
ಕಳೆದ ಕೆಲ ದಿನಗಳಿಂದ ವರುಣನ ಅಬ್ಬರದಿಂದ ಬೆಂಗಳೂರು (Bengaluru) ತತ್ತರಿಸಿ ಹೋಗಿದೆ. ತಗ್ಗು ಪ್ರದೇಶಗಳಲ್ಲಿ ನೀರೂ ತುಂಬಿಕೊಂಡಿದ್ದು, ಜನ ಜೀವನವೇ ಅಸ್ತವ್ಯಸ್ತವಾಗಿದೆ. ಇನ್ನು ಈ ಬೆಂಗಳೂರಿನ ರಸ್ತೆಗಳ ತುಂಬೆಲ್ಲಾ ನೀರೇ ನೀರು, ಹೀಗಾಗಿ ವಾಹನ ಸವಾರರಂತೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಊಬರ್ ಕಂಪನಿಯೂ ಬೆಂಗಳೂರಿಗೆ ಟೈಟಾನಿಕ್ ಬೋಟ್ (titanic boat) ನ ವ್ಯವಸ್ಥೆಯಿದೆ ಎನ್ನುವ ಬಗ್ಗೆ ಪೋಸ್ಟ್ ವೊಂದನ್ನು ಮಾಡಿಕೊಂಡಿದೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
uber india ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಟೈಟಾನಿಕ್ ಬೋಟ್ ನ ವ್ಯವಸ್ಥೆಯಿರುವ ಫೋಟೋವೊಂದನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ಫೋಟೋದಲ್ಲಿ ಬೆಂಗಳೂರಿಗೆ ಟ್ಯಾಕ್ಸಿ ಬದಲಿಗೆ ಟೈಟಾನಿಕ್ ಬೋಟ್ ನ ವ್ಯವಸ್ಥೆಯಿದೆ ಎಂದು ಉಲ್ಲೇಖಿಸಿರುವುದನ್ನು ನೋಡಿರಬಹುದು. ಅದಲ್ಲದೇ ಒಂದು ನಿಮಿಷದಲ್ಲೇ ಕೇವಲ 149 ರೂಪಾಯಿಯಲ್ಲಿ ಈ ಟೈಟಾನಿಕ್ ಸೇವೆಯೂ ಸಿಗಲಿದೆ ಎಂದಿರುವುದನ್ನು ನೀವಿಲ್ಲಿ ನೋಡಬಹುದು. ಈ ಪೋಸ್ಟ್ ಮೂಲಕ ಊಬರ್ ಕಂಪೆನಿಯೂ ಬೆಂಗಳೂರಿನ ಪ್ರಸ್ತುತ ಸ್ಥಿತಿಯನ್ನು ಆಡಿಕೊಂಡು ನಕ್ಕಿರುವುದು ಇಲ್ಲಿ ಸ್ಪಷ್ಟವಾಗಿ ಕಾಣಬಹುದು.
ಇದನ್ನೂ ಓದಿ : Video: ಮೂವರ ಪಾಲಿಗೆ ಯಮನಾದ ಕಾರು, ಲಾರಿಗೆ ಡಿಕ್ಕಿ ಹೊಡೆದ ಕಾರು, ಮೂರು ಸಾವು
ಈ ಪೋಸ್ಟ್ ವೊಂದು ಇಪ್ಪತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿದ್ದು ಬಳಕೆದಾರರು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ನಾವು ಸಿದ್ಧರಿದ್ದೇವೆ ಎಂದಿದ್ದಾರೆ. ಇನ್ನೊಬ್ಬರು, ಇದು ಒಳ್ಳೆಯ ಪ್ರಯತ್ನ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಊಬರ್ ಕಂಪೆನಿಯ ಹೊಸ ಸೇವೆಯಾದ ಈ ಟೈಟಾನಿಕ್ ನಲ್ಲಿ ಹೋಗಬೇಡಿ, ಈ ಟೈಟಾನಿಕ್ ನೊಂದಿಗೆ ನೀರಿನಲ್ಲಿ ನೀವು ಮುಳುಗಿ ಹೋಗುವಿರಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:04 pm, Wed, 21 May 25