Video: ಕೈಕೊಟ್ಟ ಬೈಕ್ ರಿಪೇರಿ ಮಾಡಿ ಮಧ್ಯರಾತ್ರಿ ಮನೆಗೆ ತಲುಪಿಸಿದ ರ‍್ಯಾಪಿಡೊ ಚಾಲಕ; ಒಳ್ಳೆತನ ಮೆಚ್ಚಿದ ಬೆಂಗಳೂರಿನ ಮಹಿಳೆ

ನಮ್ಮ ಸುತ್ತಮುತ್ತಲಿನಲ್ಲಿ ಒಳ್ಳೆಯ ವ್ಯಕ್ತಿಗಳು ಇದ್ದಾರೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಹೌದು, ಮಧ್ಯರಾತ್ರಿ ಕೈಕೊಟ್ಟ ಬೈಕ್ ರಿಪೇರಿ ಮಾಡಿ, ಒಂದು ಗಂಟೆಗೆ ಸುರಕ್ಷಿತವಾಗಿ ಮನೆಗೆ ತಲುಪಿಸಿದ ರ‍್ಯಾಪಿಡೊ ಸವಾರನ ಒಳ್ಳೆತನವನ್ನು ಬೆಂಗಳೂರಿನ ಮಹಿಳೆ ಹೊಗಳಿದ್ದಾರೆ. ರ‍್ಯಾಪಿಡೊ ಸವಾರನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ ನೋಡಿ.

Video: ಕೈಕೊಟ್ಟ ಬೈಕ್ ರಿಪೇರಿ ಮಾಡಿ ಮಧ್ಯರಾತ್ರಿ ಮನೆಗೆ ತಲುಪಿಸಿದ ರ‍್ಯಾಪಿಡೊ ಚಾಲಕ; ಒಳ್ಳೆತನ ಮೆಚ್ಚಿದ ಬೆಂಗಳೂರಿನ ಮಹಿಳೆ
ವೈರಲ್‌ ವಿಡಿಯೋ
Image Credit source: Instagram

Updated on: Nov 24, 2025 | 6:02 PM

ಬೆಂಗಳೂರು, ನವೆಂಬರ್‌ 24: ವಿಕೃತ ಮನಸ್ಸಿನ ವ್ಯಕ್ತಿಗಳು ಹೆಣ್ಣು ಮಕ್ಕಳ ಜತೆಗೆ ಅಹಿತಕರವಾಗಿ ವರ್ತಿಸಿರುವ ಘಟನೆಗಳ ಬಗ್ಗೆ ನೀವು ಕೇಳಿರುತ್ತೀರಿ. ಹೀಗಾಗಿ, ಹೆಣ್ಣು ಮಕ್ಕಳು ಎಷ್ಟು ಸುರಕ್ಷಿತವಾಗಿದ್ದರೂ ಸಾಲುವುದಿಲ್ಲ. ಆದರೆ ಬೆಂಗಳೂರಿನ (Bengaluru) ಮಹಿಳೆಯ ತಡರಾತ್ರಿ ಪ್ರಯಾಣವು ಸ್ಮರಣೀಯವಾಗಿಸಿದೆ. ಇದಕ್ಕೆ ಕಾರಣವಾಗಿದ್ದು, ರ‍್ಯಾಪಿಡೊ ಸವಾರನ (Rapido Driver). ಕೈ ಕೊಟ್ಟ ಬೈಕ್ ರಿಪೇರಿ ಮಾಡಿ ಮಧ್ಯರಾತ್ರಿ ಮನೆ ತಲುಪಿಸಿದ ಚಾಲಕನ ಬಗ್ಗೆ  ಈ ಮಹಿಳೆ ಮೆಚ್ಚುಗೆ ನುಡಿಗಳನ್ನಾಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈತನ ಒಳ್ಳೆತನವನ್ನು ಹಾಡಿ ಹೊಗಳಿದ್ದಾರೆ.

ಆಶಾ ಮಾನೆ (ಎಂಬ ಮಹಿಳೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ರ‍್ಯಾಪಿಡೊ ಚಾಲಕನೊಂದಿಗೆ ತನ್ನ ರೈಡ್‌ನ್ನು ತೋರಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮಧ್ಯರಾತ್ರಿ ರಸ್ತೆಯಲ್ಲಿ ತನ್ನ ಬೈಕ್ ಸರಿಪಡಿಸುತ್ತಿರುವುದನ್ನು ಸೆರೆಹಿಡಿದಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋಯ ಶೀರ್ಷಿಕೆಯಲ್ಲಿ, ಇದು ನಾನು ಎಂದಿಗೂ ಮರೆಯದ ಕಥೆಯಾಗುವವರೆಗೂ ಮತ್ತೊಂದು ರ‍್ಯಾಪಿಡೊ ಸವಾರಿ ಎಂದು ನಾನು ಭಾವಿಸಿದ್ದೆ. ರಾತ್ರಿ 11:45 ಆಗಿತ್ತು. ನನ್ನ ಫೋನ್ ಬ್ಯಾಟರಿ 6% ಕ್ಕೆ ಇಳಿದಿತ್ತು. ನಾನು 38 ಕಿಮೀ ಸವಾರಿಗೆ ರ‍್ಯಾಪಿಡೊ ಬುಕ್ ಮಾಡಿ, ನಾವು ಸ್ವಲ್ಪ ವೇಗವಾಗಿ ಹೋಗಬಹುದೇ? ನಾನು ಬೇಗ ತಲುಪಬೇಕು..’ ಬೈಕ್ ಕೆಟ್ಟುಹೋದಾಗ ಈ ರ‍್ಯಾಪಿಡೊ ಚಾಲಕ ಏನು ಮಾಡಿದನೆಂದು ಹೇಳಿದರೆ ನೀವು ನಂಬುವುದಿಲ್ಲ. ಈ ಕೆಲವು ಕಿಲೋಮೀಟರ್ ದೂರದಲ್ಲಿ…. ಬೈಕ್ ಗುಂಡಿಗೆ ಡಿಕ್ಕಿ ಹೊಡೆದಾಗ, ಚೈನ್ ಮುರಿದುಹೋಯಿತು. ಆದಾಗಲೇ ಕತ್ತಲೆಯಾಗಿತ್ತು, ಖಾಲಿ ರಸ್ತೆ ಹಾಗೂ ಸುತ್ತಲೂ ಅಂಗಡಿ ಇರಲಿಲ್ಲ, ನಾನು ಮತ್ತು ಅಣ್ಣಾ ರಸ್ತೆಯಲ್ಲಿ ಅಸಹಾಯಕರಾಗಿ ಬಿಟ್ಟಿದ್ದೆವು. ಈ ರೈಡ್ ಕೊನೆಗೊಳಿಸಬೇಕು ಇಲ್ಲವಾದರೆ ಮರು ಬುಕ್ ಮಾಡಬೇಕು ಎನ್ನುವ ಆಯ್ಕೆ ಇತ್ತು. ಆದರೆ ಅವರು ಚಿಂತಿಸಬೇಡಿ, ನಾವು ಬೈಕ್ ಸರಿಪಡಿಸುತ್ತೇನೆ ಹಾಗೂ ನಾನು ನಿಮ್ಮನ್ನು ಮನೆಗೆ ಬಿಡುತ್ತೇನೆ ಎಂದು ಹೇಳಿದಾಗ ನಾನು ಭಾವುಕನಾದೆ. ಆ ಒಂದೇ ಒಂದು ಭರವಸೆ ನನಗೆ ಏನನ್ನೋ ಹೇಳಿತು. ಒಬ್ಬ ರೈಡರ್ ಆಗಿರುವ ನಾನು ಸಹ ರೈಡರ್ ಅನ್ನು ಈ ರೀತಿ ಅರ್ಧದಾರಿಯಲ್ಲೇ ಬಿಡದಂತೆ  ಪಾಠವನ್ನು ಕಲಿತಿದ್ದೇನೆ ಎಂದು ಬರೆದಿದ್ದಾರೆ.

ಹತ್ತು ನಿಮಿಷಗಳಲ್ಲಿ ಮುರಿದ ಸರಪಣಿಯನ್ನು ಸರಿಪಡಿಸುವಾಗ ಹಿಂದೆ ನಿಂತು ತನ್ನ ಫೋನ್ ಟಾರ್ಚ್ ಹಿಡಿದು ಸವಾರನಿಗೆ ಸಹಾಯ ಮಾಡಿದೆ. ಯಾವುದೇ ದೂರುಗಳಿಲ್ಲ, ಹತಾಶೆಯಿಲ್ಲ… ಮಧ್ಯರಾತ್ರಿಯಲ್ಲಿ ಇಬ್ಬರು ಅಪರಿಚಿತರ ನಡುವೆ ಶಾಂತವಾದ ಟೀಮ್‌ ವರ್ಕ್‌. ರಾತ್ರಿ 1 ಗಂಟೆಗೆ ಸುರಕ್ಷಿತವಾಗಿ ಮನೆ ತಲುಪಿಸಿದ. ಕೆಲವೊಮ್ಮೆ, ಜಗತ್ತಿನಲ್ಲಿ ಏನು ತಪ್ಪಾಗಿದೆ ಎಂಬುದರ ಬಗ್ಗೆ ನಾವು ತುಂಬಾ ಕೇಳುತ್ತೇವೆ,. ಸರಿಯಾದದ್ದನ್ನು ಆಯ್ಕೆ ಮಾಡುವ ಜನರು ಇನ್ನೂ ಇದ್ದಾರೆ ಎಂಬುದನ್ನು ನಾವು ಮರೆತುಬಿಡುತ್ತೇವೆ. ಸಾವಿರ ಕೆಟ್ಟ ಅನುಭವಗಳ ನಡುವೆ ಜನರಲ್ಲಿ ಸುರಕ್ಷತೆ, ಮಾನವೀಯತೆ ಹಾಗೂ ನಿಮ್ಮ ನಂಬಿಕೆಯನ್ನು ಪುನಃಸ್ಥಾಪಿಸುವ ಕೆಲವೇ ಕೆಲವು ಕೆಲಸಗಳು ಇವೆ ಎಂದು ಬರೆದಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನಿಂದ ಕ್ಯಾಲಿಫೋರ್ನಿಯಾದವರೆಗೆ; ಯಶಸ್ಸಿನ ಹಾದಿ ಬಿಚ್ಚಿಟ್ಟ ಗೂಗಲ್ ಇಂಜಿನಿಯರ್

ಈ ವಿಡಿಯೋ ಐವತ್ತ್ಕಾಲು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಒಳ್ಳೆಯ ಮನಸ್ಸಿನ ವ್ಯಕ್ತಿಗೆ ಜೀವನದಲ್ಲಿ ಅರ್ಹವಾದದ್ದನ್ನು ಸಿಗಲಿ ಎಂದರೆ, ಇನ್ನೊಬ್ಬರು ತುಂಬಾ ಹೃದಯಸ್ಪರ್ಶಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಒಳ್ಳೆಯ ವ್ಯಕ್ತಿಗಳು ಇರುತ್ತಾರೆ ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕೇ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ