
ಬೆಂಗಳೂರು, ಅ.27: ದೀಪಾವಳಿಯಂದು ಎರಡು-ಮೂರು ದಿನ ರಜೆ ಇದ್ದ ಕಾರಣ, ಬೆಂಗಳೂರಿನಲ್ಲಿದ್ದ ಅರ್ಧದಷ್ಟು ಜನರು ತಮ್ಮ ತಮ್ಮ ಊರಿಗೆ ಹೋಗಿದ್ದರು. ಇದರಿಂದ ಬೆಂಗಳೂರು ಖಾಲಿ ಖಾಲಿಯಾಗಿತ್ತು. ಹಾಗಾಗಿ ಬೆಂಗಳೂರಿನಲ್ಲಿ ಯಾವುದೇ ಟ್ರಾಫಿಕ್ (Bengaluru traffic) ಇರಲಿಲ್ಲ. ಇದರ ಜತೆಗೆ ಬೆಂಗಳೂರಿನ ವಾತಾವರಣ ಕೂಡ ಶಾಂತವಾಗಿತ್ತು. ಈ ಬಗ್ಗೆ ಅನೇಕ ಪೋಸ್ಟ್ಗಳು ವೈರಲ್ ಆಗಿದೆ. ಅದರಲ್ಲಿ ಈ ಪೋಸ್ಟ್ವೊಂದು ಭಾರೀ ಚರ್ಚೆಗೆ ಕಾರಣವಾಗಿತ್ತು. ಬೆಂಗಳೂರಿನ ಟೆಕ್ಕಿಯೊಬ್ಬರು ದೀಪಾವಳಿಯಂದು ಬೆಂಗಳೂರು ಟ್ರಾಫಿಕ್ ಫ್ರೀಯಾಗಿತ್ತು. ಕೇವಲ 20 ನಿಮಿಷಗಳಲ್ಲಿ 14 ಕಿ.ಮೀ ತಲುಪಿರುವ ಬಗ್ಗೆ ಹಂಚಿಕೊಂಡಿದ್ದರು. ಇದೀಗ ಹಬ್ಬದಂದು ಬೆಂಗಳೂರು ಖಾಲಿ ಖಾಲಿ ಆಗಿರುವ ಬಗ್ಗೆ ಖಾತ್ಯ ಬಹುಭಾಷ ನಟ ಆಶಿಶ್ ವಿದ್ಯಾರ್ಥಿ ಅವರು ಹಂಚಿಕೊಂಡಿರುವ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅವರು ಈ ಪೋಸ್ಟ್ನಲ್ಲಿ “ಬೆಂಗಳೂರು ಟ್ರಾಫಿಕ್ ಕಳ್ಳತನವಾಗಿದೆ” ಎಂದು ವ್ಯಂಗ್ಯವಾಗಿ ಹೇಳಿಕೊಂಡಿದ್ದಾರೆ.
ಆಶಿಶ್ ವಿದ್ಯಾರ್ಥಿ ಬೆಂಗಳೂರು ಸದಾ ಹೀಗೆ ಇದ್ರೆ ತುಂಬಾ ಚೆನ್ನಾಗಿರುತ್ತದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಹೇಳಿದ್ದಾರೆ. 2000ರ ದಶಕದ ಹಿಂದಿನ ಬೆಂಗಳೂರಿನಲ್ಲಿ ಕಾಣುತ್ತಿದೆ ಎಂದು ಹೇಳಿದ್ದಾರೆ. ಅವರು ಹಂಚಿಕೊಂಡ ವಿಡಿಯೋದಲ್ಲಿ ಹೀಗಿದೆ. “ನಾನು ಬೆಂಗಳೂರಿನಲ್ಲಿದ್ದೇನೆ, ಒಂದು ಅಚ್ಚರಿಯ ವಿಚಾರವನ್ನು ಹಂಚಿಕೊಳ್ಳಬೇಕು. ಬೆಂಗಳೂರನ್ನು ಯಾವತ್ತೂ ಹೀಗೆ ನೋಡಿಲ್ಲ, ಟ್ರಾಫಿಕ್ ಮುಕ್ತವಾಗಿ ಕಾಣುತ್ತಿದೆ. ಯಾರೋ ಇಲ್ಲಿನ ಟ್ರಾಫಿಕ್ ಕದ್ದಿದ್ದರೆ ಎಂದು ಅನ್ನಿಸುತ್ತಿದೆ. ನಾನು ಇಂದು ವಿಮಾನ ನಿಲ್ದಾಣಕ್ಕೆ ಹೋಗಲು ಬೆಳಿಗ್ಗೆ ಬೇಗ ಎದ್ದು ಹೊರಟಿದ್ದೆ, ಇನ್ನು ಟ್ರಾಫಿಕ್ನಲ್ಲಿ ಸಿಲುಕಿಕೊಂಡು ತೊಂದರೆ ಆಗುವುದು ಬೇಡ ಎಂದು ಸ್ವಲ್ಪ ಬೇಗ ಹೊರಟೆ, ಆದರೆ ಗಾಂಧಿನಗರದಿಂದ ವಿಮಾನ ನಿಲ್ದಾಣಕ್ಕೆ 25 ನಿಮಿಷದಲ್ಲಿ ತಲುಪಿದ್ದೇನೆ. ನನಗೆ ಇದು ತುಂಬಾ ಅಚ್ಚರಿಯಾಗಿತ್ತು” ಎಂದು ಹೇಳಿದ್ದಾರೆ.
ಇದನ್ನೂ ಓದಿ: 20 ನಿಮಿಷಗಳಲ್ಲಿ 14 ಕಿ.ಮೀ ತಲುಪಿದೆ, ದೀಪಾವಳಿಯಿಂದ ಬೆಂಗಳೂರು ಖಾಲಿ ಖಾಲಿ ಎಂದ ಟೆಕ್ಕಿ
ನಟ ಆಶಿಶ್ ವಿದ್ಯಾರ್ಥಿ ಅವರು ಹಬ್ಬ ದಿನದಂದು ಸ್ಟ್ಯಾಂಡ್-ಅಪ್ ಪ್ರದರ್ಶನಕ್ಕಾಗಿ ಕೊಚ್ಚಿಗೆ ಹೋಗುವ ಸಂದರ್ಭದಲ್ಲಿ ಬೆಂಗಳೂರು ಹೀಗೆ ಕಂಡಿದೆ ಎಂದು ಹೇಳಿಕೊಂಡಿದ್ದಾರೆ. “ದಯವಿಟ್ಟು, ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಇಲ್ಲದ ಹಳೆಯ ಕಾಲಕ್ಕೆ ಹಿಂತಿರುಗಬೇಡಿ. ಜಗತ್ತು ಮುಂದೆ ಸಾಗುತ್ತಿದೆ” ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಇನ್ನು ಈ ಪೋಸ್ಟ್ಗೆ ಹಲವು ಕಮೆಂಟ್ಗಳು ಬಂದಿದೆ. ಒಬ್ಬ ಬಳಕೆದಾರ ಸೋಮವಾರದವರೆಗೆ ಕಾಯಿರಿ ಸರ್, ಬೆಂಗಳೂರಿನ ನಿಜವಾದ ದರ್ಶನವಾಗುತ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ ಹಬ್ಬದ ವಲಸೆ ಮುಗಿದ ನಂತರ ನಗರವು ಮತ್ತೆ ಅದೇ ಸ್ಥಿತಿಗೆ ಬರುತ್ತದೆ ನೋಡಿ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ