನು ಪರಿಚಯಿಸಿದ್ದಾರೆ. ಈ ಟೂಲ್‌ ಮೂಲಕ ಅನ್ಯಭಾಷಿಕರು ಸುಲಭವಾಗಿ ಕನ್ನಡ ಕಲಿಯಬಹುದಾಗಿದೆ.

Viral: ಪರ ಭಾಷಿಕರಿಗೆ ಸುಲಭವಾಗಿ ಕನ್ನಡ ಕಲಿಯಲು ಹೊಸ ಕಲಿಕಾ ಸಾಧನವನ್ನು ಪರಿಚಯಿಸಿದ ಬೆಂಗಳೂರಿನ ಟೆಕ್ಕಿ
ವೈರಲ್​​ ಪೋಸ್ಟ್​
ಮಾಲಾಶ್ರೀ ಅಂಚನ್​
| Edited By: |

Updated on: Jan 28, 2025 | 5:46 PM

Share

ರಾಜ್ಯ ರಾಜಧಾನಿ ಬೆಂಗಳೂರು ವೈವಿದ್ಯಮಯ ಸಂಸ್ಕೃತಿ ಭಾಷೆಯನ್ನು ಒಳಗೊಂಡಿರುವ ನಗರವಾಗಿದೆ. ದೇಶದ ವಿವಿಧ ಕಡೆಗಳಿಂದ ಉದ್ಯೋಗಕ್ಕೆಂದು ಬರುವ ಅದೆಷ್ಟೋ ಜನರು ತಮ್ಮ ಭಾಷೆಯೇ ಮಾತನಾಡುತ್ತಾರೆ. ಹೌದು ಕನ್ನಡ ನೆಲದಲ್ಲಿ ಬದುಕುತ್ತಿದ್ದರೂ ರಾಜ್ಯದ ಅಧಿಕೃತ ಭಾಷೆಯಾಗಿರುವ ಕನ್ನಡ ಮಾತನಾಡಲು ಹಿಂದೇಟು ಹಾಕ್ತಾರೆ. ಕೆಲ ಅನ್ಯ ಭಾಷಿಕರು ಕನ್ನಡ ಮಾತನಾಡಲು ಉಡಾಫೆ ತೋರಿದ್ರೆ, ಇನ್ನೂ ಕೆಲವರು ಕನ್ನಡ ಭಾಷೆಯನ್ನು ಕಲಿಯಬೇಕು ಎಂಬ ಆಸಕ್ತಿಯನ್ನು ಹೊಂದಿದವರೂ ಇದ್ದಾರೆ. ಇಂತಹವರಿಗಾಗಿ ಇಲ್ಲೊಬ್ರು ಟೆಕ್ಕಿ ಸುಲಭವಾಗಿ ಕನ್ನಡ ಭಾಷೆ ಕಲಿಯಲು ಹೊಸ ಕಲಿಕಾ ಸಾಧನವನ್ನು ಪರಿಚಯಿಸಿದ್ದಾರೆ. ಕರ್ನಾಟಕಕ್ಕೆ ಬಂದ ಮೇಲೆ ಇಲ್ಲಿನ ಭಾಷೆಯನ್ನು ಕಲಿಯಲೇಬೇಕು ಎಂಬ ಉದ್ದೇಶದಿಂದ ಟೆಕ್ಕಿ ಈ ಹೊಸ ಕಲಿಕಾ ಸಾಧನವನ್ನು ಪರಿಚಯಿಸಿದ್ದು, ಈ ಟೂಲ್‌ ಮೂಲಕ ಅನ್ಯಭಾಷಿಕರು ಸುಲಭವಾಗಿ ಕನ್ನಡ ಕಲಿಯಬಹುದಾಗಿದೆ.

ಬೆಂಗಳೂರಿನ ಟೆಕ್ಕಿ ಶಾಂತನು ಗೋಯೆಲ್‌ ಕನ್ನಡ ಕಲಿಕಾ ಸಾಧನವನ್ನು ಪರಿಚಯಿಸಿದ್ದಾರೆ. ಆರಂಭದಲ್ಲಿ ಸ್ವಂತ ಬಳಕೆಗಾಗಿ ಈ ಟೂಲ್‌ ರಚಿಸಿದ್ದರು. ಇದೀಗ ಇವರು ಕನ್ನಡೇತರರು ಸುಲಭವಾಗಿ ಕನ್ನಡ ಕಲಿಯಬೇಕೆಂದು ಈ ಸಾಧನವನ್ನು ಎಲ್ಲರಿಗಾಗಿ ಪರಿಚಯಿಸಿದ್ದು, “ಕನ್ನಡ ಕಲಿಯಲು ಇದು ಸುಲಭ ಸಾಧನವಾಗಿದೆ” ಎಂದು ಗೋಯೆಲ್‌ ಹೇಳಿದ್ದಾರೆ.

ಈ ಕುರಿತ ಪೋಸ್ಟ್‌ ಒಂದನ್ನು ಶಾಂತನು ಗೋಯೆಲ್‌ (Shantanu Goel) ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ನೀವು ಬೆಂಗಳೂರಿನಲ್ಲಿದ್ದರೂ ಕನ್ನಡ ಮಾತನಾಡಲು ನಾಚಿಕೆ ಪಡುತ್ತೀರಾ? ನಾನು ನನಗಾಗಿ ಕನ್ನಡ ಕಲಿಕೆಯ ಪರಿಹಾರ ಸಾಧನವನ್ನು ರಚಿಸಿದ್ದೆ ಮತ್ತು ಅದನ್ನು ಇದೀಗ ಎಲ್ಲರಿಗಾಗಿ ಪ್ರಾರಂಭಿಸುತ್ತಿದ್ದೇನೆ. ಈ ಸಾಧನದ ಸಹಾಯದಿಂದ ನೀವು ಕನ್ನಡವನ್ನು ಕಲಿಯಬಹುದು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್​​ ಪೋಸ್ಟ್​​ ಇಲ್ಲಿದೆ ನೋಡಿ:

ಈ ಸಾಧನದಲ್ಲಿ ಇಂಗ್ಲೀಷ್‌ ಪದಗುಚ್ಛವನ್ನು ನಮೂದಿಸುವ ಮೂಲಕ ಅದರ ಕನ್ನಡ ಅರ್ಥವನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.

ಇದನ್ನೂ ಓದಿ: ಏಯ್‌ ಏನ್‌ ಮಾಡ್ತಿದಿಯಾ ನೀನಿಲ್ಲಿ; ತನ್ನ ಸಮಯ ಪ್ರಜ್ಞೆಯಿಂದ ಮೊಬೈಲ್‌ ಕಳ್ಳತನ ತಪ್ಪಿಸಿದ ಬಿಎಂಟಿಸಿ ಕಂಡಕ್ಟರ್‌

ಜನವರಿ 27 ರಂದು ಹಂಚಿಕೊಳ್ಳಲಾದ ಈ ಪೋಸ್ಟ್‌ 46 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅನೇಕ ಸಂದರ್ಭದಲ್ಲಿ ಇದು ಸಾಕಷ್ಟು ಉಪಯುಕ್ತವಾಗಿದೆ. ಇದನ್ನು ರಚಿಸಿದ್ದಕ್ಕಾಗಿ ಧನ್ಯವಾದಗಳುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಿಜವಾಗಿಯೂ ಇದಂತೂ ತುಂಬಾ ಒಳ್ಳೆಯ ಟೂಲ್‌ʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಸೂಪರ್‌ ಆಗಿದೆ, ತುಂಬಾ ಉತ್ತಮ ಪ್ರಯತ್ನʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ದೆಹಲಿ: ಶಿಕ್ಷಣ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ
ದೆಹಲಿ: ಶಿಕ್ಷಣ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ
ವಾಣಿಜ್ಯ LPG ಸಿಲಿಂಡರ್ ಬೆಲೆ ಏರಿಕೆ: ಹೋಟೆಲ್ ಊಟ-ತಿಂಡಿ ದರ ಹೆಚ್ಚಾಗುತ್ತಾ?
ವಾಣಿಜ್ಯ LPG ಸಿಲಿಂಡರ್ ಬೆಲೆ ಏರಿಕೆ: ಹೋಟೆಲ್ ಊಟ-ತಿಂಡಿ ದರ ಹೆಚ್ಚಾಗುತ್ತಾ?