AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರಿನೊಳಗೆ ಪರಪುರುಷನ ಜತೆ ಇದ್ದಾಗ ಗಂಡನ ಕೈಗೆ ಸಿಕ್ಕಿಬಿದ್ದ ಪತ್ನಿ, ಮುಂದೇನಾಯ್ತು? ವಿಡಿಯೋ ನೋಡಿ

ಮಹಿಳೆಯೊಬ್ಬರು ಕಾರಿನೊಳಗೆ ಪರಪುರುಷನ ಜೊತೆ ಸುತ್ತಾಡಿಕೊಂಡು ಎಂಜಾಯ್​ ಮಾಡುತ್ತಿರುವಾಗ ಗಂಡನ ಕೈಗೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾಳೆ. ಬೇರೆ ವ್ಯಕ್ತಿಯೊಂದಿಗೆ ಕಾರಿನಲ್ಲಿ ಎಂಜಾಯ್​ ಮಾಡುತ್ತಿರುವುದನ್ನು ಕಣ್ಣಾರೆ ಕಂಡ ಪತಿ ರೊಚ್ಚಿಗೆದ್ದಿದ್ದಾನೆ. ಬಳಿಕ ಕಾರು ಇರುವ ಸ್ಥಳಕ್ಕೆ ಬಂದು ಕಾರಿನ ಗ್ಲಾಸ್​ ಒಡೆದು ಪತ್ನಿಯನ್ನು ಹೊರಗೆ ಎಳೆದುತಂದಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

ಕಾರಿನೊಳಗೆ ಪರಪುರುಷನ ಜತೆ ಇದ್ದಾಗ ಗಂಡನ ಕೈಗೆ ಸಿಕ್ಕಿಬಿದ್ದ ಪತ್ನಿ, ಮುಂದೇನಾಯ್ತು? ವಿಡಿಯೋ ನೋಡಿ
TV9 Web
| Edited By: |

Updated on: Apr 17, 2024 | 8:22 PM

Share

ಚಂಡೀಗಢ, (ಏಪ್ರಿಲ್ 17): ಪರಪುರುಷನ ಜೊತೆ ತನ್ನ ಪತ್ನಿ(Wife) ಕಾರಿನೊಳಗೆ ಕುಳಿತುಕೊಂಡು ಚಕ್ಕಂದವಾಡುತ್ತಿದ್ದನ್ನು ಕಂಡು ಪತಿ (Husband), ಆಕೆಯನ್ನು ಸಾರ್ವಜನಿಕವಾಗಯೇ ಮನಬಂದಂತೆ ಥಳಿಸಿದ ಘಟನೆ ಹರಿಯಾಣದಲ್ಲಿ (Haryana) ನಡೆದಿದೆ. ಹರಿಯಾಣದ ಪಂಚುಕಾದ ಪಾರ್ಕ್‌ ಬಳಿ ಮಹಿಳೆ ಕಾರಿನಲ್ಲಿ ಬೇರೆ ವ್ಯಕ್ತಿಯೊಂದಿಗೆ ಲವ್ವಿಡವ್ವಿಯಲ್ಲಿ ತೊಡಗಿಕೊಂಡಾಗ ಪತಿ ಕೈಗೆ ಸಿಕ್ಕಿಬಿದ್ದಿದ್ದಾಳೆ. ಇದನ್ನು ನೋಡಿದ ಪತಿ, ಕಾರಿನ ಗ್ಲಾಸ್ ಒಡೆದು ಆಕೆಯನ್ನು ಕಾರಿನಿಂದ ಎಳೆದು ಸಾರ್ವಜನಿಕವಾಗಿಯೇ ಬ್ಯಾಟಿನಿಂದ ಹಿಗ್ಗಾಮುಗ್ಗಾ ಹೊಡೆದಿದ್ದಾನೆ. ಇದೀಗ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಇದರ ಬೆನ್ನಲ್ಲೇ ಸೆಕ್ಟರ್ 25 ರ ಪೊಲೀಸ್ ಠಾಣೆಯ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡಿದ್ದು, ಸಾರ್ವಜನಿಕವಾಗಿ ಪತ್ನಿ ಮೇಲೆ ಹಲ್ಲೆ ನಡೆಸಿದ್ದ ವ್ಯಕ್ತಿಯನ್ನು ಬಂಧಿಸಿ ತನಿಖೆಗೊಳಪಡಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ವೈರಲ್ ಆಗಿರುವ ವಿಡಿಯೋನಲ್ಲೇನಿದೆ?

ವ್ಯಕ್ತಿಯ ಪತ್ನಿಯು ಕಾರಿನಲ್ಲಿ ಪರಪುರುಷನ ಜೊತೆ ಕುಳಿತುಕೊಂಡಿರುವುದು ಗಮನಕ್ಕೆ ಬಂದಿದೆ. ಕೂಡಲೇ ವ್ಯಕ್ತಿ ಕಾರಿನ ಬಳಿ ತೆರಳಿ ಮೊದಲು ಕಾರಿನ ಗ್ಲಾಸ್‌ ಒಡೆದು ಹಾಕಿದ್ದಾರೆ. ನಂತರ ಪತ್ನಿಯನ್ನು ಕಾರಿನಿಂದ ಎಳೆದು ಬ್ಯಾಟ್‌ನಿಂದ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಇದರಿಂದ ಮಹಿಳೆ ಜೋರಾಗಿ ಕೂಗಾಡಿದ್ದಾಳೆ. ಹೀಗಾಗಿ ಪಾರ್ಕ್‌ ನಲ್ಲಿದ್ದ ಜನರು ಓಡಿಬಂದು ಮಹಿಳೆಯ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಕಾರಿನೊಳಗೆ ಕುಳಿತ್ತಿದ್ದ ವ್ಯಕ್ತಿ ಮಾತ್ರ ಮಹಿಳೆಯ ರಕ್ಷಣೆಗೆ ಬರಲಿಲ್ಲ. ಬದಲಾಗಿ ಗಲಾಟೆ ನೋಡಿಕೊಂಡೇ ಕಾರಿನಲ್ಲಿ ಕುಳಿತಿದ್ದಾನೆ.

ಇದನ್ನೂ ಓದಿ: Bengaluru: ಇದು ಬೇಜವಾಬ್ದಾರಿತನದ ಪರಮಾವಧಿ, ಫೂಟ್ ರೆಸ್ಟ್ ಮೇಲೆ ಮಗುವನ್ನು ನಿಲ್ಲಿಸಿಕೊಂಡು ದಂಪತಿಗಳ ಸ್ಕೂಟರ್ ಸವಾರಿ 

ಈ ಎಲ್ಲಾ ದೃಶ್ಯಗಳನ್ನು ಪಾರ್ಕ್‌ ನಲ್ಲಿದ್ದ ಇತರ ಕೆಲ ವ್ಯಕ್ತಿಗಳು ತಮ್ಮ ಮೊಬೈಲ್‌ ನಲ್ಲಿ ಸೆರೆಹಿಡಿದಿದ್ದಾರೆ. ಬಳಿಕ ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯ ಈ ವೀಡಿಯೋ ಫುಲ್ ವೈರಲ್‌ ಆಗಿದೆ. ವೀಡಿಯೋದಲ್ಲಿ ವ್ಯಕ್ತಿಯು ನನಗೆ ಮೋಸ ಮಾಡುತ್ತಿದ್ದಿ ಎಂದು ಹೇಳುತ್ತಿರುವುದಾಗಿ ವರದಿಯಾಗಿದೆ.

ಸದ್ಯ ವಿಡಿಯೋ ಆಧಾರದ ಮೇಲೆ ಆಕೆಯ ಪತಿ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ ಎಂದು  ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಲಕ್ಕುಂಡಿ ನಿಧಿ ರಹಸ್ಯ ಕೊನೆಗೂ ಬಯಲು, ಚಿನ್ನ ಎಷ್ಟು ಕೋಟಿ ಮೌಲ್ಯದ್ದು?
ಲಕ್ಕುಂಡಿ ನಿಧಿ ರಹಸ್ಯ ಕೊನೆಗೂ ಬಯಲು, ಚಿನ್ನ ಎಷ್ಟು ಕೋಟಿ ಮೌಲ್ಯದ್ದು?
ಮಧ್ಯಪ್ರಾಚ್ಯ ಯುದ್ಧದಿಂದ ಅಕ್ಕಿ ಉದ್ಯಮಕ್ಕೂ ಹೊಡೆತ!
ಮಧ್ಯಪ್ರಾಚ್ಯ ಯುದ್ಧದಿಂದ ಅಕ್ಕಿ ಉದ್ಯಮಕ್ಕೂ ಹೊಡೆತ!
ವಾಣಿಜ್ಯ ಸಿಲಿಂಡರ್ ಕೊರತೆ: ಕಟ್ಟಿಗೆ ಒಲೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​
ವಾಣಿಜ್ಯ ಸಿಲಿಂಡರ್ ಕೊರತೆ: ಕಟ್ಟಿಗೆ ಒಲೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​
ಸಿಲಿಂಡರ್ ಶಾರ್ಟೇಜ್; ರಾಜ್​​ಕುಮಾರ್ ನೆಚ್ಚಿನ ಹೋಟೆಲ್​​ಗೆ ಬೀಗ
ಸಿಲಿಂಡರ್ ಶಾರ್ಟೇಜ್; ರಾಜ್​​ಕುಮಾರ್ ನೆಚ್ಚಿನ ಹೋಟೆಲ್​​ಗೆ ಬೀಗ
ಮುಂಬೈನಲ್ಲಿರುವ ಮಹಾರಾಷ್ಟ್ರ ವಿಧಾನ ಭವನಕ್ಕೆ ಬಾಂಬ್ ಬೆದರಿಕೆ
ಮುಂಬೈನಲ್ಲಿರುವ ಮಹಾರಾಷ್ಟ್ರ ವಿಧಾನ ಭವನಕ್ಕೆ ಬಾಂಬ್ ಬೆದರಿಕೆ
ರಶ್ಮಿಕಾ ಜೊತೆ ಡ್ಯಾನ್ಸ್ ಮಾಡಿದ ವಿಜಯ್ ಸಹೋದರ
ರಶ್ಮಿಕಾ ಜೊತೆ ಡ್ಯಾನ್ಸ್ ಮಾಡಿದ ವಿಜಯ್ ಸಹೋದರ
ಬರೋಬ್ಬರಿ 209 ಎಸೆತಗಳು ಬಾಕಿ... ಹೀನಾಯ ಸೋಲುಂಡ ಪಾಕಿಸ್ತಾನ್
ಬರೋಬ್ಬರಿ 209 ಎಸೆತಗಳು ಬಾಕಿ... ಹೀನಾಯ ಸೋಲುಂಡ ಪಾಕಿಸ್ತಾನ್
ಎಲ್‌ಪಿಜಿ ಸಿಲಿಂಡರ್​ ಬಿಕ್ಕಟ್ಟು: ಪೆಟ್ರೋಲಿಯಂ ಸಚಿವಾಲಯದಿಂದ ಮಹತ್ವದ ಹೇಳಿಕ
ಎಲ್‌ಪಿಜಿ ಸಿಲಿಂಡರ್​ ಬಿಕ್ಕಟ್ಟು: ಪೆಟ್ರೋಲಿಯಂ ಸಚಿವಾಲಯದಿಂದ ಮಹತ್ವದ ಹೇಳಿಕ
ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹತ್ಯೆಗೆ ಯತ್ನ
ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹತ್ಯೆಗೆ ಯತ್ನ
ಮನೆಯಲ್ಲಿ ಸೂರ್ಯರಶ್ಮಿ ನೇರವಾಗಿ ಬೀಳುವುದರಿಂದ ಎಷ್ಟು ಲಾಭ ಗೊತ್ತಾ?
ಮನೆಯಲ್ಲಿ ಸೂರ್ಯರಶ್ಮಿ ನೇರವಾಗಿ ಬೀಳುವುದರಿಂದ ಎಷ್ಟು ಲಾಭ ಗೊತ್ತಾ?