Video: ಮಲ್ಲೇಶ್ವರಂ ಪಾರ್ಕ್‌ನಲ್ಲಿ ಕಿಸ್ಸಿಂಗ್, ರೊಮ್ಯಾನ್ಸ್‌ನಲ್ಲಿ ಬ್ಯುಸಿಯಾದ ಜೋಡಿ, ವೈರಲ್ ಆಯ್ತು ದೃಶ್ಯ

ಪ್ರೇಮಿಗಳು ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸಿ ಇತರರನ್ನು ಮುಜುಗರಕ್ಕೀಡು ಮಾಡುತ್ತಾರೆ. ಇಂತಹ ಸುದ್ದಿಗಳು ನೀವು ಆಗಾಗ್ಗೆ ಕೇಳಿರುತ್ತೀರಿ. ಇದೀಗ ಅಂತಹದೇ ಸುದ್ದಿಯೊಂದು ವೈರಲ್‌ ಆಗಿದ್ದು, ಪಾರ್ಕ್‌ವೊಂದರಲ್ಲಿ ಪ್ರೇಮಿಗಳಿಬ್ಬರ ಸರಸ ಸಲ್ಲಾಪವು ಸಾರ್ವಜನಿಕರಿಗೆ ಮುಜುಗರ ಉಂಟು ಮಾಡಿದೆ. ಈ ದೃಶ್ಯ ವೈರಲ್ ಆಗುತ್ತಿದ್ದಂತೆ ಜೋಡಿ ಹಕ್ಕಿಗಳ ಎಲ್ಲೇ ಮೀರಿದ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

Video: ಮಲ್ಲೇಶ್ವರಂ ಪಾರ್ಕ್‌ನಲ್ಲಿ ಕಿಸ್ಸಿಂಗ್, ರೊಮ್ಯಾನ್ಸ್‌ನಲ್ಲಿ ಬ್ಯುಸಿಯಾದ ಜೋಡಿ, ವೈರಲ್ ಆಯ್ತು ದೃಶ್ಯ
ಪಾರ್ಕ್‌ನಲ್ಲಿ ಪ್ರೇಮಿಗಳಿಬ್ಬರ ರೊಮ್ಯಾನ್ಸ್‌
Image Credit source: Instagram

Updated on: Oct 12, 2025 | 2:57 PM

ಬೆಂಗಳೂರು, ಅಕ್ಟೋಬರ್ 12: ಪ್ರೀತಿ ಕುರುಡು ನಿಜ ಅನ್ನೋದೇನೋ ನಿಜ. ಆದರೆ ಪ್ರೀತಿಯಲ್ಲಿ ಬಿದ್ದವರು ಕೂಡ ಹದ್ದು ಮೀರಿ ವರ್ತಿಸುತ್ತಾರೆ. ಹೌದು, ಬಸ್‌, ಟ್ರೈನ್‌, ಮೆಟ್ರೋ, ಪಾರ್ಕ್‌ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕೆಲವೊಂದು ಪ್ರೇಮಿಗಳು (Lovers) ಎಲ್ಲೇ ಮೀರಿ ಅಸಭ್ಯವಾಗಿ ವರ್ತನೆ ಸಾರ್ವಜನಿಕರಿಗೂ ಇರಿಸು ಮುರಿಸು ತರಿಸುತ್ತದೆ. ಇದೀಗ ಇಂತಹದ್ದೇ ವಿಡಿಯೋ ವೈರಲ್ ಆಗಿದ್ದು, ಪ್ರೇಮಿಗಳಿಬ್ಬರು ಮಲ್ಲೇಶ್ವರಂ ಪಾರ್ಕ್‌ನಲ್ಲಿ (Malleshwaram park) ರೊಮ್ಯಾನ್ಸ್ ಮಾಡಿದ್ದಾರೆ. ಈ ಘಟನೆಯೂ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದಿದೆ, ಯಾವ ಪಾರ್ಕ್‌ ಎನ್ನುವುದು ಮಾತ್ರ ತಿಳಿದು ಬಂದಿಲ್ಲ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಗರಂ ಆಗಿದ್ದಾರೆ.

gjkannada ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಮಲ್ಲೇಶ್ವರಂ ಪಾರ್ಕ್ ನಲ್ಲಿ ಜೋಡಿಹಕ್ಕಿಗಳು ರೊಮ್ಯಾನ್ಸ್ ಮಾಡುತ್ತಿರುವುದನ್ನು ಕಾಣಬಹುದು. ಜೋಡಿಯೊಂದು ಬೆಂಚ್ ಮೇಲೆ ಕುಳಿತು ಮೈ ಮರೆತಿರೋದನ್ನು ನೋಡಬಹುದು. ಪಾರ್ಕ್‌ನಲ್ಲಿ ಸಾರ್ವಜನಿಕರು ವಾಕಿಂಗ್ ಮಾಡುತ್ತಿದ್ದರೆ ಇತ್ತ ಮಕ್ಕಳು ಆಟ ಆಡುತ್ತಿರುವುದನ್ನು ಕಾಣಬಹುದು. ಆದರೆ ಈ ಬಗ್ಗೆ ಕ್ಯಾರೇ ಎನ್ನದೇ ಪ್ರೇಮಿಗಳು ತಮ್ಮದೇ ಪ್ರಪಂಚದಲ್ಲಿ ತೇಲಾಡಿದ್ದು ಪರಸ್ಪರ ಮುತ್ತನ್ನಿಕ್ಕುತ್ತಿರುವುದನ್ನು ಕಾಣಬಹುದು. ಸಾರ್ವಜನಿಕರು ಈ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

ಇದನ್ನೂ ಓದಿ
ಪೊಲೀಸ್ ಜೀಪ್ ಮೇಲೇರಿ ಪ್ರೇಮಿಗಳಿಬ್ಬರ ರಂಪಾಟ
ಬಸ್ ಸ್ಟ್ಯಾಂಡ್‌ನಲ್ಲಿ ಪ್ರೇಮಿಗಳ ರೊಮ್ಯಾನ್ಸ್
ಚಲಿಸುತ್ತಿದ್ದ ಬೈಕ್‌ನಲ್ಲಿ ಮೈ ಮರೆತ ಜೋಡಿಹಕ್ಕಿಗಳು
ಮಾಡೆಲ್ ಮುಂದೆಯೇ ರಸ್ತೆಯಲ್ಲಿ ಹಸ್ತಮೈಥುನ ಮಾಡಿಕೊಂಡ ವ್ಯಕ್ತಿ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:Video: ಓಡಿ ಹೋಗಿ ಸಿಕ್ಕಿ ಹಾಕಿಕೊಂಡ ಜೋಡಿ, ಪೊಲೀಸ್ ಜೀಪ್ ಮೇಲೇರಿ ರಂಪಾಟ

ಈ ವಿಡಿಯೋ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಒಬ್ಬ ಬಳಕೆದಾರ ಇಂತಹವರಿಗೆ ಅಲ್ಲಿಂದ ಎಬ್ಬಿಸಿ, ಓಯೋ ರೂಮ್ ಗೆ ಕಳುಹಿಸಿ ಎಂದಿದ್ದಾರೆ. ಇನ್ನೊಬ್ಬರು, ಪ್ರಿಯಕರ ಬಳಿ ದುಡ್ಡಿಲ್ಲ ಕಾಣಿಸುತ್ತೆ, ಅದಕ್ಕೆ ಈ ರೀತಿ ಆಗಿದೆ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ ಓಯೋ ಪಾರ್ಕ್ ಆಗ್ಬಿಟ್ಟಿದೆ ಏನು ಮಾಡೋಕೆ ಆಗಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 2:44 pm, Sun, 12 October 25