ಬೆಂಗಳೂರು: ಮೈಕಲ್‌ ಜಾಕ್ಸನ್‌ಗಿಂತ ನಾನೇನು ಕಮ್ಮಿಯಿಲ್ಲ; ಸಖತ್ತಾಗಿ ಹಿಪ್‌-ಹಾಪ್‌ ಡ್ಯಾನ್ಸ್‌ ಮಾಡಿದ ಪ್ರೊಫೆಸರ್‌

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 24, 2025 | 5:27 PM

ಸ್ಕೂಲ್‌, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸುವುದು ಕಾಮನ್‌ ಅಲ್ವಾ. ಆದ್ರೆ ಇಲ್ಲೊಬ್ರು ಪ್ರೊಫೆಸರ್‌ ವಿದ್ಯಾರ್ಥಿಗಳ ಮುಂದೆ ತನ್ನ ಡ್ಯಾನ್ಸ್‌ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಫುಲ್‌ ಶೈನ್‌ ಆಗಿದ್ದಾರೆ. ಮೈಕಲ್‌ ಜಾಕ್ಸನ್‌ಗಿಂತ ನಾನೇನು ಕಮ್ಮಿಯಿಲ್ಲ ಎನ್ನುವಂತೆ ಹಿಪ್‌-ಹಾಪ್‌ ಡ್ಯಾನ್ಸ್‌ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದ್ದು, ಪ್ರಾಧ್ಯಪಕರ ಡ್ಯಾನ್ಸ್‌ ಮೋಡಿಗೆ ನೆಟ್ಟಿಗರು ಫುಲ್‌ ಫಿದಾ ಆಗಿದ್ದಾರೆ.

ಬೆಂಗಳೂರು: ಮೈಕಲ್‌ ಜಾಕ್ಸನ್‌ಗಿಂತ ನಾನೇನು ಕಮ್ಮಿಯಿಲ್ಲ; ಸಖತ್ತಾಗಿ ಹಿಪ್‌-ಹಾಪ್‌ ಡ್ಯಾನ್ಸ್‌ ಮಾಡಿದ ಪ್ರೊಫೆಸರ್‌
ವೈರಲ್​​ ವಿಡಿಯೊ
Follow us on

ಬೆಂಗಳೂರು, ಮಾ. 24: ಶಾಲಾ ಕಾಲೇಜುಗಳಲ್ಲಿ (School College) ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಡ್ಯಾನ್ಸ್‌ (Dance), ಹಾಡು ಸೇರಿದಂತೆ ಇತ್ಯಾದಿ ಪ್ರತಿಭೆಗಳನ್ನು ಪ್ರದರ್ಶಿಸುತ್ತಿರುತ್ತಾರೆ. ವಿದ್ಯಾರ್ಥಿಗಳ ಚಿಂದಿ ಡ್ಯಾನ್ಸ್‌ಗಳಿಗೆ ಸಂಬಂಧಿಸಿದ ಒಂದಷ್ಟು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ (Social Media) ವೈರಲ್‌ ಹರಿದಾಡುತ್ತಿರುತ್ತವೆ. ಇದೀಗ ಇಲ್ಲೊಂದು ವಿಡಿಯೋ ಸಖತ್‌ ವೈರಲ್‌ ಆಗುತ್ತಿದ್ದು, ಕಾಲೇಜು ಪ್ರೊಫೆಸರ್‌ (Professor) ಒಬ್ರು ವಿದ್ಯಾರ್ಥಿಗಳ ಮುಂದೆ ತಮ್ಮ ಡ್ಯಾನ್ಸ್‌ ಪ್ರತಿಭೆಯನ್ನು (talent) ಪ್ರದರ್ಶಿಸುವ ಮೂಲಕ ಫುಲ್‌ ಶೈನ್‌ ಆಗಿದ್ದಾರೆ. ಹೌದು ಮೈಕಲ್‌ ಜಾಕ್ಸನ್‌ಗಿಂತ (Michael Jackson) ನಾನೇನು ಕಮ್ಮಿಯಿಲ್ಲ ಎನ್ನುವಂತೆ ಭರ್ಜರಿಯಾಗಿ ಹಿಪ್‌-ಹಾಪ್‌ (Hip-Hop) ಡ್ಯಾನ್ಸ್‌ ಮಾಡಿದ್ದು, ಇವರ ಈ ನೃತ್ಯ ಮೋಡಿಗೆ ನೆಟ್ಟಿಗರು ಮನ ಸೋತಿದ್ದಾರೆ.

ಬೆಂಗಳೂರಿನ ಗ್ಲೋಬಲ್‌ ಅಕಾಡೆಮಿ ಆಫ್‌ ಟೆಕ್ನಾಲಜಿ (GAT) ಸಂಸ್ಥೆಯ ಪ್ರೊಫೆಸರ್‌ ಪುಷ್ಪರಾಜ್‌ ಬೀಟ್‌ಬಾಕ್ಸ್‌ ಲಯಕ್ಕೆ ತಕ್ಕಂತೆ ಹಿಪ್‌-ಹಾಪ್‌ ಡ್ಯಾನ್ಸ್‌ ಮಾಡಿದ್ದಾರೆ. ತಮ್ಮ ಕಾಲೇಜಿನ ವಿದ್ಯಾರ್ಥಿಗಳ ಮುಂದೆ ಪ್ರೊಫೆಸರ್‌ ಸಲೀಸಾಗಿ ಡ್ಯಾನ್ಸ್‌ ಮಾಡಿದ್ದು, ಇವರ ಈ ಟ್ಯಾಲೆಂಟ್‌ನ್ನು ಶಿಳ್ಳೆ, ಚಪ್ಪಾಳೆ ತಟ್ಟುವ ಮೂಲಕ ವಿದ್ಯಾರ್ಥಿಗಳು ಶ್ಲಾಘಿಸಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದ ನೋಡಿ:

ಹರ್ಷ್ ಗೋಯೆಂಕಾ (Harsh Goenka) ಎಂಬವರು ಈ ಕುರಿತ ವಿಡಿಯೋವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದು, “ಬೆಂಗಳೂರಿನ ಕಾಲೇಜು ಪ್ರಾಧ್ಯಾಪಕರ ಮೈಕಲ್‌ ಜಾಕ್ಸನ್‌ ಮೂವ್ಸ್‌” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಪ್ರೊಫೆಸರ್‌ ತಮ್ಮ ವಿದ್ಯಾರ್ಥಿಗಳ ಮುಂದೆ ಬೀಟ್‌ಬಾಕ್ಸ್‌ ಲಯಕ್ಕೆ ತಕ್ಕಂತೆ ಮೈಕಲ್‌ ಜಾಕ್ಸನ್‌ನಂತೆ ಹಿಪ್‌-ಹಾಪ್‌ ಡ್ಯಾನ್ಸ್‌ ಮಾಡುತ್ತಿರುವ ಅದ್ಭುತ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಮನೆಯಲ್ಲೇ 35 ನಿಮಿಷ 25 ಸಾವಿರ ಲೀಟರ್‌ ಮಳೆ ನೀರು ಸಂಗ್ರಹಿಸಿದವ್ಯಕ್ತಿ

ಮಾರ್ಚ್‌ 23 ರಂದು ಶೇರ್‌ ಮಾಡಲಾದ ಈ ವಿಡಿಯೋ 71 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅಬ್ಬಬ್ಬಾ ಅದ್ಭುತ ಡ್ಯಾನ್ಸ್‌ ಮೂವ್ಸ್‌ʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇವರ ಡ್ಯಾನ್ಸ್‌ ಎಲ್ಲಾ ನೋಡ್ತಿದ್ರೆ ನನಗೂ ಕೂಡಾ ಶಿಕ್ಷಕನಾಗಬೇಕು ಎಂದು ಆಸೆಯಾಗುತ್ತಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಮೈಕಲ್‌ ಜಾಕ್ಸನ್‌ಗಿಂತ ಏನು ಕಮ್ಮಿಯಿಲ್ಲ ಈ ಪ್ರೊಫೆಸರ್‌ʼ ಎಂದು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ