ಕರ್ನಾಟಕ ರಾಜ್ಯ ಸರ್ಕಾರ ಹೊಸ ವರ್ಷದ ಆರಂಭದಲ್ಲಿಯೇ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರವನ್ನು ಏರಿಸಿದೆ. ನಮ್ಮ ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಸೇವೆ ಕೊಡಲಾಗುತ್ತಿದೆ. ಆದರೆ ಇದೀಗ ಪುರುಷ ಪ್ರಯಾಣಿಕರಿಗೆ ಸರ್ಕಾರಿ ಬಸ್ಸುಗಳಲ್ಲಿ ಟಿಕೆಟ್ ದರ ಏಕಾಏಕಿ ಹೆಚ್ಚಳ ಮಾಡಿದ್ದು, ಇದು ಭಾರಿ ಜನಾಕ್ರೋಶಕ್ಕೆ ಕಾರಣವಾಗಿದೆ. ಇನ್ನೂ ಈ ಬಗ್ಗೆ ಬೆಂಗಳೂರಿನ ವ್ಯಕ್ತಿಯೊಬ್ಬರು ನೀವು ಹೀಗೆ ಮಹಿಳೆಯರಿಗೆ ಫ್ರೀ ಬಸ್ ಸೇವೆ ಕೊಡೋ ಬದ್ಲು ಅದೇ ಹಣವನ್ನು ಉತ್ತಮ ರೈತರಿಗೆ, ರಸ್ತೆ ಗುಂಡಿಗಳನ್ನು ಸರಿ ಮಾಡುವಂತಹ ಉತ್ತಮ ಕೆಲಸಕ್ಕೆ ಉಪಯೋಗಿಸಬಹುದಲ್ಲವೇ ಎಂದು ಪ್ರಶ್ನಿಸಿದ್ದಾರೆ. ಈ ಪೋಸ್ಟ್ ಇದೀಗ ಭಾರೀ ವೈರಲ್ ಆಗುತ್ತಿದೆ.
ಬೆಂಗಳೂರು ಮೂಲದ ಕಿರಣ್ ಕುಮಾರ್ (KiranKS) ಎಂಬವರು ಮಹಿಳೆಯರಿಗಿರುವ ಉಚಿತ ಬಸ್ ಪ್ರಯಾಣವನ್ನು ಪ್ರಶ್ನಿಸಿ, ತಮ್ಮ ಆರು ಆಲೋಚನೆಗಳ ಬಗ್ಗೆ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
I took an early morning bus to Mysuru, from Bengaluru. ₹210 fare. Comfortable KSRTC bus and a world class highway for fast travel.
But I got a few thoughts.
1) Nearly 30 of the 50 passengers were women. Just show Aadhar and travel free. Is this fair? Is it equality?
2) 20… pic.twitter.com/2TfkzF88IA— Kiran Kumar S (@KiranKS) January 8, 2025
“ಬೆಂಗಳೂರಿನಿಂದ ಮೈಸೂರಿಗೆ ಹೋಗಲು ಆರಾಮದಾಯಕವಾಗಿರುವ ಕೆಎಸ್‌ಆರ್‌ಟಿಸಿ ಬಸ್ ಹತ್ತಿದೆ. ಅಲ್ಲಿ ಟಿಕೆಟ್ ದರ 210 ಇತ್ತು. ಇದನ್ನು ನೋಡಿದಾಗ ನನಗೆ ಕೆಲವೊಂದು ಆಲೋಚನೆಗಳು ಬಂದವು;
ಮತ್ತಷ್ಟು ಓದಿ:ಮನುಷ್ಯರನ್ನು ನೀರಿಗಿಳಿಯುವಂತೆ ಮಾಡಲು ಸಾವಿನ ನಾಟಕವಾಡುವ ಖತರ್ನಾಕ್ ಮೊಸಳೆಗಳು; ವಿಡಿಯೋ ವೈರಲ್
ಜನವರಿ 8 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.2 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಸರ್ ಮುಂದಿನ ಬಾರಿ ಜಾಗರೂಕತೆಯಿಂದ ಆಲೋಚಿಸಿ ಮತ ಚಲಾಯಿಸಿʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಿಮ್ಮ ಮಾತು ಅಕ್ಷರಶಃ ನಿಜ ಸರ್ʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಹೌದು ಸರ್ ಉಚಿತ ಸೌಲಭ್ಯಗಳಿಗಿಂತ ಸಮಾನತೆ ಮುಖ್ಯʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ