AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: 3 ಬಿಹೆಚ್‌ಕೆ ಮನೆಗೆ 16,883 ರೂ ವಿದ್ಯುತ್ ಬಿಲ್, ಮನೆಮಾಲೀಕ ಫುಲ್ ಶಾಕ್

ಬೆಂಗಳೂರು ಅಂದ್ರೆ ದುಬಾರಿ. ಇಲ್ಲಿ ಎಷ್ಟು ದುಡಿದ್ರೂ ಮನೆ ಬಾಡಿಗೆ, ದಿನಸಿ ಹಾಗೂ ಉಳಿದ ಖರ್ಚು ವೆಚ್ಚಗಳನ್ನು ತೂಗಿಸಿಕೊಂಡು ಹೋಗೋದ್ರಲ್ಲಿಯೇ ತಿಂಗಳ ಸಂಬಳ ಖಾಲಿಯಾಗಿರುತ್ತದೆ. ಆದರೆ, ಈ ಪೋಸ್ಟ್ ನೋಡಿದ ಮೇಲೆ ನಿಮಗೆ ತಿಂಗಳ ಸಂಬಳ ಬಿಲ್ ಕಟ್ಟೋದ್ದಕ್ಕೆ ಸಾಕಾಗುತ್ತೆ ಎಂದೆನಿಸಬಹುದು. ಬೆಂಗಳೂರಿಗನೊಬ್ಬ ತನಗೆ ಬಂದಿರುವ 16,883 ರೂಪಾಯಿಗಳ ಬಿಲ್ ನೋಡಿ ಶಾಕ್ ಆಗಿದ್ದಾನೆ. ಈ ಬಗ್ಗೆ ಪೋಸ್ಟ್ ಹಂಚಿಕೊಳ್ಳುತ್ತಿದ್ದಂತೆ ನೆಟ್ಟಿಗರು ಬಾಯಿಯ ಮೇಲೆ ಬೆರಳಿಟ್ಟುಕೊಂಡಿದ್ದಾರೆ.

Viral: 3 ಬಿಹೆಚ್‌ಕೆ ಮನೆಗೆ 16,883 ರೂ ವಿದ್ಯುತ್ ಬಿಲ್, ಮನೆಮಾಲೀಕ ಫುಲ್ ಶಾಕ್
ರೆಡ್ಡಿಟ್‌ ಪೋಸ್ಟ್‌Image Credit source: Reddit
ಸಾಯಿನಂದಾ
|

Updated on: Feb 15, 2026 | 5:36 PM

Share

ಬೆಂಗಳೂರು, ಫೆಬ್ರವರಿ 15: ಬೆಂಗಳೂರು (Bengaluru) ಅಂದ್ರೆ ಸಾಕು, ದುಡಿಮೆಗಿಂತ ಖರ್ಚೆ ಹೆಚ್ಚು. ಊರು ಬಿಟ್ಟು ಬಂದು ಕಷ್ಟ ಪಟ್ಟು ದುಡಿದು ಅಲ್ಪ ಸ್ವಲ್ಪ ಉಳಿತಾಯ ಮಾಡೋಣ ಅಂದ್ರೆ ಖರ್ಚು ಮಾತ್ರ ಹೆಚ್ಚಾಗುತ್ತೆ ಹೊರತು ಕಡಿಮೆಯಾಗಲ್ಲ ಅನ್ನೋದು ಎಷ್ಟೋ ಜನರ ಅಭಿಪ್ರಾಯ. ಆದರೆ ಬೆಂಗಳೂರಿನಲ್ಲಿ ವಾಸಿಸುವ ನಿವಾಸಿ ಎಷ್ಟೇ ದುಬಾರಿಯಾಗಿದ್ರು ಇಲ್ಲಿ ಜೀವನ ನಡೆಸಲೇಬೇಕು. ಆದರೆ ಬೆಂಗಳೂರಿಗನೊಬ್ಬ ವಿದ್ಯುತ್ ಬಿಲ್ ನೋಡಿಯೇ ಶಾಕ್ ಆಗಿದ್ದಾನೆ. 3 ಬಿಎಚ್‌ಕೆ ಮನೆಯಲ್ಲಿ ವಾಸಿಸುತ್ತಿರುವ ವ್ಯಕ್ತಿಯೊಬ್ಬನಿಗೆ 16,883 ರೂಪಾಯಿಗಳ ವಿದ್ಯುತ್ ಬಿಲ್ (Electricity Bill) ಮನೆ ಬಾಗಿಲಿಗೆ ಬಂದಿದೆ. ರೆಡ್ಡಿಟ್‌ನಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡು ನೆಟ್ಟಿಗರ ಸಲಹೆ ಕೇಳಿದ್ದಾನೆ.

ಸ್ಕ್ರೀನ್‌ಗ್ರಾಬ್ ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಬೆಂಗಳೂರಿಗನೊಬ್ಬ ವಿದ್ಯುತ್ ಬಿಲ್ ಡೀಟೇಲ್ಸ್ ಹಂಚಿಕೊಂಡಿದ್ದಾನೆ. ಈ ಪೋಸ್ಟ್‌ಗೆ ಬೆಂಗಳೂರಿನಲ್ಲಿ ಇಷ್ಟೊಂದು ವಿದ್ಯುತ್ ಬಿಲ್ ಬರುವುದು ಸಾಮಾನ್ಯವೇ? ಎಂದು ಪ್ರಶ್ನಿಸಿದ್ದಾನೆ. ನಾನು 3 ಬಿಎಚ್‌ಕೆ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದೇನೆ. ಮನೆಯಲ್ಲಿ ಒಟ್ಟು ನಾಲ್ಕು ಜನರಿದ್ದೇವೆ. ನಮ್ಮ ಮನೆಯಲ್ಲಿರುವುದು ಕೇವಲ ಒಂದೇ ಒಂದು ಎಸಿ. ದಿನಕ್ಕೆ ಗರಿಷ್ಠ 5 ರಿಂದ 7 ಗಂಟೆಗಳ ಕಾಲ ಬಳಸುತ್ತೇವೆ. ಒಂದು 650w ಗೇಮಿಂಗ್ ಪಿಸಿ, ಸಣ್ಣ ಅಡುಗೆ ಇಂಡಕ್ಷನ್ ಒಲೆ, ಒಂದು ಏರ್ ಫ್ರೈಯರ್ ಹಾಗೂ ಹಗಲಿನಲ್ಲಿ 4 ಫ್ಯಾನ್‌ಗಳು ತಿರುಗುತ್ತವೆ. ಇದು ನಮ್ಮ ದಿನನಿತ್ಯದ ವಿದ್ಯುತ್ ಬಳಕೆ. ಆದರೆ ತಿಂಗಳಿಗೆ ಹೆಚ್ಚೆಂದರೆ ಐದರಿಂದ ಒಂಬತ್ತು ಸಾವಿರ ರೂಪಾಯಿ ಬಿಲ್ ಬರುತ್ತಿತ್ತು. ದಿನನಿತ್ಯ ಬಳಸುವ ವಿದ್ಯುತ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ,  ಆದರೆ ನೋಡ ನೋಡುತ್ತಿದ್ದಂತೆ 16 ಸಾವಿರಕ್ಕೂ ಅಧಿಕ ಬಿಲ್ ಬಂದಿರುವುದು ಶಾಕ್ ಆಗಿದೆ. ಬಿಲ್ ಇಷ್ಟೊಂದು ಬರಲು ಸಾಧ್ಯವೇ ಇಲ್ಲ. ಈ ಬಗ್ಗೆ ಎಲ್ಲಿ ದೂರು ನೀಡಬೇಕು? ಎಂದು ಕೇಳಿದ್ದಾನೆ.

ವೈರಲ್ ಪೋಸ್ಟ್ ಇಲ್ಲಿದೆ

Reddit Post

ಇದನ್ನೂ ಓದಿ: ಕೋರಮಂಗಲದಲ್ಲಿ 70 ಸಾವಿರ ರೂ, ಬಾಡಿಗೆ ಕೇಳಲು ನಾಚಿಕೆ ಆಗುವುದಿಲ್ವಾ?: ಬರಿ ತೆರೆದ ಒಳಚರಂಡಿ, ರಸ್ತೆಯ ಗುಂಡಿ, ಸಿಡಿದೆದ್ದ ಮಹಿಳೆ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರ, ನಾವು ಇರುವುದು ನಾಲ್ಕು ಜನ. ನಮಗೆ ತಿಂಗಳಿಗೆ 2,000ರೂ. ಬಿಲ್ ಬಂದರೆ ಅದುವೇ ಹೆಚ್ಚು . ಆದರೆ ನಿಮ್ಮ ಬಿಲ್ ನೋಡಿ ನಮಗೆ ಶಾಕ್ ಆಯ್ತು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಬೆಸ್ಕಾಂನಲ್ಲಿ ಈ ಬಗ್ಗೆ ವಿಚಾರಿಸಿ ನೋಡುವುದು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ. ಇನ್ನೊಬ್ಬರು, ಇಷ್ಟೊಂದು ಬಿಲ್ ಬಂದ್ರೆ ದೇವರೇ ಗತಿ, ಬಿಲ್ ಕಟ್ಟೋದ ಅಥವಾ ಹೊಟ್ಟೆ ತುಂಬಿಸಿಕೊಳ್ಳೋದಾ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ