AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಸ್ಟ್ರೀಟ್ ಫುಡ್ ಪ್ರಿಯೆ ಈ ವೃದ್ಧೆ; ಗ್ಯಾಪ್ ಕೊಡದೇ ಗಬಗಬನೆ ಗೋಲ್ಗಪ್ಪಾ ತಿನ್ನುತ್ತಿರುವ ಅಜ್ಜಿ

ಗೋಲ್ಗಪ್ಪಾ ಹೆಸರು ಕೇಳಿದರೇನೇ ಬಾಯಲ್ಲಿ ನೀರೂರುತ್ತದೆ. ಮಕ್ಕಳಿಂದ ದೊಡ್ಡವರೆಗೂ ಬಾಯಿ ಚಪ್ಪರಿಸಿಕೊಂಡು ತಿನ್ನುವ ತಿನಿಸು ಇದು. ಆದರೆ ಈ ವೃದ್ಧೆಯೊಬ್ಬರು ಗೋಲ್ಗಪ್ಪಾ ತಿನ್ನುವ ರೀತಿಗೆ ನೀವು ಬೆರಗಾಗುತ್ತೀರಿ. ಹೌದು, ಗ್ಯಾಪ್ ನೀಡದೇ ಗೋಲ್ಗಪ್ಪಾ ತಿನ್ನೋ ವೃದ್ಧೆಯ ಈ ಕ್ಲಿಪಿಂಗ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಸ್ಟ್ರೀಟ್ ಫುಡ್ ಪ್ರಿಯೆ ಈ ವೃದ್ಧೆ; ಗ್ಯಾಪ್ ಕೊಡದೇ ಗಬಗಬನೆ ಗೋಲ್ಗಪ್ಪಾ ತಿನ್ನುತ್ತಿರುವ ಅಜ್ಜಿ
ವೈರಲ್‌ ವಿಡಿಯೋImage Credit source: Instagram
ಸಾಯಿನಂದಾ
|

Updated on:Oct 27, 2025 | 5:50 PM

Share

ಗೋಲ್ಗಪ್ಪಾ (golgappa) ಭಾರತದ ಸ್ಟ್ರೀಟ್ ಫುಡ್‌ಗಳಲ್ಲಿ ಒಂದು. ಆದರೆ ತನ್ನ ವಿಶಿಷ್ಟ ರುಚಿಯಿಂದಾಗಿ ಎಲ್ಲರ ಮನಸ್ಸು ಗೆದ್ದಿದೆ.  ಕೆಲವರಿಗೆ ಫ್ರೆಂಡ್ಸ್ ಜತೆಗೆ ಹೊರಗಡೆ ಹೋದಾಗ ಗೋಲ್ಗಪ್ಪಾ ತಿನ್ನದೇ ಹೋದ್ರೆ ಮನಸ್ಸಿಗೆ ಸಮಾಧಾನನೇ ಇರಲ್ಲ. ಆದರೆ ಇಲ್ಲೊಬ್ಬ ವೃದ್ಧೆಯೂ (old woman) ಬೀದಿ ಬದಿಯಲ್ಲಿ ಗೋಲ್ಗಪ್ಪಾವನ್ನು ಬಾಯಿ ಚಪ್ಪರಿಸಿಕೊಂಡು ಸವಿಯುತ್ತಿರುತ್ತಾರೆ. ಆದರೆ ಈ ವಿಡಿಯೋ ವೈರಲ್ ಆಗಿರಲು ಕಾರಣ ಈ ವೃದ್ಧೆಯ ವಯಸ್ಸು ಅಲ್ಲವೇ ಅಲ್ಲ, ಬದಲಾಗಿ ತಿನ್ನುವ ವೇಗ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ವೃದ್ಧೆ ಗೋಲ್ಗಪ್ಪಾ ತಿನ್ನೋ ಪರಿಗೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಈ ಅಜ್ಜಿ ಗೋಲ್ಗಪ್ಪಾ ತಿನ್ನೋ ಸ್ಫೀಡ್‌ ನೋಡಿ

idiotic media ಎಂಬ ಹೆಸರಿನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ವೀಡಿಯೊದಲ್ಲಿ, ಒಬ್ಬ ವೃದ್ಧ ಮಹಿಳೆಯೊಬ್ಬರು ರಸ್ತೆಬದಿಯಲ್ಲಿ ನಿಂತು ಪಾನಿಪುರಿ ತಿನ್ನುವುದನ್ನು ನೀವು ನೋಡಬಹುದು. ಆ ಮಹಿಳೆ ಪಾನಿಪುರಿ ತಿನ್ನುವುದನ್ನು ಎಷ್ಟು ಬೇಗನೆ ತಿನ್ನುತ್ತಿದ್ದಾಳೆಂದರೆ, ಆ ವಯಸ್ಸಿನಲ್ಲಿ ಆಕೆಯ ತಿನ್ನುವ ವೇಗವನ್ನು ನೋಡಿ ಎಲ್ಲರೂ ಆಶ್ಚರ್ಯಚಕಿತರಾದರು. ಈ ವೀಡಿಯೊ ಸ್ಪರ್ಧೆಯಿಂದ ಬಂದಿರುವಂತೆ ತೋರುತ್ತಿದೆ, ಅಲ್ಲಿ ಸಾಧ್ಯವಾದಷ್ಟು ಬೇಗ ಪಾನಿಪುರಿ ತಿನ್ನುವುದು ಸವಾಲಾಗಿದೆ.

ಇದನ್ನೂ ಓದಿ
Image
ಫೋರ್ಕ್, ಚಾಕುವಿನಿಂದ ಸಮೋಸಾ ತಿನ್ನುವುದು ಹೇಗೆಂದು ಕಲಿಸಿದ ತರಬೇತುದಾರ
Image
ವಾಯುಪಡೆ ದಿನದ ಸ್ಪೆಷಲ್ ಊಟದ ಮೆನು ವೈರಲ್
Image
ಒಂದೇ ತಟ್ಟೆಯಲ್ಲಿ ಪುಂಗನೂರು ಕರುವಿನೊಂದಿಗೆ ಊಟ ಮಾಡಿದ ಮಾಲೀಕ
Image
ಹುಟ್ಟುಹಬ್ಬದ ದಿನ ಚಿಕನ್ ಫ್ರೈಡ್ ರೈಸ್ ತಿಂದು ಬಾಲಕಿ ಸಾವು

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ಫೋರ್ಕ್ ಸ್ಪೂನ್ , ಚಾಕುವಿನಿಂದ ಸಮೋಸಾ ತಿನ್ನುವುದು ಹೇಗೆಂದು ಕಲಿಸಿದ ತರಬೇತುದಾರ

ಈ ವಿಡಿಯೋವನ್ನು ಅಧಿಕ ಜನರು ವೀಕ್ಷಿಸಿದ್ದು, ಒಬ್ಬ ಬಳಕೆದಾರ ದಾದಿ ರಾಕ್, ಪಬ್ಲಿಕ್ ಶಾಕ್ ಎಂದಿದ್ದಾರೆ. ಇನ್ನೊಬ್ಬರು, ಈ ಅಜ್ಜಿಗೆ ಗೋಲ್ಗಪ್ಪಾ ಫೇವರಿಟ್ ಅಂತೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಹಳೆಯ ಆಟಗಾರರು ಮತ್ತೆ ಮೈದಾನಕ್ಕೆ ಬಂದಿದ್ದಾರೆ ಎಂದು ತಮಾಷೆ ಮಾಡಿದ್ದಾರೆ. ಇನ್ನು ಕೆಲವರು ಅಜ್ಜಿ ಆ ಕಾಲದಲ್ಲಿ ಹೇಗಿದ್ದರು ಎಂದು ಊಹಿಸಿ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:32 pm, Mon, 27 October 25