ಮಹಾಕುಂಭಮೇಳದಲ್ಲಿ ಲೈವ್ ರಿಪೋರ್ಟಿಂಗ್ ವೇಳೆ ವರದಿಗಾರನ ಕೈಯಲ್ಲಿದ್ದ ಮೈಕ್ ಎಗರಿಸಿದ ಆಸಾಮಿ; ವಿಡಿಯೋ ವೈರಲ್
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳಕ್ಕೆ ಪ್ರತಿನಿತ್ಯ ವಿಶ್ವದ ಮೂಲೆಮೂಲೆಯಿಂದ ಭಕ್ತರು ಆಗಮಿಸುತ್ತಿದ್ದಾರೆ. ಮಹಾಕುಂಭಮೇಳಕ್ಕೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು, ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದೀಗ ಇಲ್ಲೊಂದು ವಿಡಿಯೋ ವೈರಲ್ ಆಗಿದ್ದು, ವರದಿಗಾರ ಲೈವ್ ರಿಪೋರ್ಟಿಂಗ್‌ನಲ್ಲಿ ತೊಡಗಿದ್ದ ವೇಳೆ ಅಲ್ಲಿಗೆ ಬಂದಂತಹ ಯುವಕನೊಬ್ಬ ರಿಪೋರ್ಟರ್ ಕೈಯಲ್ಲಿದ್ದ ಮೈಕ್ ಕಸಿದುಕೊಂಡು ಓಡಿ ಹೋಗಿದ್ದಾನೆ. ಈ ತಮಾಷೆಯ ದೃಶ್ಯವನ್ನು ಕಂಡು ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
![ಮಹಾಕುಂಭಮೇಳದಲ್ಲಿ ಲೈವ್ ರಿಪೋರ್ಟಿಂಗ್ ವೇಳೆ ವರದಿಗಾರನ ಕೈಯಲ್ಲಿದ್ದ ಮೈಕ್ ಎಗರಿಸಿದ ಆಸಾಮಿ; ವಿಡಿಯೋ ವೈರಲ್](https://images.tv9kannada.com/wp-content/uploads/2025/01/maha-kumbh-2025-2.jpg?w=1280)
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಜಗತ್ತಿನ ಅತಿ ದೊಡ್ಡ ಧಾರ್ಮಿಕ ಉತ್ಸವವಾದ ಮಹಾಕುಂಭಮೇಳ ನಡಿತಿದೆ. ಈ ಒಂದು ಧಾರ್ಮಿಕ ಉತ್ಸವಕ್ಕೆ ಪ್ರತಿನಿತ್ಯ ಲಕ್ಷಾಂತರ ಭಕ್ತ, ಸಾಧು ಸಂತರು ಆಗಮಿಸುತ್ತಿದ್ದಾರೆ. ಇನ್ನೂ ಮಾಧ್ಯಮ ಮಿತ್ರರು, ಯೂಟ್ಯೂಬರ್ಸ್ ಉತ್ಸವದ ಲೈವ್ ಕವರೇಜ್ ಮಾಡುವುದರ ಜೊತೆಗೆ ಭಕ್ತರನ್ನು ಮಾತನಾಡಿಸುವಂತಹ ಪ್ರಯತ್ನವನ್ನು ಕೂಡಾ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಲೈವ್ ರಿಪೋರ್ಟಿಂಗ್ ವೇಳೆ ರಿಪೋರ್ಟರ್ ಮೈಕ್ ಹಿಡಿದು, ಭಕ್ತರೊಬ್ಬರ ಬಳಿ ಮಾತನಾಡಿಸುವ ಸಂದರ್ಭದಲ್ಲಿ ಅಲ್ಲಿಗೆ ಬಂದಂತಹ ಯುವಕನೊಬ್ಬ ವರದಿಗಾರನ ಕೈಯಲ್ಲಿದ್ದ ಮೈಕ್ ಕಸಿದುಕೊಂಡು ಓಡಿ ಹೋಗಿದ್ದಾನೆ. ಈ ತಮಾಷೆಯ ದೃಶ್ಯವನ್ನು ಕಂಡು ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ಮಹಾಕುಂಭಮೇಳಕ್ಕೆ ಆಗಮಿಸಿದಂತಹ ಭಕ್ತರೊಬ್ಬರು ತಮ್ಮ ಅನುಭವವನ್ನು ವರದಿಗಾರನ ಜೊತೆ ಹಂಚಿಕೊಳ್ಳುತ್ತಿದ್ದಂತ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಯುವಕನೊಬ್ಬ ರಿಪೋರ್ಟರ್ ಕೈಯಲ್ಲಿದ್ದ ಮೈಕ್ ಕಸಿದು ಓಡಿ ಹೋಗಿದ್ದಾನೆ. GaneshBhamu89 ಹೆಸರಿನ ಎಕ್ಸ್ ಖಾತೆಯಲ್ಲಿ ಈ ಕುರಿತ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, “ಮಹಾಕುಂಭಮೇಳದಲ್ಲಿ ಜನರು ಸಂಪೂರ್ಣ ನಗು ಮತ್ತು ಮೋಜಿನ ವಾತಾವರಣವನ್ನು ಸೃಷ್ಟಿಸಿದ್ದಾರೆ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
महाकुंभ मे माहौल पूरी तरह हंसी मजाक का बना रखा है लोगो ने….
अब रिपोर्टर साहब का माइक लेकर लड़का फरार 😅😃 pic.twitter.com/03ndTJvlxa
— Ganesh Bhamu (@GaneshBhamu87) January 27, 2025
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ರಿಪೋರ್ಟರ್ ಮಹಾಕುಂಭಮೇಳದಲ್ಲಿ ಲೈವ್ ರಿಪೋರ್ಟಿಂಗ್ ಮಾಡುತ್ತಾ, ಅಲ್ಲಿದ್ದ ಭಕ್ತರೊಬ್ಬರನ್ನು ಮಾತನಾಡಿಸುತ್ತಿದ್ದ ವೇಳೆ ಅಲ್ಲಿಗೆ ಬಂದಂತಹ ಯುವಕನೊಬ್ಬ ಇದ್ದಕ್ಕಿದ್ದಂತೆ ವರದಿಗಾರನ ಕೈಯಲ್ಲಿದ್ದ ಮೈಕ್ ಕಸಿದು ಓಡಿ ಹೋಗುವಂತಹ ತಮಾಷೆಯ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಪರ ಭಾಷಿಕರಿಗೆ ಸುಲಭವಾಗಿ ಕನ್ನಡ ಕಲಿಯಲು ಹೊಸ ಕಲಿಕಾ ಸಾಧನವನ್ನು ಪರಿಚಯಿಸಿದ ಬೆಂಗಳೂರಿನ ಟೆಕ್ಕಿ
ಜನವರಿ 27 ರಂದು ಹಂಚಿಕೊಳ್ಳಲಾದ ಈ ವಿಡಿಯೋ 4.3 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದಂತೂ ತುಂಬಾನೇ ತಮಾಷೆಯಾಗಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಜನರು ಹೀಗೆಲ್ಲಾ ತಪ್ಪು ಕೆಲಸ ಮಾಡಬಾರದುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಕೆಲವೊಂದು ಬಾರಿ ಇಂತಹ ದೃಶ್ಯಗಳು ನಗು ತರಿಸುತ್ತವೆʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ