Viral:ಅಶೋಕ ಚಕ್ರದ ಬದಲು ರಾಷ್ಟ್ರಧ್ವಜದ ರಂಗೋಲಿಯಲ್ಲಿ ಕರ್ನಾಟಕ ನಕ್ಷೆ ಬಿಡಿಸಿದ ವಿದ್ಯಾರ್ಥಿಗಳು; ಫೋಟೋ ವೈರಲ್

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 28, 2025 | 10:54 AM

ಬೆಂಗಳೂರಿನ ಆರ್‌ವಿಐಟಿಎಂ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಅಲ್ಲಿನ ವಿದ್ಯಾರ್ಥಿಗಳು ತಾವು ಬಿಡಿಸಿದ ರಾಷ್ಟ್ರ ಧ್ವಜದ ರಂಗೋಲಿಯಲ್ಲಿ ಅಶೋಕ ಚಕ್ರದ ಬದಲಿಗೆ ಕರ್ನಾಟಕದ ನಕ್ಷೆಯನ್ನು ಬಿಡಿಸಿದ್ದಾರೆ. ಈ ಕುರಿತ ಫೋಟೋವೊಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದ್ದು, ತ್ರಿವರ್ಣ ಧ್ವಜದ ಮೇಲೆ ಹೀಗೆ ಕರ್ನಾಟಕದ ನಕ್ಷೆ ಬಿಡಿಸಿದ ರಂಗೋಲಿಯ ಚಿತ್ರ ಆನ್‌ಲೈನ್‌ನಲ್ಲಿ ಚರ್ಚೆ ಹುಟ್ಟುಹಾಕಿದೆ.

Viral:ಅಶೋಕ ಚಕ್ರದ ಬದಲು ರಾಷ್ಟ್ರಧ್ವಜದ ರಂಗೋಲಿಯಲ್ಲಿ ಕರ್ನಾಟಕ ನಕ್ಷೆ ಬಿಡಿಸಿದ ವಿದ್ಯಾರ್ಥಿಗಳು; ಫೋಟೋ ವೈರಲ್
ವೈರಲ್ ಫೋಟೋ
Follow us on

ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದ ಸಂದರ್ಭದಲ್ಲಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ರಾಷ್ಟ್ರಧ್ವಜದ ರಂಗೋಲಿಯನ್ನು ಬಿಡಿಸುವುದು ಸಾಮಾನ್ಯವಾಗಿದೆ. ಆದ್ರೆ ಇಲ್ಲೊಂದು ಕಾಲೇಜಿನಲ್ಲಿ ವಿದ್ಯಾರ್ಥಿಗಳು ಬಿಡಿಸಿದ ರಂಗೋಲಿ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ. ಹೌದು ಬೆಂಗಳೂರಿನ ಆರ್‌ವಿಐಟಿಎಂ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಅಲ್ಲಿನ ವಿದ್ಯಾರ್ಥಿಗಳು ತಾವು ಬಿಡಿಸಿದ ರಾಷ್ಟ್ರ ಧ್ವಜದ ರಂಗೋಲಿಯಲ್ಲಿ ಅಶೋಕ ಚಕ್ರದ ಬದಲಿಗೆ ಕರ್ನಾಟಕದ ನಕ್ಷೆಯನ್ನು ಬಿಡಿಸಿದ್ದು, ಈ ಕುರಿತ ಫೋಟೋವೊಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಗಣರಾಜ್ಯೋತ್ಸವದ ಪ್ರಯುಕ್ತ ಬೆಂಗಳೂರಿನ ಆರ್‌ವಿಟಿಎಂ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿಗಳು ರಾಷ್ಟ್ರ ಧ್ವಜದ ರಂಗೋಲಿಯನ್ನು ಬಿಡಿಸಿದ್ದು, ಅದರಲ್ಲಿ ಮಧ್ಯಭಾಗದಲ್ಲಿ ಅಶೋಕ ಚಕ್ರದ ಬದಲಿಗೆ ಕರ್ನಾಟಕದ ನಕ್ಷೆ ಬಿಡಿಸಿದ್ದಾರೆ. ಈ ಫೋಟೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ಇದು ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿದಂತಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಈ ಕುರಿತ ಫೋಟೋವೊಂದನ್ನು r/Btechtards ಹೆಸರಿನ ರೆಡ್ಡಿಟ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ. ವೈರಲ್‌ ಆಗುತ್ತಿರುವ ಫೋಟೋದಲ್ಲಿ ತ್ರಿವರ್ಣ ಧ್ವಜದ ರಂಗೋಲಿಯಲ್ಲಿ ಅಶೋಕ ಚಕ್ರದ ಬದಲು ಕರ್ನಾಟಕ ಮ್ಯಾಪ್ ಮೂಡಿರುವ ದೃಶ್ಯವನ್ನು ಕಾಣಬಹುದು. ‌

ಇದನ್ನೂ ಓದಿ:  ಫೋನ್ ತಂದ ಆಪತ್ತು; ಕೀ ಪ್ಯಾಡ್‌ ಮೊಬೈಲ್‌ ನುಂಗಿ ಪ್ರಾಣ ಕಳೆದುಕೊಂಡ ಮಹಿಳೆ

ಈ ಪೋಸ್ಟ್‌ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದನ್ನು ಫ್ಲ್ಯಾಗ್‌ ಏರಿಯಾ ಆರ್ಟ್‌ ಎಂದು ಕರೆಯಲಾಗುತ್ತದೆ. ಇದರಲ್ಲಿ ಧ್ವಜದೊಳಗೆ ಭಾರತದ ಹೆಮ್ಮೆಯ ಸಾಧನೆಗಳ ವಿಷಯಗಳ ಚಿತ್ರವನ್ನು ಸಹ ಬಿಡಿಸಲಾಗುತ್ತದೆ. ಅದೇ ರೀತಿ ವಿದ್ಯಾರ್ಥಿಗಳು ಪ್ರೀತಿಯಿಂದ ಕರ್ನಾಟಕದ ನಕ್ಷೆ ಬಿಡಿಸಿದ್ದಾರೆ, ಇದನ್ನು ದೊಡ್ಡ ವಿಷಯ ಮಾಡುವ ಅಗತ್ಯವೇ ಇಲ್ಲʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಭಾರತ ಮತ್ತು ಕರ್ನಾಟಕದ ಧ್ವಜವನ್ನು ಸಂಯೋಜಿಸಿರುವ ರೀತಿ ಸುಂದರವಾಗಿದೆ. ಇದರಲ್ಲಿ ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿದ ವಿಷಯ ಏನೂ ಇಲ್ಲ, ದಯವಿಟ್ಟು ದ್ವೇಷ ಹರಡದಿರಿʼ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಹೀಗೆ ಕೆಲವರು ಇದಕ್ಕೆ ಬೆಂಬಲ ನೀಡಿದರೆ, ಇನ್ನೂ ಕೆಲವರು ಇದು ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿದಂತಾಗಿದೆ ಎಂದು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 10:54 am, Tue, 28 January 25