Viral: ನನ್‌ ಗಂಡ ನನಗಿಂತ ಬೆಕ್ಕನ್ನೇ ಹೆಚ್ಚು ಪ್ರೀತಿಸ್ತಾನೆ; ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಮಹಿಳೆ

| Updated By: ಅಕ್ಷತಾ ವರ್ಕಾಡಿ

Updated on: Dec 15, 2024 | 2:33 PM

ಸಣ್ಣಪುಟ್ಟ ಜಗಳ, ವರದಕ್ಷಿಣೆಯ ಕಿರುಕುಳ ಇತ್ಯಾದಿ ಕಾರಣಗಳಿಗೆ ಡಿವೋರ್ಸ್‌ಗಾಗಿ ಗಂಡ-ಹೆಂಡ್ತಿ ಕೋರ್ಟ್‌ ಮೆಟ್ಟಿಲೇರಿದಂತಹ ಸುದ್ದಿಗಳ ಬಗ್ಗೆ ಕೇಳಿರುತ್ತೀರಿ ಅಲ್ವಾ. ಆದ್ರೆ ಇಲ್ಲೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು, ಸಾಕು ಪ್ರಾಣಿಯ ವಿಚಾರಕ್ಕೆ ಪತ್ನಿ ಪತಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾಳೆ. ಹೌದು ಗಂಡ ನನಗಿಂತ ಮನೆಯಲ್ಲಿ ಸಾಕಿದ್ದ ಬೆಕ್ಕನ್ನೇ ಹೆಚ್ಚು ಇಷ್ಟ ಪಡ್ತಾನೆ, ಅದ್ರ ಬಗ್ಗೆಯೇ ಹೆಚ್ಚು ಕಾಳಜಿ ವಹಿಸ್ತಾನೆ ಎಂದು ಹೆಂಡ್ತಿ ಡಿವೋರ್ಸ್‌ಗಾಗಿ ಹೈಕೋರ್ಟ್‌ ಮೆಟ್ಟಿಲೇರಿದ್ದಾಳೆ. ಈ ಡಿವೋರ್ಸ್‌ ಕಥೆ ಇದೀಗ ಸಖತ್‌ ಸುದ್ದಿಯಾಗ್ತಿದೆ.

Viral: ನನ್‌ ಗಂಡ ನನಗಿಂತ ಬೆಕ್ಕನ್ನೇ ಹೆಚ್ಚು ಪ್ರೀತಿಸ್ತಾನೆ;  ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಮಹಿಳೆ
ಸಾಂದರ್ಭಿಕ ಚಿತ್ರ
Follow us on

ಪತಿ ಪತ್ನಿಯರ ಸಂಬಂಧ ಏಳೇಳು ಜನ್ಮದ ಅನುಬಂಧ ಎಂದು ಹೇಳ್ತಾರೆ. ಆದ್ರೆ ಇತ್ತೀಚಿಗಂತೂ ಸಣ್ಣಪುಟ್ಟ ವಿಷಯಕ್ಕೂ ಜಗಳವಾಗಿ ಗಂಡ-ಹೆಂಡ್ತಿ ಡಿವೋರ್ಸ್‌ಗೆ ಮುಂದಾಗುವಂತಹ ಪ್ರಸಂಗಗಳು ತೀರಾ ಹೆಚ್ಚಾಗುತ್ತಿದೆ. ಸೆಲೆಬ್ರಿಟಿಗಳ ಡಿವೋರ್ಸ್‌ ಸುದ್ದಿಗಳು ಒಂದೆಡೆಯಾದರೆ, ತೀರಾ ಕ್ಷುಲ್ಲಕ ಕಾರಣಗಳಿಗೆ ಕೋರ್ಟ್‌ ಮೆಟ್ಟಿಲೇರಿದವರ ಸುದ್ದಿಗಳು ಇನ್ನೊಂದೆಡೆ ಕೇಳಿ ಬರುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ವಿಚಿತ್ರ ಡಿವೋರ್ಸ್‌ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಗಂಡ ನನಗಿಂತ ಮನೆಯಲ್ಲಿ ಸಾಕಿದ ಬೆಕ್ಕನ್ನೇ ಹೆಚ್ಚು ಇಷ್ಟ ಪಡ್ತಾನೆ, ಅದ್ರ ಬಗ್ಗೆಯೇ ಹೆಚ್ಚು ಕಾಳಜಿ ವಹಿಸ್ತಾನೆ ಎಂದು ಹೆಂಡ್ತಿ ಡಿವೋರ್ಸ್‌ಗಾಗಿ ಹೈಕೋರ್ಟ್‌ ಮೆಟ್ಟಿಲೇರಿದ್ದಾಳೆ. ಈ ಡಿವೋರ್ಸ್‌ ಕಥೆ ಇದೀಗ ಸಖತ್‌ ಸುದ್ದಿಯಾಗ್ತಿದೆ.

ಬೆಂಗಳೂರಿನ ಮಹಿಳೆಯೊಬ್ಬರು ಗಂಡ ನನಗಿಂತ ಮನೆಯಲ್ಲಿರುವ ಸಾಕು ಬೆಕ್ಕನ್ನೇ ಹೆಚ್ಚು ಪ್ರೀತಿಸ್ತಾನೆ, ಯಾವಾಗ ನೋಡಿದ್ರೂ ಆ ಬೆಕ್ಕಿನ ಬಗ್ಗೆಯೇ ಹೆಚ್ಚು ಕಾಳಜಿ ವಹಿಸುತ್ತಾನೆ ಎಂದು ಪತಿ ಹಾಗೂ ಅತ್ತೆ ಮಾವನ ವಿರುದ್ಧ ಐಪಿಸಿ ಸೆಕ್ಷನ್‌ 498 A ಅಡಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿದ್ದು, ಇದೀಗ ಕರ್ನಾಟಕ ಹೈಕೋರ್ಟ್‌ ಆ ಮಹಿಳೆ ಪತಿ ವಿರುದ್ಧ ದಾಖಲಿಸಿದ್ದ ದೌರ್ಜನ್ಯ ಆರೋಪದ ಪ್ರಕರಣದ ತನಿಖೆಗೆ ಮಧ್ಯಂತರ ತಡೆ ನೀಡಿದೆ.

ದೂರುದಾರ ಮಹಿಳೆಯ ಪತಿ, ಅತ್ತೆ, ಮಾವನ ವಿರುದ್ಧ ದಾಖಲಿಸಿದ್ದ ದೂರಿಗೆ ತಡೆ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು , ದೂರುದಾರ ಪತ್ನಿಗೆ ನೋಟಿಸ್‌ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿದ್ದಾರೆ. ಸಾಮಾನ್ಯವಾಗಿ ಮಹಿಳೆಯರ ಮೇಲಾಗುವಂತಹ ದೌರ್ಜನ್ಯಗಳ ವಿರುದ್ದ ಐಪಿಸಿ ಸೆಕ್ಷನ್‌ 498 A ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗುತ್ತದೆ. ಆದ್ರೆ ಈ ಮಹಿಳೆಯ ಪ್ರಕರಣದಲ್ಲಿ ಪತಿ ವರದಕ್ಷಿಣೆ ಕಿರುಕುಳ ನೀಡಿಲ್ಲ ಮತ್ತು ಆಕೆಯ ಮೇಲೆ ಹಲ್ಲೆ ನಡೆಸಿಲ್ಲ. ಬದಲಿಗೆ ಇದೊಂದು ಸಾಕು ಬೆಕ್ಕಿಗೆ ಸಂಧಿಸಿದ ಜಗಳವಾಗಿದ್ದು, ಬೆಕ್ಕು ದೂರುದಾರ ಪತ್ನಿಗೆ ಹಲವು ಬಾರಿ ಪರಚಿರುವ ಆರೋಪವಿದೆ. ಇದೇ ಕಾರಣಕ್ಕೆ ಪತಿ ಪತ್ನಿಯರ ನಡುವೆ ಜಗಳಗಳು ನಡೆದಿವೆ ವಿನಃ ಗಂಡ, ಅತ್ತೆ ಹಾಗೂ ಮಾವ ವರದಕ್ಷಿಣೆ ಕಿರುಕುಳ ಅಥವಾ ಆಕೆಯ ಮೇಲೆ ಹಲ್ಲೆಯನ್ನು ನಡೆಸಿಲ್ಲ.

ಇದನ್ನೂ ಓದಿ: 119 ಕೋಟಿ ಖರ್ಚು ಮಾಡಿ ಹೊಸ ‘ನಗರ’ ನಿರ್ಮಿಸಿದ ಯೂಟ್ಯೂಬರ್

ಪ್ರಕರಣ ಸಂಬಂಧ ದಾಖಲಾಗಿರುವ ದೂರನ್ನು ಪರಿಶೀಲಿಸಿದರೆ ದೌರ್ಜನ್ಯ ಅಥವಾ ವರದಕ್ಷಿಣೆ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಗಂಡ ಮತ್ತು ಅತ್ತೆ, ಮಾವನ ವಿರುದ್ಧ ಯಾವುದೇ ಆರೋಪಗಳಿಲ್ಲ. ಇದೊಂದು ಕ್ಷುಲ್ಲಕ ಪ್ರಕರಣವಾಗಿದ್ದು, ಇಂತಹ ಪ್ರಕರಣಗಳು ಕ್ರಿಮಿನಲ್‌ ನ್ಯಾಯ ವ್ಯವಸ್ಥೆಗೆ ಅಡ್ಡಿಯುಂಟು ಮಾಡುತ್ತಿವೆ, ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ ಪ್ರಕರಣದ ತನಿಖೆಗೆ ಮಧ್ಯಂತರ ತಡೆ ನೀಡಿ ಆದೇಶಿಸಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ