Viral: ಕುಟುಂಬದ ಸದಸ್ಯರ ಸ್ಕ್ರೀನ್ ಟೈಮ್ ಕಡಿಮೆ ಮಾಡಲು ಉಪಾಯ ಕಂಡುಕೊಂಡ ಬೆಂಗಳೂರಿಗ

ಇತ್ತೀಚೆಗಿನ ದಿನಗಳಲ್ಲಿ ಮೊಬೈಲ್ ಫೋನ್ ಅಡಿಕ್ಷನ್ ಹೆಚ್ಚಾಗಿದೆ. ಹೀಗಾಗಿ ಕುಟುಂಬದ ಜತೆಗೆ ಮಾತನಾಡಲು ಹಾಗೂ ಕಳೆಯಲು ಸಮಯವಿಲ್ಲ. ಹೀಗಾಗಿ ಬೆಂಗಳೂರಿನ ವ್ಯಕ್ತಿಯೊಬ್ಬ ಸ್ಕ್ರೀನ್ ಟೈಮ್ ದಿನಚರಿಯನ್ನು ಮೋಜಿನ ಲೀಡರ್‌ಬೋರ್ಡ್ ಸವಾಲಾಗಿ ಪರಿವರ್ತಿಸಿದ್ದಾರೆ. ಇದರಲ್ಲಿ ಗೆದ್ದವರಿಗೆ ಬಹುಮಾನ ಮಾತ್ರ ಸ್ವಲ್ಪ ವಿಭಿನ್ನವಾಗಿಯೇ ಇದೆ. ಈ ಬಗ್ಗೆ ಪೋಸ್ಟ್ ಮಾಡಿದ್ದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

Viral: ಕುಟುಂಬದ ಸದಸ್ಯರ ಸ್ಕ್ರೀನ್ ಟೈಮ್ ಕಡಿಮೆ ಮಾಡಲು ಉಪಾಯ ಕಂಡುಕೊಂಡ ಬೆಂಗಳೂರಿಗ
ಸಾಂದರ್ಭಿಕ ಚಿತ್ರ
Image Credit source: Pinterest

Updated on: Nov 23, 2025 | 10:14 AM

ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಮಾತ್ರವಲ್ಲ ದೊಡ್ಡವರು ಕೂಡ ಮೊಬೈಲ್, ಟಿವಿ ಸೇರಿದಂತೆ ತಮ್ಮ ಹೆಚ್ಚಿನ ಸಮಯವನ್ನು ಅದರಲ್ಲೇ ಕಳೆಯುತ್ತಾರೆ. ಹೀಗಾಗಿ ಮೊಬೈಲ್‌ ನೋಡದೇ ಹೋದರೆ ದಿನ ಪೂರ್ಣವಾಗುವುದೇ ಇಲ್ಲ. ಅತಿಯಾದ ಸ್ಕ್ರೀನ್ ಬಳಕೆಯಿಂದಾಗಿ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬಿರುತ್ತಿದೆ. ಇದಕ್ಕೆ ಬೆಂಗಳೂರಿನ (Bengaluru) ವ್ಯಕ್ತಿಯೊಬ್ಬರು ಒಂದೊಳ್ಳೆ ಉಪಾಯ ಕಂಡು ಕೊಂಡಿದ್ದಾರೆ. ಈ ವ್ಯಕ್ತಿಯೂ ತಮ್ಮ ಕುಟುಂಬದ ಸ್ಕ್ರೀನ್ ವ್ಯಸನವನ್ನು ಸ್ಪರ್ಧೆಯನ್ನಾಗಿ ಪರಿವರ್ತಿಸಿದ್ದಾರೆ. ಯಾರು ಕಡಿಮೆ ಸ್ಕ್ರೀನ್ ಟೈಮ್ ಹೊಂದಿರುತ್ತಾರೋ ಅವರೇ ಆ ವಾರದ ಭೋಜನದ ಮೆನುವನ್ನು ನಿರ್ಧರಿಸುತ್ತಾರೆ. ಈ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಒಳ್ಳೆಯ ಪ್ರಯತ್ನ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸ್ಕ್ರೀನ್ ಟೈಮ್ ಕಡಿಮೆ ಮಾಡಲು ಈ ವ್ಯಕ್ತಿಯ ಉಪಾಯ ನೋಡಿ

ಪಂಕಜ್  (Pankaj) ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಸ್ಕ್ರೀನ್ ಟೈಮ್ ಸ್ಪರ್ಧೆಯಾಗಿ ಪರಿವರ್ತಿಸಿದ ರೀತಿಯನ್ನು ವಿವರಿಸಿದ್ದಾರೆ. ನನ್ನ ಕುಟುಂಬದ ಸ್ಕ್ರೀನ್ ಟೈಮ್ ವ್ಯಸನವನ್ನು ಸ್ಪರ್ಧೆಯನ್ನಾಗಿ ಪರಿವರ್ತಿಸಿದೆ. ಈಗ ನಮ್ಮಲ್ಲಿ ಎಲ್ಲರ ಸ್ಕ್ರೀನ್ ಸಮಯವನ್ನು ಟ್ರ್ಯಾಕ್ ಮಾಡುವ ಡ್ಯಾಶ್‌ಬೋರ್ಡ್ ಅನ್ನು ನಿರ್ಮಿಸಲಾಗಿದೆ. ನಾನು ಸರಾಸರಿ 3.1 ಗಂಟೆ/ದಿನಕ್ಕೆ ಮುನ್ನಡೆಯಲ್ಲಿದ್ದೇನೆ. ವಿಜೇತರು ಇಡೀ ವಾರದ ಊಟದ ಮೆನುವನ್ನು ನಿರ್ಧರಿಸುವ ಹಕ್ಕನ್ನು ಪಡೆಯುತ್ತಾರೆ ಎಂದು ಬರೆದುಕೊಂಡಿದ್ದಾರೆ.

ವೈರಲ್‌ ಪೋಸ್ಟ್‌ ಇಲ್ಲಿದೆ ನೋಡಿ

ತನ್ವರ್ ಹೌಸ್ ಲೀಡರ್‌ಬೋರ್ಡ್’ ಎಂಬ ಕುಟುಂಬ ಸವಾಲಾಗಿದೆ. ಪಂಕಜ್ ಅವರು, ತನ್ವರ್ ಹೌಸ್ ಕುಟುಂಬದ ಸ್ಕ್ರೀನ್-ಟೈಮ್ ಲೀಡರ್‌ಬೋರ್ಡ್‌ನ ಸ್ಕ್ರೀನ್‌ಶಾಟ್‌ನ್ನು ಹಂಚಿಕೊಂಡಿದ್ದಾರೆ. ಈ ಬೋರ್ಡ್‌ನಲ್ಲಿ ಕಡಿಮೆ ಸ್ಕ್ರೀನ್ ಟೈಮ್‌ನೊಂದಿಗೆ 1 ನೇ ಸ್ಥಾನದಲ್ಲಿ ಪಂಕಜ್ ಇದ್ದಾರೆ. ನಂತರ ಸ್ಥಾನದಲ್ಲಿ ದೀಪು, ಅವರ ತಾಯಿ ಹಾಗೂ ತಂದೆ ಇರುವುದನ್ನು ನೋಡಬಹುದು.

ಇದನ್ನೂ ಓದಿ:ಮಹಿಳೆಗೆ ಆಹಾರ ತಂದುಕೊಟ್ಟು ಹಸಿವು ನೀಗಿಸಿದ ಬೆಂಗಳೂರಿನ ಉಬರ್ ಚಾಲಕ

ಈ ಪೋಸ್ಟ್ ಎಪ್ಪತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ನೀವು ಪ್ರತಿಯೊಬ್ಬ ಸದಸ್ಯರ ಸ್ಕ್ರೀನ್ ಸಮಯವನ್ನು ಹೇಗೆ ಪಡೆಯುತ್ತಿದ್ದೀರಿ? ಎಂದು ಕೇಳಿದ್ದಾರೆ. ಇನ್ನೊಬ್ಬರು, ನೀವು ಆಟವಾಡುತ್ತಿದ್ದೀರಿ ಅಷ್ಟೇ. ಆದರೆ ಇತರರು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ನಿಮಗೆ ಈ ರೀತಿಯ ಐಡಿಯಾಗಳು ಹೇಗೆ ಬರುತ್ತವೆ? ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ