287 ಕೋಟಿ ರೂ. ಲಾಟರಿ ಗೆದ್ದ ವ್ಯಕ್ತಿ; ಕೆಲವೇ ದಿನದಲ್ಲಿ ದುರಂತ ಸಾವು, ಆಗಿದ್ದೇನು?
ವ್ಯಕ್ತಿಯೊಬ್ಬ 287 ಕೋಟಿ ರೂ. ಮೌಲ್ಯದ ಲಾಟರಿಯನ್ನು ಗೆದ್ದಿದ್ದು, ಗೆದ್ದ ಕೆಲವೇ ದಿನಗಳಲ್ಲಿ ಹಠಾತ್ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾನೆ. ಇಷ್ಟು ದೊಡ್ಡ ಮೊತ್ತ ಗೆದ್ದ ಖುಷಿಯಲ್ಲಿ ತನ್ನೆಲ್ಲ ಕನಸುಗಳನ್ನು ಈ ಮೂಲಕ ಈಡೇರಿಸಿಕೊಳ್ಳಬಹುದು ಎಂದುಕೊಂಡಿದ್ದ ಆಂಟೋನಿಯ ಸಾವು ಕುಟುಂಬಸ್ಥರಿಗೆ ಆಘಾತವನ್ನುಂಟು ಮಾಡಿದೆ.
ಕೈ ತುಂಬಾ ಹಣ ಸಂಪಾದಿಸಬೇಕು ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಕನಸು, ಅದಕ್ಕಾಗಿ ಹಗಲಿರುಳು ಕಷ್ಟಪಟ್ಟು ದುಡಿಯುತ್ತಾರೆ. ಕೆಲವೊಮ್ಮೆ ಜನರ ಅದೃಷ್ಟ ಹೇಗೆ ಬದಲಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಯಾವುದೇ ಕಠಿಣ ಪರಿಶ್ರಮವಿಲ್ಲದೆಯೇ ಊಹಿಸಲೂ ಸಾಧ್ಯವಾಗದ ಹಣವನ್ನು ಪಡೆಯುತ್ತಾರೆ. ಇದೀಗ ಅಂತದ್ದೇ ಘಟನೆ ಬ್ರೆಜಿಲ್ನಲ್ಲಿ ನಡೆದಿದೆ. ವ್ಯಕ್ತಿಯೊಬ್ಬ 287 ಕೋಟಿ ಮೌಲ್ಯದ ಲಾಟರಿಯನ್ನು ಗೆದ್ದಿದ್ದು, ಆದರೆ ಗೆದ್ದ ಕೆಲವೇ ದಿನಗಳಲ್ಲಿ ಹಠಾತ್ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾನೆ.
ಡೈಲಿ ಸ್ಟಾರ್ ವೆಬ್‌ಸೈಟ್ನಲ್ಲಿ ಪ್ರಕಟವಾದ ವರದಿ ಪ್ರಕಾರ, ಬ್ರೆಜಿಲ್ ನಿವಾಸಿ ಆಂಟೋನಿಯೊ ಲೋಪೆಸ್ ಸಿಂಕ್ವೇರಾ ವೃತ್ತಿಯಲ್ಲಿ ಕೃಷಿಕ. ನಾಲ್ಕು ಮಕ್ಕಳ ತಂದೆಯಾಗಿರುವ ಆಂಟೋನಿಯೊ ದೇಶದ ಅತಿದೊಡ್ಡ ಲಾಟರಿಯಾದ ಮೆಗಾ ಸೇನಾದಲ್ಲಿ £26.5 ಮಿಲಿಯನ್ ಜಾಕ್‌ಪಾಟ್ ಗೆದ್ದಿದ್ದರು. ಭಾರತೀಯ ಕರೆನ್ಸಿಯ ಪ್ರಕಾರ 283.6 ಕೋಟಿ ರೂ. ಇಷ್ಟು ಮೊತ್ತ ಗೆದ್ದ ನಂತರ ತನ್ನೆಲ್ಲ ಕನಸುಗಳನ್ನು ಈ ಮೂಲಕ ಈಡೇರಿಸಿಕೊಳ್ಳಬಹುದು ಎಂದುಕೊಂಡಿದ್ದ ಆಂಟೋನಿ ಕೆಲವೇ ದಿನದಲ್ಲಿ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ: Video: ಗಿನ್ನೆಸ್ ವಿಶ್ವ ದಾಖಲೆ ಬರೆದ ವಿಶ್ವದ ಅತಿ ಉದ್ದದ ಕಾರು; ವಿಡಿಯೋ ನೋಡಿ
ಮೊದಮೊದಲು ಈ ಹಣದಲ್ಲಿ ಮನೆ ಖರೀದಿಸಬೇಕು ಎಂದುಕೊಂಡು ಉಳಿದ ಹಣವನ್ನು ಏನು ಮಾಡುವುದು ಎಂದು ಯೋಚಿಸುತ್ತಿದ್ದ ಆಂಟೋನಿಗೆ ಈ ಸಮಯದಲ್ಲಿ ತನ್ನ ಓರೆಕೋರೆಹಲ್ಲು ಗಮನಕ್ಕೆ ಬಂದಿದೆ. ಇದರಿಂದ ಹಲ್ಲಿನ ಶಸ್ತ್ರಚಿಕಿತ್ಸೆ ಮಾಡಲು ಮುಂದಾಗಿದ್ದಾನೆ. ಆದರೆ ಇದಕ್ಕಿದ್ದಂತೆ ಹಲ್ಲಿನ ಶಸ್ತ್ರಚಿಕಿತ್ಸೆ ವೇಳೆ ಮೃತಪಟ್ಟಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಆಂಟೋನಿ ಕುಟುಂಬಕ್ಕೆ ಶಸ್ತ್ರ ಚಿಕಿತ್ಸೆ ನಡೆಯುತ್ತಿದ್ದ ಕ್ಲಿನಿಕ್ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ತನಿಖೆ ನಡೆಯುತ್ತಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:33 pm, Sun, 15 December 24