Bengaluru: ಇದು ಬೇಜವಾಬ್ದಾರಿತನದ ಪರಮಾವಧಿ, ಫೂಟ್ ರೆಸ್ಟ್ ಮೇಲೆ ಮಗುವನ್ನು ನಿಲ್ಲಿಸಿಕೊಂಡು ದಂಪತಿಗಳ ಸ್ಕೂಟರ್ ಸವಾರಿ 

ವಾಹನಗಳಲ್ಲಿ ಓಡಾಡುವಾಗ ಅದರಲ್ಲೂ ವಿಶೇಷವಾಗಿ ದ್ವಿಚಕ್ರವಾಹನದಲ್ಲಿ ಮಕ್ಕಳೊಂದಿಗೆ ಓಡಾಡುವಾಗ ಆ ಪುಟ್ಟ ಮಕ್ಕಳ ಬಗ್ಗೆ ಎಷ್ಟು ಜಾಗೃತೆ ವಹಿಸಿದರೂ ಕಡಿಮೆಯೇ. ಆದರೆ ಇಲ್ಲೊಂದು ಪೋಷಕರು ಮಾತ್ರ ಮಗುವನ್ನು ಫೂಟ್ ರೆಸ್ಟ್ ಮೇಲೆ ನಿಲ್ಲಿಸಿಕೊಂಡು ಸ್ಕೂಟರ್  ಸವಾರಿ ಮಾಡಿದ್ದು, ಪೋಷಕರ ಬೇಜವಬ್ದಾರಿತನಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

Bengaluru: ಇದು ಬೇಜವಾಬ್ದಾರಿತನದ ಪರಮಾವಧಿ, ಫೂಟ್ ರೆಸ್ಟ್ ಮೇಲೆ ಮಗುವನ್ನು ನಿಲ್ಲಿಸಿಕೊಂಡು ದಂಪತಿಗಳ ಸ್ಕೂಟರ್ ಸವಾರಿ 
ವೈರಲ್​​ ವಿಡಿಯೋ
Edited By:

Updated on: Apr 17, 2024 | 3:52 PM

ರಸ್ತೆಯಲ್ಲಿ ವಾಹನ ಚಲಾಯಿಸುವಾಗ ನಾವು ಎಷ್ಟು ಜಾಗೃತೆ ವಹಿಸಿದರೂ ಕಡಿಮೆಯೇ. ಹೌದು ರಸ್ತೆಯಲ್ಲಿ ಕೆಲವೊಮ್ಮೆ ಅಪಘಾತಗಳು ಸಂಭವಿಸುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ಟ್ರಾಫಿಕ್ ರೂಲ್ಸ್ ಗಳನ್ನು ಪಾಲಿಸಿ ನಿಧಾನಕ್ಕೆ ವಾಹನ ಚಲಾಯಿಸಬೇಕು.  ಅದರಲ್ಲೂ ವಿಶೇಷವಾಗಿ ದ್ವಿಚಕ್ರ ವಾಹನಗಳಲ್ಲಿ ಓಡಾಡುವವರು ತುಸು ಹೆಚ್ಚು ಜಾಗೃತೆ ವಹಿಸಬೇಕು. ಇನ್ನೂ ದ್ವಿಚಕ್ರ ವಾಹನದಲ್ಲಿ ಪುಟ್ಟ ಮಕ್ಕಳಿದ್ದರಂತೂ ಅವರನ್ನೂ ಜೋಪಾನವಾಗಿ ಗಾಡಿಯಲ್ಲಿ ಕೂರಿಸಿಕೊಂಡು ವಾಹನ ಚಲಾಯಿಸಬೇಕಾಗುತ್ತದೆ. ಅದರೆ ಇಲ್ಲೊಂದು ಪೋಷಕರು ಮಾತ್ರ ತಮ್ಮ ಮಗುವನ್ನು ಫೂಟ್ ರೆಸ್ಟ್ ಮೇಲೆ ನಿಲ್ಲಿಸಿಕೊಂಡು ಸ್ಕೂಟರ್ ಅಲ್ಲಿ ಓಡಾಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಪೋಷಕರ ಬೇಜವಬ್ದಾರಿತನಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘಟನೆ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.  ಈ ಕುರಿತ ವಿಡಿಯೋವನ್ನು @Lollubee ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಬೆಂಗಳೂರು ಪೋಲಿಸ್ ಅಧೀಕೃತ ಎಕ್ಸ್ ಖಾತೆಯನ್ನು ಟ್ಯಾಗ್ ಮಾಡಿ ದಂಪತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ವಿಡಿಯೋದಲ್ಲಿ ತಮ್ಮ ಮಗನನ್ನು  ದ್ವಿಚಕ್ರ ವಾಹನದ ಫೂಟ್ ರೆಸ್ಟ್ ಮೇಲೆ ನಿಲ್ಲಿಸಿಕೊಂಡು ದಂಪತಿಗಳಿಬ್ಬರು ರಾತ್ರಿ ಹೊತ್ತಿನಲ್ಲಿ ವೈಟ್ ಫೀಲ್ಡ್ ರಸ್ತೆಯಲ್ಲಿ ಸ್ಕೂಟರ್ ಸವಾರಿ ಹೊರಟಿರುವ ಆಘಾತಕಾರಿ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: BMTC ಬಸ್ ಕಂಡಕ್ಟರ್ 5 ರೂ. ಚಿಲ್ಲರೆ ವಾಪಸ್ ಕೊಟ್ಟಿಲ್ಲ; ಸೋಷಿಯಲ್ ಮೀಡಿಯಾದಲ್ಲಿ ಬೇಸರ ಹೊರಹಾಕಿದ ಪ್ರಯಾಣಿಕ

ಏಪ್ರಿಲ್ 15 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಒಂದುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಯಾವುದೇ ಸುರಕ್ಷತಾ ಕ್ರಮವನ್ನು ಕೈಗೊಳ್ಳದೆ ಮಗುವನ್ನು ಈ ರೀತಿ ಫೂಟ್ ರೆಸ್ಟ್ ಮೇಲೆ ನಿಲ್ಲಿಸಿಕೊಂಡು ಓಡಾಡುವುದು ಎಷ್ಟು ಸರಿ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 3:51 pm, Wed, 17 April 24